Advertisement

ಒತ್ತಾಯಕ್ಕೆ ಮದುವೆಯಾದ: ವಾರದ ಒಳಗೆ ಪತ್ನಿಯ ರುಂಡ ಚೆಂಡಾಡಿದ !

12:01 PM May 16, 2017 | |

ನವಿಮುಂಬಯಿ : 24 ರ ಹರೆಯದ ಯುವತಿಯೊಬ್ಬಳನ್ನು ವಿವಾಹವಾಗಿ ವಾರದೊಳಗೆ ಬರ್ಬರವಾಗಿ ತುಂಡರಿಸಿ ಕೊಲೆಗೈದು ದೇಹದ ಭಾಗಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಎಸೆದ ಬೆಚ್ಚಿ ಬೀಳುವ ಘಟನೆ ನಡೆದಿದೆ.

Advertisement

ಪ್ರಿಯಾಂಕಾ ಗೌರವ್‌ ಎಂಬಾಕೆ ವಿವಾಹವಾದ ವಾರದ ಒಳಗೆ ಗಂಡನ ಮನೆಯಿಂದ ಮೇ 5 ರಂದು ನಿಗೂಢವಾಗಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸ್‌ ತನಿಖೆಯ ವೇಳೆ ಮನೆಯಿಂದ 50 ಕಿ.ಮೀ ದೂರದಲ್ಲಿರುವ ಕೊಳಚೆ ಗುಂಡಿಯಲ್ಲಿ ಆಕೆಯ ಮುಂಡ ಪತ್ತೆಯಾಗಿತ್ತು. 

ಆಕೆಯ ಕೈಯಲ್ಲಿದ್ದ ಟ್ಯಾಟೂ ಮತ್ತು ತೋಳಿನಲ್ಲಿದ್ದ ಓಂ ಗುರುತಿನಿಂದಾಗಿ ಶವವನ್ನು ಗುರುತಿಸಲಾಗಿತ್ತು. ಪತಿ ಸಿದ್ದೇಶ್‌ ಗೌರವ್‌ ಮತ್ತು ಆತನ ತಂದೆ ತಾಯಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದರು.ಶವವನ್ನು ಎಸೆಯಲು ಸಹಕರಿಸಿದ ಇಬ್ಬರು ವ್ಯಕ್ತಿಗಳನ್ನೂ ವಶಕ್ಕೆ ಪಡೆದಿದ್ದಾರೆ. 

ತನಿಖೆ ಮುಂದುವರೆಸಿದ ಪೊಲೀಸರು ಶಹಾಪುರ್‌-ನಾಸಿಕ್‌ ರಸ್ತೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಡ್‌ಶೀಟ್‌ನಲ್ಲಿ ಸುತ್ತಿ ಪ್ಲ್ರಾಸ್ಟಿಕ್‌ ಚೀಲದಲ್ಲಿ ಹಾಕಿ ಎಸೆಯಲಾಗಿದ್ದ ರುಂಡವನ್ನು ಪತ್ತೆ ಹಚ್ಚಿದಾರೆ.

Advertisement

ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದರಿಂದ ಪತಿ ಕುಪಿತನಾಗಿ ಆಕೆಯನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next