Advertisement

ತೆನೆಹೊತ್ತಕೈ: ಕಾರ್ಯಕರ್ತರಲ್ಲಿ ಸಂಭ್ರಮ

10:41 AM May 20, 2018 | Team Udayavani |

ಕಲಬುರಗಿ: ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದರಿಂದ ಜತೆಗೆ          ರಾಜ್ಯಪಾಲರು ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು.

Advertisement

ಮೂರು ದಿನದ ಬಿಜೆಪಿ ಸರ್ಕಾರ ಅಂತ್ಯಗೊಂಡು ಹೊಸ ಸರ್ಕಾರ ರಚನೆಗೆ ಅವಕಾಶ ನೀಡುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದ ಕಚೇರಿ ಎದರು ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಮಜರ್‌ ಅಲ್ಲಾಂಖಾನ್‌, ಕಿರಣ್‌ ದೇಶಮುಖ, ಭೀಮರಾವ ತೆಗಲತಿಪ್ಪಿ, ಈರಣ್ಣ ಝಳಕಿ, ಫಾರೂಕ್‌ ಮನಿಯಾಲ್‌, ಸಂತೋಷ ಪಾಟೀಲ ದಣ್ಣೂರ, ಶಿವಾನಂದ ಹೊನಗುಂಟಿ, ವಿಶಾಲ ಪಾಟೀಲ, ಪ್ರಶಾಂತ ಪಾಟೀಲ ಮಾಹೂರ ಹಾಗೂ ಇತರರು ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜೆಡಿಎಸ್‌ ಕಚೇರಿ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ನಗರದ ಸಾರ್ವಜನಿಕ ಉದ್ಯಾನವನದ ಜೆಡಿಎಸ್‌ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಮುಖರಾದ ದೇವೆಗೌಡ ತೇಲೂರ್‌, ಮನೋಹರ್‌ ಪೋದ್ದಾರ್‌, ಮೈಹಿಮೂದ್‌ ಖುರೇಷಿ, ಶಿವಾನಂದ ದ್ಯಾಮಗೊಂಡ, ಡಾ| ಕೇಶವ ಖಾಬಾ, ಶಂಕರ ಕಟ್ಟಿಸಂಗಾವಿ, ಮಾಣಿಕ ಶಾಪುರಕರ, ಹಣಮಂತರಾವ ಸನಗುಂದಿ, ಭವಾನಿಕುಮಾರ ವಳಕೇರಿ, ಕಿರಣ ಪಾಟೀಲ, ದಿಲೀಪ ಹೊಡಲಕರ್‌, ಸುರೇಶ ಭರಣಿ, ನಾಗಣ್ಣ ಶೇರಿಕಾರ ಹಾಗೂ ಮುಂತಾದವರಿದ್ದರು. 

ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತ: ಕಲಬುರಗಿ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿರುವುದನ್ನು ಸ್ವಾಗತಿಸಿ ನಗರದ ಸರರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಜೆಡಿಎಸ್‌ ಮುಖಂಡರಾದ ಎಂ.ಬಿ ಅಂಬಲಗಿ, ಸುರೇಶ ಮಹಾಗಾಂವಕರ್‌, ಸುವರ್ಣಾ ಜವಳಿ, ಶಾಮರಾವ ಸೂರನ್‌, ವಿಠಲ ಜಾಧವ, ಚಾಂದಪಾಶಾ ಜಮಾದಾರ, ಲಕ್ಷ್ಮಣ ಕಟ್ಟಿಮನಿ, ಸೂರ್ಯಕಾಂತ ಜಿವಣಗಿ, ವಿಜಯಕುಮಾರ ಸಾವಳಗಿ, ಗೌತಮ ಕಾಳೆ, ಸುನಿಲಕುಮಾರ, ಕಿಶೋರ ಚೌವ್ಹಾಣ, ಲಕ್ಕಿನ ಸಿಂಗ್‌ ಸರರ್ದಾರಜಿ, ನಂದು ಪವಾರ, ಗುಂಡುಸಿಂಗ್‌, ಸುನೀಲಕುಮಾರ, ವಿಜಯಕಾಂತ, ಮಲ್ಲಿಕಾರ್ಜುನ, ಚಂದ್ರಶೇಖರ, ಯೂಸೂಫ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next