Advertisement

ಡ್ರೋನ್‌ ಮೂಲಕ ಆಸ್ತಿ ಸರ್ವೇ ಆರಂಭ

07:54 PM Apr 01, 2021 | Team Udayavani |

ದತ್ತು ಕಮ್ಮಾರ

Advertisement

ಕೊಪ್ಪಳ: ಜನರ ಆಸ್ತಿಗಳಿಗೆ ಡಿಜಿಟಲೀಕರಣದ ರೂಪ ನೀಡಿ ಅದಕ್ಕೊಂದು ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಾಮಿತ್ವ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 141 ಗ್ರಾಮಗಳ ಜನರ ಆಸ್ತಿಗಳ ಸರ್ವೇ ಆರಂಭವಾಗಿದೆ. ಗ್ರಾಪಂ-ಸರ್ವೇ ವಿಭಾಗದ ಅಧಿ  ಕಾರಿಗಳ ತಂಡ ಜಂಟಿಯಾಗಿ ಸರ್ವೇ ಕಾರ್ಯ ಆರಂಭಿಸಿದೆ.

ಹೌದು. ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗಳ ಸರ್ವೇಯ ನಿಖರ ಮಾಹಿತಿ ಸರ್ಕಾರದ ಬಳಿಯೇ ಇಲ್ಲ. ಆಸ್ತಿಗಳ ವರ್ಗಾವಣೆ, ವಿವಾದ, ಕೋರ್ಟ್‌ ಕಟ್ಲೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಇವುಗಳನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವೇ ಸ್ವಾಮಿತ್ವ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಡಿ ಜನರ ಆಸ್ತಿಗಳನ್ನು ಒಂದು ಬಾರಿ ಸರ್ವೇ ಮಾಡಿ ಅವರ ಆಸ್ತಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಿದರೆ, ಕಾರ್ಡ್‌ ಮೂಲಕ ಜನರು ಮುಂದೆ ಹಲವು ಸೌಲಭ್ಯ ಪಡೆಯಲು ನೆರವಾಗಲಿದೆ. ಈಗಾಗಲೇ ರಾಜ್ಯದಲ್ಲೂ ಸ್ವಾಮಿತ್ವದಡಿ ಸರ್ವೇಯು ಆಯ್ದ ಜಿಲ್ಲೆಗಳಲ್ಲಿ ಭರದಿಂದ ಸಾಗಿದೆ. ಕೊಪ್ಪಳ ಜಿಲ್ಲೆಯ 141 ಗ್ರಾಮಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ತಾಲೂಕು ಹಂತದ ಸರ್ವೇ ವಿಭಾಗದ ಅಧಿ ಕಾರಿಗಳ ಜಂಟಿಯಾಗಿ ಜನರ ಪ್ರತಿಯೊಂದು ಆಸ್ತಿಯನ್ನು ಸರ್ವೇ ಮಾಡಲಿದ್ದಾರೆ.

ಹೇಗೆ ನಡೆಯುತ್ತೆ ಸರ್ವೇ?: 141 ಗ್ರಾಮದ ಗ್ರಾಪಂವಾರು ಮೊದಲು ಜನರ ಮನೆ ಬಾಗಿಲಿಗೆ ತೆರಳಿ ನಿಗ ದಿತ ಫಾರಂನಲ್ಲಿ ಅವರ ಸ್ವಯಂ ಆಸ್ತಿಯ ಮಾಹಿತಿ ಕ್ರೋಢೀಕರಣ ಮಾಡಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ. ತಮ್ಮ ಗ್ರಾಪಂನಲ್ಲಿರುವ ಆಸ್ತಿ ಮಾಹಿತಿಗೂ ಜನರು ನೀಡುವ ಆಸ್ತಿ ಮಾಹಿತಿ ತಾಳೆ ಹಾಕುತ್ತಾರೆ. ಬಳಿಕ ಅವರ ಮನೆ ನಾಲ್ಕೂ ಮೂಲೆಗಳಿಗೆ ಬಣ್ಣ ಬಳಿಯುತ್ತಾರೆ. ಒಂದು ವೇಳೆ ಖಾಲಿ ಜಾಗ ಇದ್ದರೆ, ವಾಣಿಜ್ಯಕ್ಕೆ ಸ್ಥಳ ಬಳಕೆಯಾಗಿದ್ದರೂ ನಾಲ್ಕೂ ದಿಕ್ಕಿನಲ್ಲಿ ಕಲ್ಲುಗಳನ್ನಿಟ್ಟು ಅದಕ್ಕೆ ಬಣ್ಣ ಬಳಿಯುತ್ತಾರೆ. ಗ್ರಾಮದ ಎಲ್ಲರ ಆಸ್ತಿಗಳ ಮೇಲೂ ಪೇಂಟಿಂಗ್‌ ಮಾಡಿದ ಬಳಿಕ ಗ್ರಾಮದ ವಿವಿಧ ಭಾಗದಲ್ಲಿ ನಿಂತು ಡ್ರೋನ್‌ ಹಾರಿಸಿ ಆ ಮೂಲಕ ಆಸ್ತಿಗಳಿಗೆ ಕಲರ್‌ ಪೇಂಟಿಂಗ್‌ ಮಾಡಿರುವುದನ್ನು ಡ್ರೋನ್‌ನಲ್ಲಿ ಸೆರೆ ಹಿಡಿಯುತ್ತಾರೆ. ಇಡೀ ಗ್ರಾಮದಲ್ಲಿ ನಾಲ್ಕಾರು ಆಯಾಮದಲ್ಲಿ ಜನರ ಆಸ್ತಿಯನ್ನು ಫೋಟೋ ಸೆರೆ ಹಿಡಿದು ದಾಖಲೆಯನ್ನು ಸಂಗ್ರಹಣೆ ಮಾಡುತ್ತದೆ. ಆ ಮಾಹಿತಿಯೇ ಸರ್ಕಾರಕ್ಕೆ ರವಾನೆಯಾಗಲಿದೆ.

