Advertisement
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ವಕ್ತಾರರು ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಸಾಲದ ಹೊರೆ ನೂರಾರು ಕೋಟಿ ಇದ್ದರೂ ಅದನ್ನು ಪಾವತಿ ಮಾಡದ ಕಾರ್ಖಾನೆಯ ರಕ್ಷಣೆಗೆ ಸರಕಾರದ ನಿಂತಿದೆ ಎಂಬ ಆರೋ ಪ ಮಾಡಿದ್ದು ರಾಜ್ಯದ ತುಂಬೆಲ್ಲ ಚರ್ಚೆಗೆ ವೇದಿಕೆ ಮಾಡಿಕೊಟ್ಟಿತು. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಈ ಕಾರ್ಖಾನೆಯ ವಿರುದ್ಧ ಅದರಲ್ಲೂ ಇದರ ಮಾಲಕರಾಗಿರುವ ರಮೇಶ ಜಾರಕಿಹೊಳಿ ವಿರುದ್ಧ ತಿರುಗಿ ಬಿದ್ದಿದ್ದರು. ಈ ಮೂಲಕ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲದ ವಿಷಯ ರಾಜಕೀಯ ಬಣ್ಣ ಪಡೆದುಕೊಂಡಿತು.ಕಾರ್ಖಾನೆಯು ವಿವಿಧ ಡಿಸಿಸಿ ಬ್ಯಾಂಕ್‌ಗಳಿಂದ 600 ಕೋಟಿ ಸಾಲ ಮಾಡಿದ ಮೇಲೆ ಅದನ್ನು ಇದು ವರೆಗೆ ಪಾವತಿ ಮಾಡಿಲ್ಲ. ಕಾರಣ ಇದರ ಆಸ್ತಿ ಮುಟ್ಟು ಗೋಲು ಹಾಕಿಕೊಳ್ಳಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಪತ್ರ ಬರೆದು ಒತ್ತಾಯ ಮಾಡಿದ್ದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕಾಂಗ್ರೆಸ್ ಮುಖಂಡರ ದೂರು.
Related Articles
Advertisement
ಆದರೆ ರೈತ ಮುಖಂಡರ ಪ್ರಕಾರ ಯಾವುದೇ ಸಕ್ಕರೆ ಕಾರ್ಖಾನೆ ನಷ್ಟದಲ್ಲಿರಲು ಅಥವಾ ಆರ್ಥಿಕವಾಗಿ ದಿವಾಳಿಯಾಗಲು ಸಾಧ್ಯವೇ ಇಲ್ಲ. ತಮ್ಮ ವೈಯಕ್ತಿಕ ಸಾಲದ ಹೊರೆಯನ್ನು ಸಕ್ಕರೆ ಕಾರ್ಖಾನೆ ಮೇಲೆ ಹಾಕಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ರೈತರ ಬಾಕಿ ಹಣ ಪಾವತಿ ತಪ್ಪಿಸಿಕೊಳ್ಳಲು ಈ ತಂತ್ರ ಹೂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಎಲ್ಲ ಪಕ್ಷದವರು ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ ಎಂದು ಹೇಳಿ ಇದನ್ನು ಮರೆಸಲು ಪ್ರಯತ್ನಿಸಿರುವ ಸಹಕಾರ ಸಚಿ ವರು, ಈ ಸಾಲವನ್ನು ವಸೂಲಿ ಮಾಡಲು ವಹಿಸುವ ಕಠಿನ ಕ್ರಮದ ಬಗ್ಗೆ ಅಷ್ಟು ಗಂಭೀರವಾಗಿ ಮಾತನಾಡದೇ ಇರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ರೈತರಿಗೆ ಬಾಕಿ ಹಣ ಕೊಡುವವರೆಗೆ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ವಿರುದ್ಧ ಹೋರಾಟ ನಡೆಸು ತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕರು ಈಗ ಸಹಕಾರ ಸಚಿವರ ಉತ್ತರಕ್ಕೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ-ಪ್ರತ್ಯಾ ರೋಪ ದ ನಡುವೆ ಕಾರ್ಖಾನೆಯ ನೂರಾರು ಕೋಟಿ ಸಾಲದ ಕೂಪ ಸದ್ದಿಲ್ಲದೆ ಮರೆಯಾಗುವುದೇ ಎಂಬ ಚರ್ಚೆ ಸಹ ನಡೆದಿದೆ.
– ಕೇಶವ ಆದಿ