Advertisement

ಆರ್ಥಿಕ ಕಾರಿಡಾರ್‌: ಭಾರತದ ಜತೆ ಚರ್ಚೆಗೆ ಸಿದ್ಧ

09:59 AM Jan 30, 2018 | Team Udayavani |

ಬೀಜಿಂಗ್‌/ಕೋಲ್ಕತಾ: ಪಾಕಿಸ್ತಾನದ ಜತೆ ಸಹಿ ಹಾಕಲಾಗಿರುವ 50 ಸಾವಿರ ಕೋಟಿ ರೂ. ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ವಿವಾದವನ್ನು ಬಗೆಹರಿಸುವ ಸಲುವಾಗಿ ಭಾರತದ ಜತೆ ಚರ್ಚೆಗೆ ಸಿದ್ಧವಿರುವುದಾಗಿ ಚೀನಾ ಹೇಳಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಈ ಯೋಜನೆ ಹಾದುಹೋಗುತ್ತಿದ್ದು, ಅದರ ಅನ್ವಯ ನಿರ್ಮಾಣ ಮಾಡಲಾಗುವ ಬೆಲ್ಟ್ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ)ಗೆ ಭಾರತವು ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದಲ್ಲಿ ಭಾರತದ ರಾಯಭಾರಿಯಾಗಿರುವ ಗೌತಮ್‌ ಬಂಬಾವಲೆ ಅವರು ಸರ್ಕಾರಿ ಸ್ವಾಮ್ಯದ “ಗ್ಲೋಬಲ್‌ ಟೈಮ್ಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪೂರಕವಾಗಿ ಕೇಂದ್ರದ ಜತೆಗೆ ಮಾತುಕತೆ ನಡೆಸುವ ಪ್ರಸ್ತಾಪವನ್ನು ಚೀನಾ ಮುಂದಿಟ್ಟಿದೆ. 

Advertisement

ಸಂದರ್ಶನದಲ್ಲಿ ಸಿಪಿಇಸಿ ಮತ್ತು ಅದರ ವ್ಯಾಪ್ತಿಯಲ್ಲಿ ಜಾರಿಯಾಗಲಿರುವ ಯೋಜನೆಗಳ ಬಗ್ಗೆ ಭಾರತದ ಆಕ್ಷೇಪ ತಳ್ಳಿಹಾಕಲಾಗದು ಎಂದು ಬಂಬಾವಲೆ ಹೇಳಿದ್ದರು. ಜತೆಗೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ “ಸಂದರ್ಶನದಲ್ಲಿ ಭಾರತದ ರಾಯಭಾರಿ ವ್ಯಕ್ತಪಡಿಸಿದ ಅಭಿಪ್ರಾಯ  ಗಮನಿಸಲಾಗಿದೆ. ಈ ಬಗ್ಗೆ ಭಾರತ  ಜತೆ ಮಾತುಕತೆ ನಡೆಸಲಾಗುತ್ತದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತ ಮತ್ತು ಚೀನಾ ನಡುವೆ ಇರುವ ಡೋಕ್ಲಾಂ ವಿವಾದವನ್ನು ಸಮಾಧಾನಕರವಾಗಿಯೇ ಬಗೆಹರಿಸಬೇಕು ಎಂದಿರುವ ನೆರೆಯ ರಾಷ್ಟ್ರ, ವಿವಾದಿತ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಕಾಮಗಾರಿಯನ್ನು ಸಮರ್ಥಿಸಿಕೊಂಡಿದೆ. 

ಚೀನಾದಲ್ಲಿ ಭಾರತದ ರಾಯಭಾರಿ ಪ್ರಬಲ ಆಕ್ಷೇಪದ ಬಳಿಕ ತಗ್ಗಿದ ಚೀನಾ ಡೋಕ್ಲಾಂನಲ್ಲಿ ಸೇನಾ ಕಾಮಗಾರಿಗೆ ಸಮರ್ಥನೆ

Advertisement

Udayavani is now on Telegram. Click here to join our channel and stay updated with the latest news.

Next