Advertisement

ಅಂಬೇಡ್ಕರ ಅವರ ವಿಚಾರಗಳು ಅಜರಾಮರವಾಗಿ ಉಳಿಯಲಿವೆ- ಸಂಸದ Iranna Kadadi

10:49 AM Apr 14, 2023 | Team Udayavani |

ಮೂಡಲಗಿ: ದೇಶದ ಪ್ರತಿಯೊಬ್ಬ ನಾಗರಿಕನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆದು ದೇಶದ ಅಭಿವೃದ್ದಿಗಾಗಿ ಸರ್ವರೂ ಕೊಡುಗೆ ನೀಡಬಲ್ಲ ವ್ಯವಸ್ಥೆಯನ್ನು ಜಾರಿಗೆ ತರಲು ಸಂವಿಧಾನವನ್ನು ರಚಿಸಿದ ಧೀಮಂತ ನಾಯಕ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

Advertisement

ಶುಕ್ರವಾರದಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ 132 ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಡಾ. ಬಿ.ಆರ್. ಅಂಬೇಡ್ಕರ ಅವರು ತಾವು ಜನಿಸಿದ ಕುಟುಂಬದಲ್ಲಿನ ಕೀಳರಿಮೆಯ ಮನಸ್ಥಿತಿ ಮತ್ತು ಬಡತನವನ್ನು ಮೆಟ್ಟಿನಿಂತು ಅಗಾದವಾದ ಅಧ್ಯಯನದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ತರುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿದರು ಎಂದರು.

ಕೇಂದ್ರ ಸರ್ಕಾರ ಡಾ. ಅಂಬೇಡ್ಕರ್ ಅವರ ಜೀವನದಲ್ಲಿನ ಐದು ಪ್ರಮುಖ ಸ್ಥಳಗಳನ್ನು ಪಂಚ ತೀರ್ಥ ಕ್ಷೇತ್ರ ಎಂದು ಘೋಷಿಸಿ ಅಭಿವೃದ್ಧಿ ಪಡಿಸುತ್ತಿದೆ ಎಂದರಲ್ಲದೇ ಸ್ವತಂತ್ರ ನಂತರ ನಮ್ಮ ದೇಶಕ್ಕೆ ಸಂವಿಧಾನ ರಚಿಸಿ ದೇಶಕ್ಕೆ ಅತ್ಯಮೂಲ್ಯ ಕೊಡಗೆ ನೀಡಿದ ಮಹಾಚಿಂತಕ ಡಾ. ಬಿ.ಆರ್. ಅಂಬೇಡ್ಕರ ವಿಚಾರಗಳು ಅಜರಾಮರವಾಗಿ ಉಳಿಯಲಿವೆ ಎಂದರು.

ಗಿರಮಲ್ಲಪ್ಪ ಸಂಸುದ್ದಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಈರಣ್ಣ ಮುನ್ನೋಳಿಮಠ, ಹಣಮಂತ ಕೌಜಲಗಿ, ಶಂಕರ ಗೊರೋಶಿ, ಅಡಿವೆಪ್ಪ ಕುರಬೇಟ, ಮಂಜುಳಾ ಹಿರೇಮಠ, ಪರಪ್ಪ ಮಳವಾಡ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಸೋಮಲಿಂಗ ಹಡಗಿನಾಳ, ಗುರುನಾಥ ಮದಭಾಂವಿ, ಶಿವಲಿಂಗ ಕುಂಬಾರ, ಶ್ರೀಕಾಂತ ಕೌಜಲಗಿ, ಶ್ರೀಶೈಲ ಪೂಜೇರಿ, ಗುರು ಹಿರೇಮಠ, ಹಣಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜಿನಕೊಪ್ಪ ಸೇರಿದಂತೆ ಅನೇಕ ಸಹಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next