ಶಿರ್ವ: ಬೆಳಪು ಬದ್ರಿಯಾ ಮಸೀದಿ ಬಳಿ, ಬಾಡಿಗೆ ಮನೆ ನಿವಾಸಿ ಕರಿಶ್ಮಾ ಬಾನು (27) ಮಾ.21ರಂದು ಸಂಜೆ ಕಾಣೆಯಾಗಿದ್ದಾರೆ.
ತನ್ನ ಇಬ್ಬರು ಮಕ್ಕಳ ಜತೆ ಅಲ್ಲಿಯೇ ಹತ್ತಿರ ಇರುವ ಅತ್ತೆ ಮನೆಗೆ ಹೋಗಿದ್ದು,ಅಲ್ಲಿಂದ ಸಂಜೆ 6.30 ರ ವೆಳೆಗೆ ಮಕ್ಕಳನ್ನು ಅತ್ತೆ ಮನೆಯಲ್ಲಿಯೇ ಬಿಟ್ಟು ಒಬ್ಬಳೇ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಮನೆಯಲ್ಲಿದ್ದ ಆಕೆಯ ಬಟ್ಟೆಬರೆ, ಚಿನ್ನಾಭರಣ, ನಗದು, ಆಕೆಯ ದಾಖಲಾತಿ ನಾಪತ್ತೆಯಾಗಿದ್ದು, ಬ್ಯಾಗ್ ಸಹ ಇಲ್ಲವಾಗಿದೆ.
ಪತಿ ಮಹಮ್ಮದ್ ಆರೀಫ್ ಮೀನಿನ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮಾ.20 ರಂದು ಕೆಲಸದ ನಿಮಿತ್ತ ಲಾರಿಯಲ್ಲಿ ಕೇರಳ ರಾಜ್ಯಕ್ಕೆ ಹೋಗಿದ್ದ ವೇಳೆ ಮಾ.21 ರಂದು ಸಂಜೆ ಆಕೆಯ ಅಣ್ಣ ಆಸೀರ್ ಕರೆ ಮಾಡಿ ಕಾಣೆಯಾದ ಬಗ್ಗೆ ವಿಚಾರ ತಿಳಿಸಿದ್ದಾರೆ.
ಕೂಡಲೇ ಕೇರಳದಿಂದ ಹೊರಟು ಮಾ.22 ರಂದು ಬೆಳಪುವಿನಲ್ಲಿರುವ ಮನೆಗೆ ಬಂದು ನೋಡಿ ವಿಚಾರಿಸಿದ ಬಳಿಕ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.