ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಸೋಮವಾರ ಬೆಳಗ್ಗೆ ಆರಂಭಗೊಂಡಿದ್ದು, ನಾಲ್ಕು ಸುತ್ತಿನ ಮತ ಎಣಿಕೆ ಮುಗಿದಿದೆ.
ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಶುರುವಾಗಿದ್ದು, ಸ್ಟ್ರಾಂಗ್ ರೂಮ್ ನಿಂದ ಇವಿಎಂ ಮಷಿನ್ ಗಳನ್ನು ತೆರೆದು ಮತ ಎಣಿಕೆ ಆರಂಭಿಸಲಾಗಿದೆ. 58 ವಾರ್ಡುಗಳ ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ನಡೆಯಲಿದೆ.
ನಾಲ್ಕು ಸುತ್ತಿನ ಮತ ಎಣಿಕೆ ಬಳಿಕ ಒಟ್ಟು 12 ವಾರ್ಡುಗಳಲ್ಲಿ ಬಿಜೆಪಿ, 7 ವಾರ್ಡುಗಳಲ್ಲಿ ಕಾಂಗ್ರೆಸ್ ಹಾಗೂ 18 ವಾರ್ಡುಗಳಲ್ಲಿ ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ:ಪಾಲಿ(ಗೆ)ಕೆ ಫೈಟ್ : ಇಂದು ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಪ್ರಕಟ
18 ನೇ ವಾರ್ಡ್ ನ ಬಿಜೆಪಿಯ ರಾಹುಲ್ ಬಡಸಕರ ಮುನ್ಮಡೆ ಸಾಧಿಸಿಕೊಂಡಿದ್ದಾರೆ. 15ನೇ ವಾರ್ಡ್ ನಲ್ಲಿ ಬಿಜೆಪಿಯ ನೇತ್ರಾವತಿ ವಿನೋದ ಭಾಗವತ್ ಗೆಲುವು ಸಾಧಿಸಿದರು.
ವಾರ್ಡ್ ನಂಬರ್ 14 ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಿವಾಜಿ ಮಂಡೋಳಕರ ಗೆಲುವು ಸಾಧಿಸಿದರು.