Advertisement

ಬೆಳಗಾವಿ ಉತ್ತರ-ದಕ್ಷಿಣದಲ್ಲಿ ಅದಲು-ಬದಲು ರಾಜಕೀಯ

12:15 AM Feb 21, 2023 | Team Udayavani |

ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಧಾನಸಭೆ ಚುನಾವಣೆಯ ಜ್ವರ ನಿಧಾನವಾಗಿ ಆರಂಭವಾಗಿದೆ. ಜತೆಗೆ ಗಾಳಿ ಸುದ್ದಿಗಳು ಸಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ.

Advertisement

ಕಾಂಗ್ರೆಸ್‌ಗಿಂತ ಬಿಜೆಪಿ ವಲಯದಲ್ಲಿ ಈ ರೀತಿಯ ಗಾಸಿಪ್‌ ಸುದ್ದಿಗಳು ಹೆಚ್ಚು ಕಾಣುತ್ತಿರುವುದು ವಿಶೇಷ. ಇದಕ್ಕೆ ಅನುಗುಣವಾಗಿ ಈಗ ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅದಲು ಬದಲು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಹು ಚರ್ಚೆಗೆ ಕಾರಣವಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮರಾಠಿ ಭಾಷಿಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಜೈನ ಸಮುದಾಯದ ಹಾಲಿ ಶಾಸಕ ಅಭಯ ಪಾಟೀಲ ಅವರನ್ನು ಅಲ್ಲಿಂದ ಬದಲಾಯಿಸಿ ಅವರಿಗೆ ಬೆಳಗಾವಿ ಗ್ರಾಮೀಣ ಟಿಕೆಟ್‌ ಕೊಡಬೇಕು.

ಮರಾಠಾ ಸಮುದಾಯದ ಹಾಲಿ ಶಾಸಕ ಅನಿಲ ಬೆನಕೆ ಅವರನ್ನು ಬೆಳಗಾವಿ ಉತ್ತರದ ಬದಲಾಗಿ ದಕ್ಷಿಣದಿಂದ ಕಣಕ್ಕಿಳಿಸಬೇಕು. ಬೆಳಗಾವಿ ಉತ್ತರಕ್ಕೆ ಲಿಂಗಾಯತ ಸಮುದಾಯದವರಿಗೆ ಟಿಕೆಟ್‌ ಕೊಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಬೆಳಗಾವಿ ಉತ್ತರ ಮತ್ತು ದಕ್ಷಿಣ ಈಗ ಬಿಜೆಪಿಯ ಭದ್ರಕೋಟೆ. ಈ ಎರಡೂ ಕೋಟೆಗಳಲ್ಲಿ ಮರಾಠಿ ಭಾಷಿಕ ಮತದಾರರು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದೇ ಕಾರಣದಿಂದ ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮತ್ತು ಉಪ ಮಹಾಪೌರ ಸ್ಥಾನಗಳೆರಡನ್ನೂ ಮರಾಠಿ ಭಾಷಿಕರಿಗೆ ನೀಡಿದೆ. ಈಗ ಇದನ್ನೇ ಮುಂದೆ ಮಾಡಿಕೊಂಡು ಕೆಲವು ಮರಾಠಿ ಭಾಷಿಕರು ಬೆಳಗಾವಿ ದಕ್ಷಿಣದಲ್ಲಿ ಮರಾಠಿ ಭಾಷಿಕರಿಗೆ ಟಿಕೆಟ್‌ ನೀಡಬೇಕು. ಈ ಹಿಂದೆ ಬಾಗೇವಾಡಿ (ಈಗ ಬೆಳಗಾವಿ ಗ್ರಾಮೀಣವಾಗಿ ಬದಲಾಗಿದೆ) ಕ್ಷೇತ್ರದಿಂದ ಗೆದ್ದು ಬಂದಿದ್ದ ಅಭಯ ಪಾಟೀಲರಿಗೆ ಮತ್ತೆ ಅಲ್ಲಿಯೇ ಟಿಕೆಟ್‌ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next