Advertisement
14 ನಗರ ಸ್ಥಳೀಯ ಸಂಸ್ಥೆಗಳ 343 ವಾರ್ಡುಗಳ ಪೈಕಿ 14 ಕಡೆಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಒಟ್ಟಾರೆಫಲಿತಾಂಶದಲ್ಲಿ ಪಕ್ಷೇತರ ಅಭ್ಯರ್ಥಿಗಳು 144 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ತೃಪ್ತಿಪಟ್ಟಿದೆ. ಜೆಡಿಎಸ್ ಅಭ್ಯರ್ಥಿಗಳು ಕೇವಲ 10 ಕಡೆ ಮಾತ್ರ ಜಯಗಳಿಸಿ ಮುಖಭಂಗ ಅನುಭವಿಸಿದ್ದಾರೆ. ಸಂಕೇಶ್ವರ ಪುರಸಭೆ ಹಾಗೂ ನಿಪ್ಪಾಣಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ನಾಲ್ಕು ಕಡೆ ಪಕ್ಷೇತರರು ಅಧಿಕ ಸಂಖ್ಯೆಯಲ್ಲಿ ಜಯಗಳಿಸಿ ಅಧಿಕಾರ ಹಿಡಿಯುತ್ತಿದ್ದಾರೆ. ಗೋಕಾಕ ನಗರಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಗುಂಪು ಮೇಲುಗೈ ಸಾಧಿಸಿದೆ. ಅದೇ ಕೊಣ್ಣೂರ ಪುರಸಭೆಯಲ್ಲಿ ಸಹ ರಮೇಶ ಜಾರಕಿಹೊಳಿ ಗುಂಪು ಮತ್ತೆ ಅಧಿಕಾರಕ್ಕೆ ಬಂದಿದೆ.
Related Articles
Advertisement
ನಿಪ್ಪಾಣಿ ನಗರಸಭೆಯಲ್ಲಿ ಯಾರಿಗೂ ಸ್ಪಷ್ಟಬಹುಮತ ಬರದೇ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಒಟ್ಟು 31 ಸ್ಥಾನಗಳಪೈಕಿ 13 ಸ್ಥಾನಗಳಿಸಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಆರು ಸ್ಥಾನಗಳಿಸಿರುವ ಪಕ್ಷೇತರರ ಮೇಲೆ ಅವಲಂಬಿಸುವಂತಾಗಿದೆ. ಪಕ್ಷೇತರರಲ್ಲಿ ಕೆಲವರು ಬಿಜೆಪಿ ಬೆಂಬಲಿತರಾಗಿರುವುದರಿಂದ ಅಧಿಕಾರ ರಚನೆಗೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಸಂಕೇಶ್ವರ ಪುರಸಭೆಯಲ್ಲೂ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನ ಗಳಿಸಿದ್ದು, ಒಂದು ಕಡೆ ಜಯಗಳಿಸಿರುವ ಪಕ್ಷೇತರ ಅಭ್ಯರ್ಥಿನಿರ್ಣಾಯಕರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹ ಪಕ್ಷೇತರರೇ ಮೇಲುಗೈ ಸಾಧಿಸಿದ್ದು, ಏಳು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರಾಗಿ ಅಧಿಕಾರ ರಚನೆ ಮಾಡಿದ್ದರು. ಬಿಜೆಪಿ ಐದು ಕಡೆ ಬಹುಮತ ಪಡೆದು ಅಧಿಕಾರ ಮಾಡಿದ್ದರೆ ಕಾಂಗ್ರೆಸ್ ಎರಡು ಕಡೆ ಬಹುಮತ ಗಳಿಸಿತ್ತು.