Advertisement

Belagavi ಜಿಲ್ಲೆಯ ವಿಭಜನೆ ಘೋಷಣೆ ಸುದ್ದಿ; ತೀವ್ರ ಚರ್ಚೆ

08:08 PM Feb 14, 2024 | Team Udayavani |

ಬೆಳಗಾವಿ : ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆಯ ಘೋಷಣೆಯಾಗಲಿದೆ ಎಂಬ ಸುದ್ದಿಗಳು ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿವೆ.

Advertisement

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ವಿಭಜನೆಯ ಸುದ್ದಿಗಳು ಬಹಳ ಸುದ್ದಿಮಾಡುತ್ತಿವೆ. ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಸಂದರ್ಭದಲ್ಲಿ ಜಿಲ್ಲೆಯ ವಿಭಜನೆಯ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ರಾಜಕೀಯ ವಲಯದಲ್ಲಿ ಮಾತ್ರ ಅಂತಹ ಯಾವುದೇ ಬೆಳವಣಿಗೆಗಳು ಅಥವಾ ಚರ್ಚೆಗಳು ಕಂಡುಬರುತ್ತಿಲ್ಲ. ಮೇಲಾಗಿ ಸರಕಾರದ ಮುಂದೆ ಜಿಲ್ಲಾ ವಿಭಜನೆಯ ಪ್ರಸ್ತಾಪ ಇಲ್ಲ. ಅಂತಹ ಚರ್ಚೆಗಳು ಸಹ ಈ ಹಂತದಲ್ಲಿ ನಡೆದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಕಳೆದ ದಿನಾಂಕ 8 ರಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎ ಜಿ ವೀಣಾ ಅವರು ಹೊರಡಿಸಿರುವ ಅಧಿಸೂಚನೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಅಧಿಸೂಚನೆಯಲ್ಲಿ ನೋಂದಣಿ ಕಾಯಿದೆ,1908 (ಕೇಂದ್ರ ಕಾಯಿದೆ 16, 1908) ರ ಉಪ-ವಿಭಾಗ (1) ರ ಅಡಿಯಲ್ಲಿ ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳ ರಚನೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಅಧಿಸೂಚನೆಗಳನ್ನು ರದ್ದುಪಡಿಸುವಲ್ಲಿ ಈ ಮೂಲಕ ಮಾರ್ಪಟು ಮಾಡಲಾಗಿದ್ದು ದಿನಾಂಕ 8 ರಿಂದ ನಿರ್ದಿಷ್ಟಪಡಿಸಿದ ಪ್ರದೇಶಕ್ಕೆ ಸಂಬಂಧಿಸಿದಂತೆ ನೋಂದಣಿ ಜಿಲ್ಲೆಗಳ ಮಿತಿ ಮತ್ತು ಪುನರ್ರಚನೆ ಮಾಡುವ ಕುರಿತು ಸೂಚಿಸಿರುವದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next