ಬೆಳಗಾವಿ: ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಹತ್ತಾರು ಸಂಕಷ್ಟಗಳ ನಡುವೆ ದಶಕಗಳಿಂದ ಜೀವನ ಸಾಗಿಸುತ್ತಿದ್ದ ಅರಣ್ಯವಾಸಿಗಳನ್ನು ನಾಡಿಗೆ ಕರೆತರುವ ಕಾಲ ಸನ್ನಿಹಿತವಾಗಿದೆ. ಮಳೆಗಾಲದಲ್ಲಿ ಗೋವಾ, ಉಳಿದ ಅವಧಿಯಲ್ಲಿ ಕರುನಾಡಿನಲ್ಲಿ ನೆಲೆಸುವ ಒಟ್ಟು 13 ಹಳ್ಳಿಗಳ ಜನರನ್ನು ನಾಡಿಗೆ ಸ್ಥಳಾಂತರಿಸಿ ಪುನರ್‌ವಸತಿ ಕಲ್ಪಿಸಬೇಕು ಎಂಬ ದಶಕದ ಹಿಂದಿನ ಯೋಜನೆ ಫಲ ನೀಡುತ್ತಿದೆ.
Advertisement
ಸರ್ಕಾರದ ಪ್ಯಾಕೇಜ್ ಒಪ್ಪಿ ತಳೇವಾಡಿ ಗ್ರಾಮದ ಜನತೆ ನಗರಕ್ಕೆ ಸ್ಥಳಾಂತರಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಇನ್ನುಳಿದ 12 ಗ್ರಾಮಗಳ ಜನರ ಮನವೊಲಿಕೆ ನಡೆಯುತ್ತಿದೆ. ಈ 13 ಹಳ್ಳಿಗಳಲ್ಲಿ ತಲೆತಲಾಂತರದಿಂದ ಗ್ರಾಮಸ್ಥರು ವಾಸಿಸುತ್ತಿದ್ದಾರೆ. ಸ್ವಂತ ಮನೆ ಹಾಗೂ ಜಮೀನು ಹೊಂದಿದ್ದಾರೆ. ಸುಮಾರು 3000 ಜನಸಂಖ್ಯೆ ಇದೆ. 1,500 ಜಾನುವಾರುಗಳಿವೆ. ದಟ್ಟ ಕಾಡಿನಲ್ಲಿ ಜನ-ಜಾನುವಾರುಗಳಿಗೆ ಕಾಡುಪ್ರಾಣಿಗಳ ದಾಳಿಯ ಆತಂಕ ನಿರಂತರವಾಗಿದೆ. ನೆರೆಯ ಗೋವಾದ ಮೇಲೆ ಹೆಚ್ಚು ಅವಲಂಬನೆಯಾಗಿದ್ದಾರೆ. ಮಳೆಗಾಲದ 4 ತಿಂಗಳು ಗೋವಾದಲ್ಲೇ ಇವರ ವಾಸ.
Related Articles
ಕೊಂಗಳಾ, ಪಾಸ್ತೋಲಿ, ಕಳಲೆ, ಕೃಷ್ಣಾಪುರ, ಹೊಳ್ಳಾ, ದೇಗಾಂವ, ಮೆಂಡಿಲ್, ಚಾಮಗಾಂವ, ಹೆಮ್ಮಡಗಾ- ಪಾಳಿ, ಅಬನಾಳಿ ಹಾಗೂ ಆಮಗಾಂವ್ ಹಳ್ಳಿಗಳಲ್ಲಿ ಸಮೀಕ್ಷೆ ನಡೆಸಿದ್ದರು. ಆದರೆ ಸ್ಥಳಾಂತರ ಪ್ರಾರಂಭವಾಗಲಿಲ್ಲ. ಈಗ ಅರಣ್ಯ ಇಲಾಖೆ ಅಧಿಕಾರಿಗಳ ಮನವೊಲಿಕೆ ಫಲ ನೀಡಿದೆ. ತಳೇವಾಡಿ ಗ್ರಾಮದ ಜನರು ಅರಣ್ಯ ಬಿಟ್ಟು ಬರಲು ಸಿದ್ಧರಾಗಿದ್ದಾರೆ. ವಿಶೇಷವಾಗಿ ಯುವ ಸಮುದಾಯ ಸ್ಥಳಾಂತರಕ್ಕೆ ಮನಸ್ಸು ಮಾಡಿದೆ. ಪುನರ್ವಸತಿ ಯೋಜನೆಯಂತೆ 18 ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಗೆ ತಲಾ 18 ಲಕ್ಷ ಪರಿಹಾರ ಸಿಗಲಿದೆ.
Advertisement
ಏನಿದು ಪುನರ್ ವಸತಿ ಪ್ಯಾಕೇಜ್?*ಖಾನಾಪುರ ತಾಲೂಕಿನ ದಟ್ಟಾರಣ್ಯದಲ್ಲಿ ವಾಸಿಸುತ್ತಿರುವ 13 ಗ್ರಾಮಗಳ ಜನರು
*3 ಸಾವಿರ ಜನ, 1500 ಜಾನುವಾರು ವಾಸ *ಮಳೆಗಾಲದ 4 ತಿಂಗಳು ಗೋವಾ, ಇನ್ನುಳಿದ 8 ತಿಂಗಳು ಕರ್ನಾಟಕದಲ್ಲಿ ವಾಸ
*ಪುನರ್‌ವಸತಿಗೆ ತಳ್ಳೇವಾಡಿ ಜನ ಒಪ್ಪಿಗೆ, ಉಳಿದ 12 ಗ್ರಾಮದವರ ಮನವೊಲಿಕೆ
●ಮಹೇಶ ಮರೆನ್ನವರ,
ಆರ್‌ಎಫ್‌ಒ, ಖಾನಾಪುರ
●ವಿಠಲ ಹಲಗೇಕರ, ಶಾಸಕ, ಖಾನಾಪುರ ■ ಕೇಶವ ಆದಿ