Advertisement

ನಾಪತ್ತೆಯಾಗಿದ್ದ ಮೂರು ವರ್ಷದ ಮಗು ನಾಲ್ಕು ದಿನಗಳ ಬಳಿಕ ದಟ್ಟ ಅರಣ್ಯದಲ್ಲಿ ಪತ್ತೆ

10:38 PM Apr 30, 2022 | Team Udayavani |

ಬೆಳಗಾವಿ: ತಾಲೂಕಿನ ಜಾಂಬೋಟಿ ಹೋಬಳಿಯ ಚಿರೇಖಾನಿ ಗ್ರಾಮದ ತನ್ನ ಅಜ್ಜಿಯ ಮನೆಯ ಬಳಿ ಆಟವಾಡುವಾಗ ನಾಪತ್ತೆಯಾಗಿದ್ದ 3 ವರ್ಷದ ಹೆಣ್ಣು ಮಗು ನಾಲ್ಕು ದಿನಗಳ ಬಳಿಕ ಶನಿವಾರ ಸಂಜೆ 2.5 ಕಿ.ಮೀ. ದೂರದ ದಟ್ಟ ಅರಣ್ಯದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಏ. 26ರಂದು ತಾಲೂಕಿನ ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ ತಮ್ಮ ಪತ್ನಿ ಹಾಗೂ 3 ವರ್ಷ ವಯಸ್ಸಿನ ಪುತ್ರಿ ಅದಿತಿ ಜೊತೆ ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು‌ಚಿರೇಖಾನಿ ಗ್ರಾಮದ ತಮ್ಮ ಹೆಂಡತಿಯ ತವರು ಮನೆಗೆ ಬಂದಿದ್ದರು. ಮಂಗಳವಾರ ಮಧ್ಯಾಹ್ನ ಚಿರೇಖಾನಿಯ ತನ್ನ ಅಜ್ಜಿಯ ಮನೆಯ ಬಳಿ ಆಟವಾಟುತ್ತಿದ್ದ ಅದಿತಿ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಳು.

ಚಿರೇಖಾನಿ ಗ್ರಾಮಸ್ಥರು ಮತ್ತು ಶಿವಾಜಿ ಕುಟುಂಬದ ಸದಸ್ಯರು ಬಾಲಕಿಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಆಕೆಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪತ್ತೆಗಾಗಿ ಅರಣ್ಯ ಇಲಾಖೆಯ ನೆರವನ್ನು ಕೋರಿದ್ದರು. ಶುಕ್ರವಾರ ಮತ್ತು ಶನಿವಾರ ಅರಣ್ಯ ಇಲಾಖೆಯವರು ಚಿರೇಖಾನಿ, ಕೊಡುಗೈ ಮತ್ತು ಚಾಪೋಲಿ ಗ್ರಾಮದ ಯುವಕರ ನೆರವಿನೊಂದಿಗೆ ಶೋಧಕಾರ್ಯ ಕೈಗೊಂಡಿದ್ದರು.

ಇದನ್ನೂ ಓದಿ : ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗೆ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ

ಅದೃಷ್ಟವಶಾತ್ ಶನಿವಾರ ಸಂಜೆ ಮಗು ದಟ್ಟ ಅರಣ್ಯದಲ್ಲಿ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಕೈ-ಕಾಲುಗಳಿಗೆ ಇರುವೆ, ಚಿರಳೆಗಳು ಕಚ್ಚಿ ಗಾಯಗೊಳಿಸಿದ್ದರಿಂದ ಆಕೆ ನಡೆಯಲಾಗದ ಸ್ಥಿತಿಯಲ್ಲಿದ್ದಳು. ಕೂಡಲೇ ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ವೈದ್ಯರ ಸೂಚನೆಯ ಮೇರೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ, ಸದ್ತ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next