Advertisement

ಉಚಿತ ಕ್ಲಿನಿಕ್‌ ತೆರೆಯಲು ಶಾಸಕ ಪಾಟೀಲ ಚಿಂತನೆ

05:49 PM Apr 10, 2020 | Team Udayavani |

ಬೆಳಗಾವಿ: ಕೊರೊನಾ ವೈರಸ್‌ದಿಂದ ಜಗತ್ತು ತತ್ತರಿಸಿದೆ. ಈ ಮಹಾಮಾರಿ ಕಾಯಿಲೆ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಲೌಕ್‌ಡೌನ್‌ ಆದೇಶ ಜಾರಿ ಮಾಡಿರುವುದರಿಂದ ದೈನಂದಿನ ಬದುಕು ದುಸ್ತರವಾಗಿದೆ. ಮುಖ್ಯವಾಗಿ ಕಳೆದ 15 ದಿನಗಳಿಂದ ಬಹುತೇಕ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬಂದಾಗಿದ್ದು, ಸಾಮಾನ್ಯ ಸಣ್ಣ ಕಾಯಿಲೆಗಳಾದ ಕೆಮ್ಮು, ನೆಗಡಿ, ಮೈ-ಕೈ ನೋವು ಅನುಭವಿಸುತ್ತಿರುವವರು ದವಾಖಾನೆಗೆ ಹೋಗಿ ಚಿಕಿತ್ಸೆ ಪಡೆಯಲು ತುಂಬಾ ಅನಾನುಕೂಲವಾಗುತ್ತಿದೆ.

Advertisement

ಜನರ ಈ ಗಂಭೀರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೊಸ ಪ್ರಯೋಗ ನಡೆಸಲು ಚಿಂತನೆ ಮಾಡಿದ್ದು, ಉಚಿತ ಕ್ಲಿನಿಕ್‌ ಎಂಬ ಹೊಸ ಕಲ್ಪನೆಗೆ ಚಾಲನೆ ನೀಡಲಾಗುತ್ತಿದೆ. ಸಣ್ಣ ಪುಟ್ಟ ಆರೋಗ್ಯ ಸಂಬಂಧಿ ಔಷಧಿ ಹಾಗೂ ಮಾತ್ರೆಗಳನ್ನು ನೀಡಿ ಜನರಿಗೆ ತುರ್ತು ಚಿಕಿತ್ಸಾ ಕೇಂದ್ರಗಳ ಮಾದರಿಯಲ್ಲಿ ಉಚಿತ ಕ್ಲಿನಿಕ್‌ ತೆರೆಯಲಾಗುತ್ತಿದೆ. ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ 26 ವಾರ್ಡ್ ಗಳ ಸರಕಾರಿ ಶಾಲೆಗಳು ಹಾಗೂ ಮಂಗಲ ಕಾರ್ಯಾಲಯಗಳನ್ನು ಈ ಕ್ಲಿನಿಕ್‌ಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಖಾಸಗಿ ವೈದ್ಯರೊಂದಿಗೆ ಈಗಾಗಲೇ ಸಭೆ ನಡೆಸಿರುವ ಶಾಸಕರು ಆದಷ್ಟು ಬೇಗ ಜನಸಾಮಾನ್ಯರಿಗೆ ಇದರ ಸೌಲಭ್ಯ ಒದಗಿಸುವ  ರವಸೆ ನೀಡಿದ್ದಾರೆ.

ಇದಲ್ಲದೆ ವೈದ್ಯರ ಸುರಕ್ಷತೆ ದೃಷ್ಟಿಯಿಂದ ಬೇಕಾದ ಪಿಪಿಇ ಕಿಟ್‌ ಹಾಗೂ ರೋಗಿಗಳಿಗೆ ತಗಲುವ ಔಷಧಿಗಳನ್ನು ಶಾಸಕ ಅಭಯ ಪಾಟೀಲ ತಮ್ಮ ಸ್ವಂತ ಖರ್ಚಿನಲ್ಲಿ ಕೊಡುವ ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next