Advertisement

14 ತಿಂಗಳ ಸೇವಾವಧಿ ತೃಪ್ತಿ  ತಂದಿದೆ: ಡಾ|ರಾಜಪ್ಪ

10:52 AM Feb 23, 2019 | |

ಬೆಳಗಾವಿ: ಮಹಾನಗರ ಪೊಲೀಸ್‌ ಆಯುಕ್ತರಾಗಿ 14 ತಿಂಗಳ ಅವಧಿಯಲ್ಲಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ಇಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ತೃಪ್ತಿ ಇದೆ ಎಂದು ವರ್ಗಾವಣೆಗೊಂಡ ನಿಕಟಪೂರ್ವ ಪೊಲೀಸ್‌ ಕಮಿಷನರ್‌ ಡಾ| ಡಿ.ಸಿ. ರಾಜಪ್ಪ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ಹಂತದಲ್ಲಿ  ನಗರ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿರುವುದು ತೃಪ್ತಿ ತಂದಿದೆ. ಕೆಲ ಕಾರ್ಯಸೂಚಿ ಹಾಕಿಕೊಂಡು ರಸ್ತೆ ಸುರಕ್ಷತೆ, ಸಂಚಾರ ನಿಯಂತ್ರಣ ಜಾಗೃತಿ, ಮಾದಕ ವಸ್ತು ಬಳಕೆ ನಿಯಂತ್ರಣಕ್ಕೆ ತರಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಅಗತ್ಯ  ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೆಳಗಾವಿ ನಗರಕ್ಕೆ ಆಗಮಿಸಿದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರು ಸೇರಿದಂತೆ ಗಣ್ಯಾತಿಗಣ್ಯರ ಭದ್ರತೆಗೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಚಳಿಗಾಲ ಅಧಿವೇಶನ ವೇಳೆಯೂ ಕಳೆದ ಸಲಕ್ಕಿಂತಲೂ ಈ ಬಾರಿ 45 ಲಕ್ಷ ರೂ. ಉಳಿತಾಯ ಮಾಡಲಾಗಿತ್ತು. 4 ಸಾವಿರ ಪೊಲೀಸ್‌ ಸಿಬ್ಬಂದಿಗೆ ಊಟ, ವಸತಿ ಸೇರಿದಂತೆ ಮೂಲ ಸೌಲಭ್ಯಗಳ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು ಎಂದು ತಿಳಿಸಿದರು.

ಪೊಲೀಸ್‌ ಸಿಬ್ಬಂದಿ ವಾಸ್ತವ್ಯಕ್ಕಾಗಿ ಕಲ್ಯಾಣ ಮಂಟಪಕ್ಕಾಗಿ 22 ಲಕ್ಷ ರೂ. ಬಾಡಿಗೆ, ಕುಡಿಯುವ ನೀರಿನ 12 ಲಕ್ಷ ರೂ. ಹಾಗೂ ಬಿಸಿ ನೀರಿನ 12 ಲಕ್ಷ ರೂ. ಉಳಿತಾಯ ಮಾಡಲಾಗಿದೆ. ವಸತಿಗಾಗಿ ಈ ಬಾರಿ ಕೆಎಸ್‌ಆರ್‌ಪಿ, ಸರಕಾರಿ ವಸತಿ ಕೇಂದ್ರಗಳು, ಆರ್‌ಒ ಕುಡಿಯುವ ನೀರಿನ ಘಟಕ ಹಾಗೂ ಬಿಸಿ ನೀರಿಗಾಗಿ ಸೋಲಾರ, ಸೌದೆಗಳನ್ನು ಬಳಸಿದ್ದರಿಂದ 45 ಲಕ್ಷ ಉಳಿಸಲಾಗಿದೆ ಎಂದು ತಿಳಿಸಿದರು. ನನ್ನ ಅವಧಿಯಲ್ಲಿ ಪೊಲೀಸ್‌ ಆಯುಕ್ತರ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮ ಆಗದಿದ್ದರೂ 17 ಕೋಟಿ ರೂ. ಪ್ರಸ್ತಾವನೆಗೆ ಆಡಳಿತಾತ್ಮಕ ಮಂಜೂರಾತಿ ಪಡೆದುಕೊಳ್ಳಲಾಗಿದೆ. ಪ್ರಧಾನ ಕಚೇರಿಯಿಂದ ಆರ್ಥಿಕ ಇಲಾಖೆಗೆ ಕಳುಹಿಸಿಲಾಗಿದ್ದು, ಅಲ್ಲಿಂದ ಅನುಮತಿ ಬಂದರೆ ಶಂಕುಸ್ಥಾಪನೆ ಆಗಲಿದೆ ಎಂದರು.

ಪೊಲೀಸ್‌ ಸಿಬ್ಬಂದಿಗೆ 712 ವಸತಿ ಗೃಹಗಳನ್ನು ಐದು ಹಂತದಲ್ಲಿ ನಿರ್ಮಿಸಲಾಗುವುದು. ಈಗಾಗಲೇ ಜಾಗ ಗುರುತಿಸಿ ನಿಗದಿಪಡಿಸಲಾಗಿದೆ. ಸದ್ಯ ಆರು ತಿಂಗಳೊಳಗೆ 150 ವಸತಿಗೃಹಗಳು ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.

Advertisement

ಪೊಲೀಸ್‌ ಆಯುಕ್ತ ಡಾ| ಡಿ.ಸಿ. ರಾಜಪ್ಪ ವರ್ಗಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಪೊಲೀಸ್‌ ಮೈದಾನದಲ್ಲಿ ಸೇವಾ ಕವಾಯತ್ತು ಆಯೋಜಿಸಲಾಗಿತ್ತು. ನಂತರ ತೆರೆದ ವಾಹನದಲ್ಲಿ ಡಾ| ರಾಜಪ್ಪ ಅವರು ಗೌರವ ವಂದನೆ ಸ್ವೀಕರಿಸಿದರು. ಡಿಸಿಪಿಗಳಾದ ಸೀಮಾ ಲಾಟ್ಕರ್‌ ಹಾಗೂ ಮಹಾನಿಂಗ ನಂದಗಾಂವಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next