Advertisement

ಆಹಾರ ಇಲ್ಲದೇ ರೋದಿಸುತ್ತಿವೆ ಗೋವುಗಳು

04:55 PM Apr 07, 2020 | Naveen |

ಬೆಳಗಾವಿ: ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‌ಡೌನ್‌ ವಿಧಿಸಿದ್ದರಿಂದ ನಗರದಲ್ಲಿರುವ ನೂರಾರು ಗೋವುಗಳು ಹಸಿವಿನಿಂದ ಬಳಲುತ್ತಿವೆ. ನಗರದ ಬಹುತೇಕ ಕಡೆಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ತಿರುಗಾಡುವ ಗೋವುಗಳು, ಬಿಡಾಡಿ
ದನಗಳು ಅಲ್ಲಿ-ಇಲ್ಲಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಈಗ ಲಾಕ್‌ ಡೌನ್‌ ಆಗಿದ್ದರಿಂದ ಎಲ್ಲವೂ ಬಂದ್‌ ಆಗಿದ್ದು, ಹೀಗಾಗಿ ಗೋವುಗಳಿಗೆ ತಿನ್ನಲು ಏನೂ ಇಲ್ಲದೇ ಆಕ್ರಂದನ ಹೆಚ್ಚಿದೆ.

Advertisement

ಗೋವುಗಳ ಮೂಕ ವೇದನೆ ಯಾರಿಗೂ ಕೇಳಿಸುತ್ತಿಲ್ಲ. ಈ ಮೊದಲು ಮಾರುಕಟ್ಟೆಯಲ್ಲಿ
ಅಳಿದುಳಿದ ತರಕಾರಿ, ಹಣ್ಣು, ಕಾಯಿ ಪಲ್ಯೆಗಳನ್ನು ಅಂಗಡಿಕಾರರು ಎಸೆದು ಹೋಗುತ್ತಿದ್ದರು. ರಾತ್ರಿ ಎಲ್ಲ ಕಡೆಗೆ ತಿರುಗಾಡುವ ಗೋವುಗಳು ಇದನ್ನೇ ತಿನ್ನುತ್ತಿದ್ದವು. ನಗರದ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ, ಖಡೇಬಜಾರ, ಸಮಾದೇವಿ ಗಲ್ಲಿ, ಕಾಕತಿವೇಸ್‌, ಕಡೋಲಕರ ಗಲ್ಲಿ, ಹುತಾತ್ಮ ಚೌಕ್‌,
ನರಗುಂದಕರ ಭಾವೆ ಚೌಕ್‌ ಸೇರಿದಂತೆ ಎಲ್ಲ ಕಡೆಯೂ ಗೋವುಗಳಿಗೆ ತಿನ್ನಲು ಏನಾದರೂ ಸಿಗುತ್ತಿತ್ತು. ಈಗ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ಏನೂ ಇಲ್ಲದೇ ಗೋವುಗಳು ಪರದಾಡುತ್ತಿವೆ.

ಮಾರುಕಟ್ಟೆಗಳಲ್ಲಿ ಜನರೂ ಬರುತ್ತಿಲ್ಲ, ಅಂಗಡಿಕಾರರೂ ಇಲ್ಲ. ಮಾರುಕಟ್ಟೆ ಪ್ರದೇಶಗಳ ಸುತ್ತಲೂ ಅಲ್ಲಲ್ಲಿ ಪೊಲೀಸರು ಬ್ಯಾರಿಕೇಟ್‌ಗಳನ್ನು ಹಾಕಿ ಮಾಗ್‌ ಬಂದ್‌ ಮಾಡಿದ್ದಾರೆ. ಬೇರೆ ಕಡೆಗೆ ಹೋಗಲೂ ಗೋವುಗಳು ಪರದಾಡುತ್ತಿವೆ. ಹಸಿವಿನಿಂದ ಕೆಲವು ಗೋವುಗಳು ಕಣ್ಣೀರು ಸುರಿಸುತ್ತಿವೆ. ಹೀಗಾಗಿ ಈ ಗೋವುಗಳ ಸ್ಥಿತಿ ಶೋಚನೀಯವಾಗಿದೆ. ಹೊಟ್ಟೆಗೆ ಏನೂ ಇಲ್ಲದೇ ಕಣ್ಣೀರು ಹಾಕುತ್ತಿರುವ ಈ ಗೋವುಗಳ ಹಸಿವು ನೀಗಿಸಲು ಗೋ ರಕ್ಷಕರು ಗಮನ ಹರಿಸಬೇಕಾಗಿದೆ. ಗೋವುಗಳ ನೋವಿಗೆ ಸ್ಪಂದಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next