Advertisement
ನಗರದ ಕೋರ್ಟ್ ಆವರಣದಲ್ಲಿರುವ ಸರಕಾರಿ ನೌಕರರ ಭವನದಲ್ಲಿ ನಡೆದ ಭಾವ ಸಂಗಮ ವಾಟ್ಸಾಪ್ ಗ್ರೂಪ್ 9ನೇ ಸರ್ವ ಸದಸ್ಯರ ಮಹಾಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕವಿಯಾದವನು ಮೊದಲು ಕಾವ್ಯದ ಲಕ್ಷಣಗಳನ್ನು ತಿಳಿದುಕೊಂಡು ಕಾವ್ಯ ರಚನೆಗೆ ತೊಡಗಿದರೆ ಅಂತಹ ಕಾವ್ಯವು ಸತ್ವಯುತವಾಗಿರುತ್ತದೆ. ಅದು ಬಹಳ ಕಾಲ ಉಳಿದುಕೊಳ್ಳುತ್ತದೆ ಎಂದು ಹೇಳಿದರು.
Related Articles
Advertisement
ಇದೇ ಸಂದರ್ಭದಲ್ಲಿ ಸಾಹಿತಿ ಎಲ್. ಎಸ್. ಶಾಸ್ತ್ರಿ ಹಾಗೂ ಶಾರದಾ ಶಾಸ್ತ್ರಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಇದಲ್ಲದೆ 2021ನೇ ಸಾಲಿನ ಉಮಾಶಂಕರ ಪುಸ್ತಕ ಪ್ರಶಸ್ತಿಗೆ ಸಹನಾ ಕಾಂತಬೈಲ ಹಾಗೂ 2022ನೇ ಸಾಲಿಗೆ ಶಿರೀಷ ಜೋಶಿ ಭಾಜನರಾಗಿದ್ದರು. ಪ್ರೋತ್ಸಾಹಕರ ಬಹುಮಾನ ಪಡೆದಿರುವ ಸಿದ್ಧರಾಮ ಹೊನ್ಕಲ್ ಅನಸೂಯ ಜಹಗೀರದಾರ, ನಾಗ ಎಚ್. ಹುಬ್ಳಿ, ಜಯಶ್ರೀ ದೇಶಪಾಂಡೆ, ಸೋಮಲಿಂಗ ಬೇಡರ ಅಳೂರ, ಡಾ| ಅನ್ನಪೂರ್ಣ ಹಿರೇಮಠ, ಎ.ಎನ್. ಗುಬ್ಬಿ, ರಾಧಾ ಶಾಮರಾವ್, ಎ.ಎಸ್. ಮಕಾನದಾರ, ಡಾ| ಬದ್ರಾವತಿ ರಾಮಾಚಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೀನಾಕ್ಷಿ ಸೂಡಿ ಮತ್ತು ಸಂಗಡಿಗರಿಂದ ಕವಿ ದಿಗ್ಗರು ರೂಪಕ, ದಾನಮ್ಮ ಅಂಗಡಿ ಅವರಿಂದ ಜಾನಪದ ನೃತ್ಯ, ಜಯಶ್ರೀ ಮಂಗಳೂರು ಅವರಿಂದ ಏಕಪಾತ್ರಾಭಿನಯ ಜರುಗಿದವು. ರಾಜೇಶ್ವರಿ ಹಿರೇಮಠ ನಿರೂಪಿಸಿದರು. ದೀಪಿಕಾ ಚಾಟೆ ಪರಿಚಯಿಸಿ ಸ್ವಾಗತಿಸಿದರು. ಸುಮಾ ಬೇವಿನಕೊಪ್ಪಮಠ ವಂದಿಸಿದರು.