Advertisement

ಬೇಕೂರು ದುರಂತ: ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮಕ್ಕೆ ಆದೇಶ

11:13 AM Oct 23, 2022 | Team Udayavani |

ಕುಂಬಳೆ : ಬೇಕೂರು ಸರಕಾರಿ ವಿದ್ಯಾಲಯದಲ್ಲಿ ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಜರಗುತ್ತಿದ್ದ ಸಂದರ್ಭ ಶುಕ್ರವಾರ ಚಪ್ಪರ ಕುಸಿದು ಬಿದ್ದ ಘಟನೆಯಲ್ಲಿ ಗಾಯಗೊಂಡವರಲ್ಲಿ 6 ವಿದ್ಯಾರ್ಥಿಗಳು ಮತ್ತು ಓರ್ವ ಅಧ್ಯಾಪಕಿ ಮಾತ್ರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Advertisement

ಘಟನಾ ಸ್ಥಳಕ್ಕೆ ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ್‌ ಉಣ್ಣಿತ್ತಾನ್‌, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‌ ರಮಣಸಿಂಗ್‌, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್‌, ಕಾಸರಗೋಡು ಎಸ್‌.ಪಿ. ಡಾ| ವೈಭವ್‌ ಸಕ್ಸೇನಾ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮದಾಸ್‌, ಸಹಾಯಕ ವಿದ್ಯಾಧಿಕಾರಿ ಪುಷ್ಪಾ, ಜಿಲ್ಲಾ ವಿದ್ಯಾಧಿಕಾರಿ ಕೆ. ನಂದಿಕೇಶನ್‌ ಭೇಟಿ ನೀಡಿದರು.
ಚಪ್ಪರದ ಕಳಪೆ ಕಾಮಗಾರಿ ದುರಂತಕ್ಕೆ ಕಾರಣವಾಗಿದ್ದು ಚಪ್ಪರ ಮಾಲಕ ಮತ್ತು ಸಹಾಯಕರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಸಂಸದರು ಮತ್ತು ಜಿಲ್ಲಾಧಿಕಾರಿ ಉನ್ನತ ಪೊಲೀಸ್‌ ಅಧಿಕಾರಿಗೆ ಆದೇಶಿಸಿದ್ದಾರೆ.

ಚಪ್ಪರದ ಕಂಬಗಳನ್ನು ಸಾಕಷ್ಟು ಹೊಂಡ ಮಾಡದೆ ಹೂತದ್ದು, ವಿಶಾಲ ಚಪ್ಪರಕ್ಕೆ ಬೆಂಬಲವಾಗಿ ಸಾಕಷ್ಟು ಕಂಬಗಳನ್ನು ಕೊಟ್ಟಿಲ್ಲದಿರುವುದು ಚಪ್ಪರ ಕುಸಿಯಲು ಕಾರಣವೆಂದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next