Advertisement

ಆಶಾವಾದಿಯಾಗಿ ಬಾಳಿ: ರಂಭಾಪುರಿ ಶ್ರೀ

09:22 AM Jan 10, 2019 | |

ಕಲಬುರಗಿ: ಬದುಕಿಗೆ ನೆಲೆ ಬೆಲೆ ಬರಲು ಶ್ರಮಿಸುವುದರ ಜತೆಗೆ ನಿರಾಶಾವಾದಿಯಾಗದೇ ಆಶಾವಾದಿಯಾಗಿ ಬಾಳಿದರೆ ಜೀವನ ಸಾರ್ಥಕಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆ ಆಲೇರು ಮಂಡಲ ವ್ಯಾಪ್ತಿಯ ಕೊಲನಪಾಕ ಚಂಡಿಕಾಂಬಾ ಸಮೇತ ಸ್ವಯಂಭು ಸೋಮೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ನಡೆದ ಇಷ್ಟಲಿಂಗ ಮಹಾಪೂಜಾ ಹಾಗೂ 63ನೇ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಬದುಕೊಂದು ಪುಸ್ತಕ. ಪ್ರತಿ ಪುಟದಿಂದ ಏನನ್ನಾದರೂ ತಿಳಿಯಬಹುದು. ಸುಮ್ಮನೇ ಪುಟ ತಿರುವಿ ಹಾಕಬಹುದು. ಅರಿತು ಬಾಳುವುದೇ ನಿಜವಾದ ಜೀವನ. ಮರೆತು ಮಲಗುವುದೇ ಬಾಳಿನ ಅವನತಿಗೆ ಕಾರಣ. ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳು ಕೂಡಿಯೇ ಇವೆ. ಇವುಗಳನ್ನು ಬೇರ್ಪಡಿಸುವುದು ಬಲು ಕಷ್ಟ. ಆದರೆ ಒಳ್ಳೆಯದರ ಕಡೆಗೆ ಹೆಜ್ಜೆ ಹಾಕಿದರೆ ಜೀವನ ಸಾರ್ಥಕಗೊಳ್ಳುವುದು ಎಂದು ಹೇಳಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಜಗತ್ಕಲ್ಯಾಣಕ್ಕಾಗಿ ಅವತರಿಸಿದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ 63ನೇ ಜನ್ಮ ದಿನೋತ್ಸವ ನಡೆದಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದರು.

ಬಿಚಗುಂದ ಸೋಮಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳ ಜೀವನ ಸಾಧನೆ ಅದ್ಭುತ. ಪೂಜ್ಯರ 63ನೇ ಜನ್ಮ ದಿನೋತ್ಸವ ಮೂಲ ಸೋಮೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಹರ್ಷ ತಂದಿದೆ ಎಂದು ಹೇಳಿದರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

Advertisement

ಸಿದ್ಧರಬೆಟ್ಟ, ಶಖಾಪುರ, ಕೆಂಗೇರಿ, ಪಾಳಾ, ಹಳ್ಳಿಖೇಡ, ಸ್ಟೇಷನ್‌ ಬಬಲಾದ, ಸಿಂಧನೂರು ಮೊದಲ್ಗೊಂಡು 25 ಜನ ಮಠಾಧೀಶರು ಪಾಲ್ಗೊಂಡಿದ್ದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಶುಭ ಹಾರೈಸಿದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಅಖೀಲ ಭಾರತ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣು ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿದರು.

ಅಖೀಲ ಭಾರತ ವೀರಶೈವ ಮಹಾಸಭಾ ತೆಲಂಗಾಣ-ಆಂಧ್ರದ ಅಧ್ಯಕ್ಷ ನೇತಿ ಮಹೇಶ್ವರ, ಹೈದರಾಬಾದನ ಎಂ. ವೀರಮಲ್ಲೇಶ, ನೇತಿ ಜ್ಞಾನೇಶ್ವರ, ವಿಶ್ವೇಶ್ವರಯ್ಯ, ಜಗದೇವ ಹಿರೇಮಠ ಪಾಲ್ಗೊಂಡಿದ್ದರು. ಬಾಬುರಾವ ಬಿರಾದಾರ ಸ್ವಾಗತಿಸಿದರು. ಬಸವಕಲ್ಯಾಣದ ರಮೇಶ ರಾಜೋಳೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next