Advertisement
ಗೋಕಾಕ ತಾಲೂಕಿನಿಂದ ಬೇರ್ಪಡಿಸಿ ಅಭಿವೃದ್ಧಿ ಮತ್ತು ಆಡಳಿತದ ದೃಷ್ಟಿಯಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಡಲಗಿ ತಾಲೂಕು ಘೋಷಣೆ ಮಾಡಲಾಗಿದೆ. 2018, ಜ.22ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ . 2018, ಜ. 30ರಂದು ತಾಲೂಕಾಗಿ ಉದ್ಘಾಟನೆ ಗೊಂಡಿದೆ.
Related Articles
ಸಮಾಜ ಕಲ್ಯಾಣ ಅಧಿಕಾರಿ, ಅಬಕಾರಿ ನಿರೀಕ್ಷಕರ ಕಚೇರಿ, ಕೃಷಿ ನಿರ್ದೇಶಕರ ಕಚೇರಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಇನ್ನೂ ಅನೇಕ ಕೆಲಸಗಳಿಗಾಗಿ ಗೋಕಾಕಕ್ಕೆ ಅಲೆದಾಡಬೇಕಾದ ಸ್ಥಿತಿ ಇದೆ. ಉಪ ನೋಂದಣಿ ಕಚೇರಿಯಾದರೆ ಬಹುತೇಕ ಈ ಭಾಗದ ಜನರ ಅರ್ಧದಷ್ಟು ಕೆಲಸ ಮೂಡಲಗಿಯಲ್ಲಿಯೇ ಆಗುತ್ತದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಡತವನ್ನು ಹಣಕಾಸು ಕಾರ್ಯದರ್ಶಿಗಳಿಗೆ ನೀಡಿದ್ದಾರೆ.
Advertisement
ಅಲ್ಲಿಂದ ಅನುಮೋದನೆ ಪಡೆದುಕೊಂಡರೆ ಕೇವಲ15-20 ದಿನಗಳ ಅವಧಿಯಲ್ಲಿಯೇ ಈ ಕಚೇರಿ ಮೂಡಲಗಿಗೆ ಬರುವುದು ಖಚಿತ. ಮಿನಿ ವಿಧಾನಸೌಧ ನಿರ್ಮಾಣವಾದರೆ ಬಹುತೇಕ ಎಲ್ಲ ಕಚೇರಿಗಳು ಇಲ್ಲಿ ವರ್ಗಾವಣೆ ಆಗುತ್ತವೆ. ಈಗಾಗಲೇ ಯಾವುದೇ ಸ್ವಂತ ಜಾಗ ಇಲ್ಲದೇ ಬೆರಳೆಣಿಕೆಯಷ್ಟು ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ತಹಶೀಲ್ದಾರ್ ಕಚೇರಿಯಲ್ಲೂ ಸಿಬ್ಬಂದಿ ಕೊರತೆ ಇದೆ. ರೇಷನ್ ಕಾರ್ಡ್‌ಗಳನ್ನು ತಯಾರಿಸಿ ಕೊಡಲಾಗುತ್ತಿದೆ. ಒಟ್ಟು 18 ಗ್ರಾಪಂಗಳು ಈ ತಾಲೂಕಿನಲ್ಲಿವೆ. ಅರಭಾವಿ ಹಾಗೂ ಕೌಜಲಗಿ ಎರಡು ಹೋಬಳಿಗಳಿವೆ.