Advertisement

ನಡೆ-ನುಡಿ ಒಂದಾದರೆ ಶ್ರೇಷ್ಠತೆ: ಗೊಗ್ಗೆಹಳ್ಳಿ ಶ್ರೀ

12:04 PM Oct 20, 2018 | |

ಕಲಬುರಗಿ: ನಡೆ-ನುಡಿ ಒಂದಾದಲ್ಲಿ ಹಾಗೂ ತನ್ನತ್ತ ಬರುವ ಭಕ್ತರ ಏಳ್ಗೆ ಬಯಸಿ ಅವರ ಸಮಸ್ಯೆಗಳಿಗೆ ಪರಿಹಾರ ಮತ್ತು ಸಮಾಧಾನ ಹೇಳುವರೇ ನಿಜವಾದ ಗುರು ಎಂದು ಗೊಗ್ಗೆಹಳ್ಳಿ ಸಂಗಮೇಶ್ವರ ಶಿವಾಚಾರ್ಯರು ನುಡಿದರು.

Advertisement

ನಗರದ ಕೆಸರಟಗಿ ರಸ್ತೆ ಸಮಾಧಾನದಲ್ಲಿ ಮೌನಯೋಗಿ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶುಕ್ರವಾರ 40 ದಿನಗಳ ಕಾಲ ಧ್ಯಾನಮಂದಿರದಲ್ಲಿ ನಡೆದ ರುದ್ರಪಠಣ ಹಾಗೂ ಗುರು ಮಾಸಾಚರಣೆ ಸಮಾರೋಪ, ವಿಜಯದಶಮಿ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ
ಶ್ರೀಗಳು ಆಶೀರ್ವಚನ ನೀಡಿದರು. 

ತಾಯಿ ಬಿಟ್ಟರೆ ಕ್ಷಮಿಸುವರು ಯಾರಾದರೂ ಇದ್ದರೆ ಗುರು ಮಾತ್ರ. ಆತ್ಮಬಲ ವೃದ್ಧಿಸುವ ಗುಣ ಗುರುವಿನಲ್ಲಿರುತ್ತದೆ. ಇದೇ ಹಿನ್ನೆಲೆಯಲ್ಲಿ ಗುರುವಿಗೆ ತನ್ನದೇ ಸ್ಥಾನಮಾನವಿದೆ ಎಂದು ಹೇಳಿದರು.

ಚಲನಚಿತ್ರ: ವೀರಶೈವ-ಲಿಂಗಾಯತ್‌ ಸಮಾಜಕ್ಕೆ ಭದ್ರ ಅಡಿಪಾಯ ಹಾಕಿರುವ ಹಾನಗಲ್‌ ಕುಮಾರೇಶ್ವರರ ಕುರಿತು ಚಲನಚಿತ್ರ ಹಾಗೂ ಸಾಕ್ಷ್ಯಾಚಿತ್ರ ಹೊರತರಲು ಉದ್ದೇಶಿಸಲಾಗಿದೆ. ಕುಮಾರೇಶ್ವರ ಅವರು ಜೀವನಪೂರ್ತಿ ಸಮಾಜಕ್ಕಾಗಿ ದುಡಿದಿದ್ದಾರೆ. ಸ್ವಂತಕ್ಕಾಗಿ ಏನು ಮಾಡಿಲ್ಲ. ಸಮಾಜವೇ ಸಂಪತ್ತು ಎಂಬುದಾಗಿ ತಿಳಿದುಕೊಂಡಿದ್ದರು. ಅಂತಹವರ ಜೀವನ ಚರಿತ್ರೆಯನ್ನು ತೆರೆ ಮೇಲೆ ತರಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಚಿತ್ರಕಥೆ ನಿರ್ಮಾಣ-ನಿರ್ದೇಶಕತ್ವ ನಡೆದಿದೆ. ಚಿತ್ರ ನಿರ್ಮಾಣಕ್ಕೆ 2 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಜಡೆ ಹಿರೇಮಠದ ಅಮರೇಶ್ವರ ಮಹಾಸ್ವಾಮೀಜಿ, ಯಾವುದೇ ಗುರುಗಳ ಹತ್ತಿರ ಸಮಾಧಾನ ಮತ್ತು ಶಾಂತಿ ಸಿಕ್ಕರೆ ಅದೇ ದೊಡ್ಡ ಆಶೀರ್ವಾದ ಎಂದು ಹೇಳಿದರು. ಭೈರಾಮಡಗಿ ವಿಜಯಕುಮಾರ ಸ್ವಾಮೀಜಿ ಹಾಜರಿದ್ದರು.

Advertisement

ಪ್ರೊ| ನಿಂಗಮ್ಮ ಪತಂಗೆ ಪ್ರಾಸ್ತಾವಿಕ ಮಾತನಾಡಿ, ಗುರುಮಾಸಾಚರಣೆ ಅಂಗವಾಗಿ ದಿನಾಲು ಬೆಳಗಿನ ಜಾವ 4:30ಕ್ಕೆ ಪ್ರಾರ್ಥನೆ ಮಾಡುವಲ್ಲಿ ಹೊಸ ಚೈತನ್ಯ ಹಾಗೂ ಶಕ್ತಿ ಅಡಗಿದೆ ಎಂದರು. ನಿವೃತ್ತ ಶಿಕ್ಷಕ ಶಿವಶಂಕರ ಇಟಗಿ ನಿರೂಪಿಸಿದರು. ನಂತರ ಮೌನಯೋಗಿಗಳ ತುಲಾಭಾರ,
ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು.

ಪಾದಯಾತ್ರೆ ಭಕ್ತರಿಗೆ ಮಹಾಪ್ರಸಾದ

ಸೊಲ್ಲಾಪುರ: ತುಳಜಾಪುರದ ಅಂಬಾ ಭವಾನಿ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಸೇವಾ ಮಂಡಳ ವತಿಯಿಂದ ಅಕ್ಕಲಕೋಟ-ಹನ್ನೂರ ರಸ್ತೆಯಲ್ಲಿ ಅ. 20 ರಿಂದ 22ರ ವರೆಗೆ ಮಹಾಪ್ರಸಾದ ಹಾಗೂ ಔಷಧೋಪಚಾರ ವ್ಯವಸ್ಥೆ ಮಾಡಲಾಗುವುದು ಎಂದು ಬಸವರಾಜ ಅಳ್ಳೋಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಮಂಡಳದ ವತಿಯಿಂದ ತುಳಜಾಪುರ ಪಾದಯಾತ್ರಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ತಾಲೂಕು ವೈದ್ಯಕೀಯ ಅಧಿಕಾರಿ ಡಾ| ಕರಜಖೇಡಕರ್‌, ಗಣೇಶ ಅಳ್ಳೋಳಿ, ಪರಮೇಶ್ವರ ಬಿರಾಜದಾರ ಹಾಗೂ ಮತ್ತಿತರರು ಔಷಧೋಪಚಾರ ಮಾಡಲಿದ್ದಾರೆ ಎಂದು ಹೇಳಿದರು. ಮಂಡಳದ ಮಹೇಶ ಪೂಜಾರಿ, ನಿಲಕಂಠ ಕಾಪಸೆ, ವಿಕ್ರಾಂತ ಅಳ್ಳೋಳಿ, ಶರಣು ಕಾಪಸೆ, ರಾಜು ಮಾಶಾಳೆ, ಅನಿಲ ಕಟಾರೆ, ಪ್ರಶಾಂತ ಹಾರಕೂಡ, ವಿಶಾಲ ಕೋಂಪಾ, ನಾಗು ಬಹಿರಗೊಂಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next