ಬೆಳಗಾವಿ: ನಗರದಲ್ಲಿ ಬೈಕ್ ಮೇಲೆ ಹೊರಟಿದ್ದ ಯುವಕರಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೋರ್ವನಿಗೆ ಚಾಕು ಇರಿದ ಘಟನೆ ನಗರದ ಅನಂತಶಯನ ಗಲ್ಲಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಕ್ಯಾಂಪ್ ಪ್ರದೇಶದ10 ನೇ ತರಗತಿ ವಿದ್ಯಾರ್ಥಿ ಫರಾನ್ ಧಾರವಾಡಕರ ಎಂಬ ವಿದ್ಯಾರ್ಥಿಗೆ ಚಾಕು ಇರಿಯಲಾಗಿದೆ. ಇನ್ನುಳಿದ ಇಬ್ಬರು ಪಾರಾಗಿದ್ದಾರೆ. 8-10 ಜನರ ಗುಂಪೊಂದು ದಾಳಿ ನಡೆಸಿ ಚಾಕು ಇರಿದಿದೆ.
ಫರಾನ್ ಧಾರವಾಡಕರ ಸೇರಿ ಮೂವರು ಬೈಕ್ ಮೇಲೆ ಹೊರಟಿದ್ದರು. ಆಗ 8-10 ಜನರು ಗುಂಪು ನಿಂತುಕೊಂಡಿತ್ತು. ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಜಗಳವಾಗಿದೆ. ಫರಾನ್ ಸಿಕ್ಕಿ ಬಿದ್ದಾಗ ಈತನ ಮೇಲೆ ಚಾಕು ಇರಿಯಲಾಗಿದೆ. ಇನ್ನುಳಿದವರನ್ನು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಭೀರ ಗಾಯಗೊಂಡ ಫರಾನ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಬೈಕ್ ಸವಾರನೋರ್ವ ಜೋರಾಗಿ ವಾಹನ ಚಲಾಯಿಸಿಕೊಂಡು ಹೊರಟಾಗ ಉದ್ರಿಕ್ತರು ನಿಲ್ಲಿಸಿ ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಟ್ಟರು.
ಪಾಕಿಸ್ತಾನ ಧ್ವಜ ತುಳಿದು ಆಕ್ರೋಶ
ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಆರಂಭವಾದ ಶ್ರೀ ದುರ್ಗಾಮಾತಾ ದೌಡ್ ಮೆರವಣಿಗೆ ವೇಳೆ ಪಾಕಿಸ್ತಾನದ ಧ್ವಜ ತುಳಿಯುತ್ತಾ ಜೈ ಶಿವಾಜಿ ಜೈ ಭವಾನಿ ಎಂದು ಘೋಷಣೆ ಕೂಗುತ್ತಾ ಸಾಗಿದ್ದರು. ಅನೇಕ ಯುವಕರು ಈ ಪಾಕಿಸ್ತಾನ ಧ್ವಜದ ಮೇಲೆ ಕಾಲಿಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿ ಘೋಷಣೆ ಕೂಗಿದ್ದರು.
ಇದನ್ನೂ ಓದಿ : ಉಗ್ರ ಪಟ್ಟಿಗೆ ಪಿಎಫ್ಐ? 42 ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಲು ಕೇಂದ್ರ ಚಿಂತನೆ