Advertisement
ಭಾಷೆಯ ಆಧಾರದ ಮೇಲೆ ನಡೆಯುತ್ತಿದ್ದಚುನಾವಣೆಯನ್ನು ಈಗ ಪಕ್ಷಗಳು ತಮ್ಮವರ್ಚಸ್ಸಿನ ಮೇಲೆ ಎದುರಿಸಿವೆ. ಪûಾಧಾರಿತಸ್ಪರ್ಧೆಯ ಮೂಲಕ ಕುತೂಹಲ ಮೂಡಿಸಿದ್ದಈ ಬಾರಿ ಚುನಾವಣೆಯಲ್ಲಿ ಮಹಾರಾಷ್ಟ್ರಏಕೀಕರಣ ಸಮಿತಿಗೆ ಪಾಠ ಕಲಿಸಲು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನುಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.
Related Articles
Advertisement
ಕಾಂಗ್ರೆಸ್‌ನ ಲೆಕ್ಕಾಚಾರವೇ ಬೇರೆ:ಅಲ್ಪಸಂಖ್ಯಾತ ಸಮುದಾಯದ ಮತಗಳಮೇಲೆ ಕಣ್ಣಿಟ್ಟು ಹೆಚ್ಚಿನ ಸ್ಥಾನಗಳನ್ನುಗೆಲ್ಲಬೇಕೆಂಬ ಪಟ್ಟು ಹಿಡಿದಿರುವಕಾಂಗ್ರೆಸ್ ಗೆಲುವಿನ ಲೆಕ್ಕಾಚಾರದಲ್ಲಿತೊಡಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಬೀಗಬೇಕೆಂದು ತುದಿಗಾಲಲ್ಲಿ ನಿಂತಿರುವಕಾಂಗ್ರೆಸ್ ನಾಯಕರು ಕಡಿಮೆ ಸ್ಥಾನಗಳುಬಂದರೂ ಪಕ್ಷೇತರರ ಬೆಂಬಲ ಪಡೆಯಲುಸಿದ್ಧರಾಗಿದ್ದಾರೆ. ಒಟ್ಟಾರೆಯಾಗಿ ಉಭಯಪಕ್ಷಗಳ ನಾಯಕರು ತಮ್ಮ ಪಕ್ಷದಬಲಾಬಲಗಳ ಮೇಲೆ ಕಣ್ಣಿಟ್ಟಿದ್ದಾರೆ.
ಪಕ್ಷೇತರರ ಮೇಲೆ ಎಲ್ಲರ ಕಣ್ಣು:ರಾಜಕೀಯ ಪಕ್ಷಗಳಿಗಿಂತ ಪಕ್ಷೇತರರೇ ಅತಿಹೆಚ್ಚು ಈ ಚುನಾವಣೆಯಲ್ಲಿ ಸ್ಪ ರ್ಧಿಸಿದ್ದಾರೆ.ನೀರಸ ಮತದಾನದಿಂದ ಪಾಲಿಕೆಯಲ್ಲಿಅತಂತ್ರ ಪರಿಸ್ಥಿತಿ ನಿರ್ಮಾಣವಾಗುವಸಾಧ್ಯತೆಯೂ ಇದೆ. ಪಕ್ಷೇತರರೇ ಕಿಂಗ್‌ಮೇಕರ್ ಆಗುವುದರಲ್ಲಿ ಸಂದೇಹವಿಲ್ಲ. ಇತ್ತಎಂಇಎಸ್ ಬೆಂಬಲಿತ ಪಕ್ಷೇತರರು ಹಾಗೂಇನ್ನುಳಿದ ಬಿಜೆಪಿ-ಕಾಂಗ್ರೆಸ್ ಬಂಡಾಯಅಭ್ಯರ್ಥಿಗಳು ಬಾಜಿ ಹೊಡೆದರೆ ಮುಂದೆಯಾರಿಗೆ ಬೆಂಬಲ ನೀಡಬೇಕು ಎಂದುಈಗಲೇ ಪ್ಲಾÂನ್ ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ ಮಿಷನ್ 45 ಅಡಿ ಪ್ರಚಾರಆರಂಭಿಸಿತ್ತು. ಕಾಂಗ್ರೆಸ್ ಪಕ್ಷವೂ 45 ವಾಡ್ìಗಳಿಗೆ ಅಭ್ಯರ್ಥಿ ಹಾಕಿ ಪಾಲಿಕೆ ಚುಕ್ಕಾಣಿಹಿಡಿಯಲು ತಂತ್ರ ರೂಪಿಸಿತ್ತು. ಈಗಪಕ್ಷೇತರರು ಹೆಚ್ಚಿನ ಸ್ಥಾನಗಳನ್ನು ಗೆದ್ದರೆಯಾರ ಬೆಂಬಲ ಪಡೆಯಬೇಕು ಎಂಬುದುರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ.ಎರಡೂ ರಾಷ್ಟಿÅàಯ ಪಕ್ಷಗಳ ಲೆಕ್ಕಾಚಾರಉಲ್ಟಾ ಆಗುವುದು ಬಹುತೇಕ ಖಚಿತಎನ್ನಲಾಗುತ್ತಿದೆ.
ಭೈರೋಬಾ ಕಾಂಬಳೆ