Advertisement

ಸುವರ್ಣ ಸೌಧದಲ್ಲಿ ರಾರಾಜಿಸುತ್ತಿದೆ ಬಸವನಾಡಿನ ಕಡೆಮನಿ ರೂಪಿಸಿದ ಬಸವೇಶ್ವರರ ವರ್ಣಚಿತ್ರ

06:57 PM Dec 21, 2022 | Team Udayavani |

ವಿಜಯಪುರ: ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಸಭಾಧ್ಯಕ್ಷರ ಫೀಠದ ಮೇಲ್ಭಾಗದಲ್ಲಿ ಜಿಲ್ಲೆಯ ವರ್ಣಚಿತ್ರ ಕಲಾವಿದರೊಬ್ಬರು ರೂಪಿಸಿದ ಬಸವೇಶ್ವರರ ಮೂರ್ತಿ ರಾರಾಜಿಸುತ್ತಿದೆ.

Advertisement

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಾಕೃತಿಗಳನ್ನು ಅನಾವರಣಗೊಳಿಸಿದ್ದಾರೆ. ಸುವರ್ಣ ಸೌಧದ ವಿಧಾನಸಭೆಯಲ್ಲಿ ಅನಾವರಣಗೊಂಡಿರುವ 7 ಮಹನೀಯರ ವರ್ಣಚಿತ್ರ ಕಲಾಕೃತಿಗಳಿವೆ.

ಇದರಲ್ಲಿ ಸಂಸತ್ ಪರಿಕಲ್ಪನೆ ಬಿತ್ತಿದ್ದ ವಿಶ್ವಗುರು ಬಸವೇಶ್ವರರ ನಿಂತ ಭಂಗಿಯ 5×8 ಅಡಿ ಅಳತೆಯ ಪೂರ್ಣ ಪ್ರಮಾಣದ ಬಸವೇಶ್ವರರ ಭಾವಚಿತ್ರ ರಚಿಸಿದವರು ಬಸವನಾಡಿನ ಖ್ಯಾತ ಕಲಾವಿದರಾದ ಪಿ.ಎಸ್.ಕಡೆಮನಿ.

ಜಿಲ್ಲೆಯ ಕುಮಠೆ ಎಂಬ ಕುಗ್ರಾಮದ ಕೃಷಿ ಕುಟುಂಬದಲ್ಲಿ 1955 ರಲ್ಲಿ ಜನಿಸಿದ ಪೊನ್ನಪ್ಪ, ರಾಜ್ಯದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವುದು ತಮ್ಮಲ್ಲಿರುವ ವಿಶೇಷ ಪ್ರತಿಭೆಯಿಂದಲೇ. ಭಾವಚಿತ್ರ ರಚನೆಯಲ್ಲಿ ವಿಶಿಷ್ಠವಾದ ಖ್ಯಾತಿ ಹೊಂದಿದ ಕಲಾವಿದರು ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕøತರೆಂಬುದು ಇಲ್ಲಿ ಗಮನೀಯ.

ತಮ್ಮಿಂದ ರಚಿಸಲ್ಪಟ್ಟಿರುವ ವಿಶ್ವಗುರು ಬಸವೇಶ್ವರರ ಕಲಾಕೃತಿ ಬೆಳಗಾವಿಯ ಸುವರ್ಣ ಸೌಧದ ವಿಧಾನಸಭೆ ಅಧ್ಯಕ್ಷರ ಪೀಠದ ಮೇಲೆ ಅಲಂಕರಿಸಿರುವುದು ಹೂವಿನೊಂದಿಗೆ ನಾರು ಸ್ವರ್ಗ ಸೇರಿದ ಸಂತಸ, ಸಂತೃಪ್ತಿ ನನ್ನದು ಎಂದು ಕಲಾವಿದ ಪೊನ್ನಪ್ಪ ಕಡೆಮನಿ ವಿನಯದಿಮದಲೇ ಹೇಳುತ್ತಾರೆ.

Advertisement

ಇದನ್ನೂ ಓದಿ: ಗಮಕ ಗಂಧರ್ವ, ಪದ್ಮಶ್ರೀ ಪುರಸ್ಕೃತ ಎಚ್.ಆರ್.ಕೇಶವಮೂರ್ತಿ ವಿಧಿವಶ

Advertisement

Udayavani is now on Telegram. Click here to join our channel and stay updated with the latest news.

Next