55 ಗ್ರಾಮಗಳ ಮಾರ್ಕಿಂಗ್‌ ಪೂರ್ಣ: ಮೊದಲ ಹಂತದಲ್ಲಿ ಜಿಲ್ಲೆಯ 141 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಆ ಗ್ರಾಮಗಳಲ್ಲಿ ಮಾತ್ರ ಸರ್ವೇ ಕಾರ್ಯ ನಡೆದಿದೆ. ಈಗಾಗಲೇ 55 ಗ್ರಾಮಗಳ ಜನರ ಆಸ್ತಿಗಳಿಗೆ ಪೇಂಟ್‌ ಮಾಡಿ, ಮಾರ್ಕಿಂಗ್‌ ಕಾರ್ಯ ಸಹ ಪೂರ್ಣಗೊಂಡಿದೆ. ಈ ಪೈಕಿ 8 ಗ್ರಾಮಗಳಲ್ಲಿ ಡ್ರೋನ್‌ ಹಾರಿಸಿ ಜನರ ಪ್ರತಿಯೊಂದು ಆಸ್ತಿ ಸರ್ವೇ ಮಾಡಲಾಗಿದೆ. ಈ ಗ್ರಾಮದಲ್ಲಿ 34 ಸಾವಿರ ಆಸ್ತಿಗಳನ್ನು ಸೆರೆ ಹಿಡಿದು ದಾಖಲೀಕರಣ ಮಾಡಲಾಗಿದೆ.

Advertisement

ಮುಂದೆ ಆಸ್ತಿಗಳಿಗೆ ಸ್ಮಾರ್ಟ್‌ಕಾರ್ಡ್‌: ಡ್ರೋನ್‌ನಡಿ ಸೆರೆ ಹಿಡಿದ ಆಸ್ತಿಗಳಿಗೆ ನಿಖರತೆ ಆಧಾರದಲ್ಲೇ ಕೇಂದ್ರ ಸರ್ಕಾರ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಲಿದೆ. ಈ ಕಾರ್ಡ್‌ನಡಿಯೇ ಜನರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು, ಇಲ್ಲವೇ ಸರ್ಕಾರ, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯಲು ಅಲ್ಲದೇ ಇತರೆ ಸೌಲಭ್ಯವನ್ನೂ ಪಡೆಯಬೇಕಿದೆ. ಈ ಉದ್ದೇಶದಿಂದಲೇ ಪ್ರತಿಯೊಬ್ಬರ ಆಸ್ತಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಒಂದು ವೇಳೆ ಆಸ್ತಿಗಳ ವ್ಯಾಜ್ಯವು ಕೋರ್ಟ್‌ನಲ್ಲಿದ್ದರೆ ಅಥವಾ ಸರ್ವೇ ತಂಡ ಜನರ ಮನೆಗೆ ಬಂದಾಗ ಸ್ಪಂದಿಸದೇ ದಾಖಲೆಗಳನ್ನು ಹಾಜರುಪಡಿಸದೇ ಇದ್ದರೆ ಅವರ ಆಸ್ತಿಯು ಸರ್ವೇ ವ್ಯಾಪ್ತಿಯಿಂದ ಕೈ ತಪ್ಪಲಿದೆ. ಮುಂದಿನ ದಿನದಲ್ಲಿ ಇಂತಹವರು ಸರ್ಕಾರದ ಪ್ರತಿಯೊಂದು ಸೌಲಭ್ಯದಿಂದಲೂ ವಂಚಿತರಾಗುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next