ರಾಮದುರ್ಗ: ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಸತೀಶ ಜಾರಕಿಹೊಳಿ ಕೊಡುಗೆ ಅಪಾರವಾಗಿದೆ. ಒಳ್ಳೆಯ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಲ್ಲಿಸಲಾಗಿದ್ದು, ಕಾಂಗ್ರೆಸ್‌ಪಕ್ಷಕ್ಕೆ ಮತ ನೀಡಿ ಬದಲಾವಣೆಪ್ರಾರಂಭಕ್ಕೆ ಮುಂದಾಗಬೇಕು ಎಂದುಮಾಜಿ ಸಚಿವ ಎಚ್ ಎಂ.ರೇವಣ್ಣ ಮನವಿ ಮಾಡಿದರು.
ತಾಲೂಕಿನ ಹುಲಕುಂದ, ಸಾಲಹಳ್ಳಿ,ಚುಂಚನೂರ, ಮಲ್ಲಾಪೂರ,ತೂರನೂರ, ಸಾಲಾಪೂರ, ಇಡಗಲ್,ಲಿಂಗದಾಳ, ಅವರಾದಿ ಸೇರಿದಂತೆಅನೇಕ ಗ್ರಾಮಗಳಲ್ಲಿ ಬೆಳಗಾವಿಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶಜಾರಕಿಹೊಳಿ ಪರವಾಗಿ ಮತಯಾಚನೆಮಾಡಿ ಅವರು ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಸರ್ಕಾರಗಳು ಸುಳ್ಳು ಭರವಸೆಗಳನ್ನುನೀಡುತ್ತಾ ಜನರಿಗೆ ಮೋಸ ಮಾಡುತ್ತಿವೆ.ಇಂತಹವರಿಗೆ ತಕ್ಕ ಪಾಠ ಎಲ್ಲಮತದಾರರು ಕಲಿಸಬೇಕು. ಕಾಂಗ್ರೆಸ್‌ಸರ್ಕಾರ ದೇಶದ ಸುದೀ ರ್ಘ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಮಾಡುತ್ತಾ ಅನೇಕ ಕೈಗಾರಿಕೆ ಮತ್ತು ತಾಂತ್ರಿಕಸಂಸ್ಥೆಗಳನ್ನು ಕಟ್ಟಿ ಬಲಿಷ್ಠ ಮಾಡಿದೆ.ಆದರೆ ಇಂದು ಆಡಳಿತ ಮಾಡುತ್ತಿರುವಉಭಯ ಸರ್ಕಾರಗಳು ಎಲ್ಲವನ್ನು ಮಾರುತ್ತ ಹೊರಟಿವೆ. ಹೀಗೆಯೇ ಮುಂದುವರಿದರೆ ನಮ್ಮ ದೇಶಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆಎಂದು ಆರೋಪಿಸಿದರು.
ಮಾಜಿ ಶಾಸಕ ಅಶೋಕ ಪಟ್ಟಣ ಮಾತನಾಡಿ,ಕೋವಿಡ್ ನೆಪದಲ್ಲಿ ರಾಜ್ಯದಅಭಿವೃದ್ಧಿ ಕುಂಠಿತವಾಗಿದೆ. ಇಂತಹಕೆಟ್ಟ ಸರ್ಕಾರವನ್ನು ನಾವು ಎಂದೂನೋಡಿಲ್ಲ. ಉತ್ತಮ ನಾಯಕ ಸತೀಶಜಾರಕಿಹೊಳಿಯವರಿಗೆ ಮತ ನೀಡಿಲೋಕಸಭೆಗೆ ಕಳಿಸಬೇಕು ಎಂದು ಮನವಿ ಮಾಡಿದರು.
ಶಾಸಕಿ ಕುಸುಮಾ ಶಿವಳ್ಳಿ, ಡಾ|ರಾಜೇಂದ್ರ ಸಣ್ಣಕ್ಕಿ, ರಕ್ಷಿತಾ ಈಟಿ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನಗೌಡ್ರ,ಸೋಮಶೇಖರ ಸಿದ್ದಲಿಂಗಪ್ಪನವರ,ರಾಯಪ್ಪ ಕತ್ತಿ, ರಮೇಶ ಅಣ್ಣಿಗೇರಿ, ಕೆಂಪಣ್ಣ ಕ್ವಾರಿ, ಫಕೀರಪ್ಪ ಕೊಂಗವಾಡ,ಅಶೋಕ ಮೆಟಗುಡ್ಡ, ಇತರರಿದ್ದರು.