Advertisement

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಯೊಂದಿಗೆ ಚಾಲನೆ: ಮೆರವಣಿಗೆಗೆ ಕಲಾತಂಡಗಳ ಮೆರಗು

01:15 PM Dec 21, 2022 | Team Udayavani |

ಚಿಕ್ಕೋಡಿ: 15 ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಚಾಲನೆಗೊಂಡಿತ್ತು.

Advertisement

ಚಿಕ್ಕೋಡಿ ನಗರದ ಸಿಎಲ್ ಇ ಸುವರ್ಣ ಮಹೋತ್ಸವ ಕಟ್ಟಡದ ಅವರಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬುಧವಾರ ಬೆಳಿಗ್ಗೆ ಪುರಸಭೆಯಿಂದ ಮೆರವಣಿಗೆ ಆರಂಭಗೊಂಡಿತ್ತು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ಕನ್ನಡದ ಸ್ವಾಮೀಜಿ ಎಂದೇ ಖ್ಯಾತರಾದ ಚಿಂಚಣಿ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಕುದುರೆ ರಥದಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು.

ಜಿಲ್ಲೆಯ ವಿವಿಧ ತಾಲೂಕಿನ ಕಲಾ ತಂಡಗಳು ಮೆರವಣಿಗೆ ಮೆರಗು ನೀಡಿದರು. ಚಿಕ್ಕೋಡಿ ವಿವಿಧ ಶಾಲಾ- ಕಾಲೇಜಿನ ಸುಮಾರು 6 ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡದ ಜಯಘೋಷ ಮೊಳಗಿಸಿದರು.

ನಿಡಸೋಸಿ ಶ್ರೀ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಚಿಕ್ಕೋಡಿ ಶ್ರೀ ಸಂಪಾದನ ಸ್ವಾಮೀಜಿ, ಸಹಕಾರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಸಿಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಮತಿ ಮಂಗಳಾ ಮೆಟಗುಡ್ಡ, ತಾಲೂಕು ಕಸಾಪ ಅಧ್ಯಕ್ಷ ಡಾ.ಸುರೇಶ ಉಕ್ಕಲಿ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಕಸಾಪ ಪದಾಧಿಕಾರಿಗಳಾದ ಚಂದ್ರಶೇಖರ ಅರಭಾವಿ, ‌ವಿರೂಪಾಕ್ಷಿ ಕವಟಗಿ, ಶ್ರೀಪಾದ ಕುಂಬಾರ, ಉಪನ್ಯಾಸಕ ಸಚೀನ ಮೆಕ್ಕಳಕ್ಕಿ, ಸಾಗರ ಬಿಸ್ಕೋಪ, ಡಿ.ಎಸ್‌.ಕೋಳಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next