Advertisement

ಸ್ಥಳೀಯ ಸರಕಾರಕ್ಕೆ ಪರಮಾಧಿಕಾರ ನೀಡಲು ಆಗ್ರಹ; ದೇವಿಪ್ರಸಾದ್‌ ಶೆಟ್ಟಿ ಬೆಳಪು

12:04 AM Aug 28, 2022 | Team Udayavani |

ಕಾಪು: ಗ್ರಾಮ ಪಂಚಾಯತ್‌ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಪ್ರಮುಖ ವ್ಯಕ್ತಿಗಳಾಗಿರುತ್ತಾರೆ. ಜನರು ಸಮಸ್ಯೆ ಎದುರಿಸಿದಾಗ ಶಾಸಕ, ಮಂತ್ರಿಗಳ ಹತ್ತಿರ ಹೋಗುವುದಿಲ್ಲ, ಗ್ರಾಮಸ್ಥರು ಮೊದಲು ಹೋಗಿ ತಮ್ಮ ಸಮಸ್ಯೆಗಳನ್ನು ಹೇಳುವುದು ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು ಅಥವಾ ಸದಸ್ಯರ ಬಳಿ. ಆದ್ದರಿಂದ ಸರಕಾರ ಗ್ರಾ.ಪಂ.ಗೆ ಇರುವ ಶಾಸನಬದ್ಧ ಅಧಿಕಾರವನ್ನು ಕಸಿಯಬಾರದು.
ಅವರಿಗೆ ಪರಿಪೂರ್ಣ ಅಧಿಕಾರ ನಿರ್ವ ಹಣೆಯ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ಪ್ರತಿನಿಧಿಗಳ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ.

Advertisement

ಗ್ರಾ.ಪಂ. ವ್ಯಾಪ್ತಿಗೆ ಬರುವ ಅದೆಷ್ಟೊ ವಿಚಾರಗಳು ಸ್ಥಳೀಯಾಡಳಿತದ ಗಮನಕ್ಕೆ ಬಾರದೆ ನುಣುಚಿಕೊಳ್ಳುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿರುವ 5,628 ಗ್ರಾ.ಪಂ.ಗಳ ಪೈಕಿ 98,000 ಸದಸ್ಯರನ್ನೊಳಗೊಂಡ ಜನಪ್ರತಿನಿಧಿಗಳ ಅಧಿ
ಕಾರ ಮೊಟಕು ಗೊಳಿಸಿ ಪಂಚಾಯತ್‌ ಸದಸ್ಯರನ್ನು ಭ್ರಷ್ಟರೆಂಬ ಕಾರಣ ನೀಡಿ ಸದಸ್ಯರ ಹಕ್ಕನ್ನು ದಮನಿಸಲು ಸರಕಾರ ಪ್ರಯ ತ್ನಿಸಿದರೆ ರಾಜ್ಯಾದ್ಯಂತ ಪûಾತೀತವಾಗಿ ಪಂಚಾಯತ್‌ ಸದಸ್ಯರನ್ನು ಸಂಘಟಿಸಿ ವಿಧಾನಸೌದ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

1993ರಲ್ಲಿ ಜಾರಿಯಾದ ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಪ್ರತೀ ಗ್ರಾ.ಪಂ.ಗಳು ಸರಕಾರದಂತೆ ಸ್ವತಂತ್ರ ವಾಗಿ ಕಾರ್ಯಾಚರಿಸಬೇಕೆಂದಿದೆ. ಆದರೆ ಸರಕಾರಗಳು, ಮೇಲ್ಪಂಕ್ತಿಯ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಕೊಡಲಿಯೇಟು ನೀಡಲು ಪ್ರಯತ್ನಿಸಿ ವಿಫಲವಾಗಿದೆ.

ಪಂಚಾಯತ್‌ ರಾಜ್‌ ವ್ಯವಸ್ಥೆ ಉತ್ತಮ ಶೇಷ್ಠ ರಾಜಕಾರಣಿಗಳ ಸೃಷ್ಟಿಯ ಕೇಂದ್ರವಾಗಬೇಕು. ಗ್ರಾ. ಪಂ. ಅಧ್ಯಕ್ಷರನ್ನು, ಸದಸ್ಯರನ್ನು ಅಧಿಕಾರಿ ಶಾಹಿಗಳು ತೆಗೆದು ಹಾಕುವ ತಿದ್ದುಪಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ವಾಗುತ್ತದೆ. ಹಾಗಿದ್ದಲ್ಲಿ ಶಾಸಕರು- ಮಂತ್ರಿಗಳ ಸದಸ್ಯತ್ವ ತೆಗೆದು ಹಾಕುವ ಹಕ್ಕನ್ನು ಅಧಿಕಾರಿಗಳಿಗೆ ನೀಡುವ ಶಾಸನ ಜಾರಿಯಾಗಲಿ. ತಮ್ಮ ಭ್ರಷ್ಟಾಚಾರದ ಆರೋಪವನ್ನು ಪಂಚಾಯತ್‌ ಸದಸ್ಯರ ಮೇಲೆ ಹೇರಲು ಪ್ರಯತ್ನಿಸಿದರೆ ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಸಂಘಟನಾತ್ಮಕ ಹೋರಾಟ ನಡೆಸಬೇಕಾದೀತೆಂದು ತಿಳಿಸಿದ್ದಾರೆ.

ಈ ಕುರಿತಾಗಿ ಸ್ಥಳೀಯ ಸರಕಾರದ ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಪರಮಾಧಿ ಕಾರ ನೀಡಲು ಮತ್ತು ಪಂಚಾಯತ್‌ ಸದಸ್ಯರನ್ನು ತೆಗೆದು ಹಾಕುವ ಪೂರಕವಾದ ಕಾಯ್ದೆ ತಿದ್ದುಪಡಿ ರದ್ದುಗೊಳಿಸಲು ಸರಕಾರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಇದರ ನೇತೃತ್ವ ವಹಿಸ ಬೇಕಿದೆ ಎಂದು ದೇವಿಪ್ರಸಾದ್‌ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next