ಬೆಳಗಾವಿ : ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತದಾನಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಆಮೆಗತಿಯಲ್ಲಿ ಮತದಾರರು ತಮ್ಮ ಬೂತ್ ಗೆ ಬಂದು ಮತ ಚಲಾಯಿಸುತ್ತಿದ್ದಾರೆ.
ಮುಂಜಾನೆ ಮತದಾನ ಪ್ರಕ್ರಿಯೆ ತುಸು ನಿಧಾನವಾಗಿ ಸಾಗಿತ್ತಾದ್ದರೂ, ಮಧ್ಯಾಹ್ನದ ವೇಳೆ ಸ್ವಲ್ಪ ಬಿರುಸಾಗಿ ಮತದಾರರು ಮತವನ್ನು ಚಲಾಯಿಸಿದರು. ಮಧ್ಯಾಹ 3 ಗಂಟೆಯ ವೇಳೆ ಶೇ. 35.55 ರಷ್ಟು ಮತದಾನ ದಾಖಲಾಗಿತ್ತು. ಸಂಜೆಯ ವೇಳೆಗೆ ಚುರುಕು ಗತಿಯಲ್ಲಿ ಮತದಾನವಾಗುವ ನಿರೀಕ್ಷೆ ಇತ್ತು. ಆದರೆ ಅದು ನಿರಾಶೆ ಆಗಿದೆ.
ಇದನ್ನೂ ಓದಿ : ಪಶ್ಚಿಮಬಂಗಾಳ; 5ನೇ ಹಂತ ಬಹುತೇಕ ಶಾಂತಿಯುತ ಮತದಾನ, ಕೆಲವೆಡೆ ಘರ್ಷಣೆ
ಸಂಜೆ 5 ಗಂಟೆಗೆ ಬಂದ ವರದಿಯ ಪ್ರಕಾರ ಶೇ.46.70 ರಷ್ಟು ಮತದಾನವಾಗಿದ್ದು. ಮತದಾರರು ರಾಜಕೀಯ ಪಕ್ಷಗಳ ದಾಳಕ್ಕೆ ಮಣಿಯದೇ ಮತ ಯಂತ್ರದತ್ತ ತೀರಾ ನಿರಾಸಕ್ತಿ ಬರಲು ತೋರಿಸಿದ್ದಾರೆ. ಮತದಾನ ಮಾಡಲು ಎಲ್ಲಾ ರೀತಿಯ ಕೋವಿಡ್ ಮುಂಜಾಗ್ರತ ಕ್ರಮವನ್ನು ವಹಿಸಲಾಗಿದ್ದರೂ, ಅಷ್ಟಾಗಿ ಜನಜಂಗುಳಿ ಕಂಡು ಬಂದಿಲ್ಲ.
ಬೆಳಗಾವಿಯಲ್ಲಿ ಘಟಾನುಘಟಿ ರಾಜಕೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೂ ಮತದಾರ ಮತದಾನ ಮಾಡಲು ಆಸಕ್ತಿ ತೋರಿಸದೇ ಇರುವುದು ಅಚ್ಚರಿಯ ವಿಷಯ.