Advertisement

3ನೇ ಆರೈಕೆ ಕೇಂದ್ರ ಆರಂಭ

07:23 PM May 15, 2021 | Team Udayavani |

ಹಾಸನ: ವಿವಿಧ ಮುಸ್ಲಿಂ ಸಂಘಟನೆಗಳು ,ಸ್ವಯಂ ಸೇವಕರು, ದಾನಿಗಳ ನೆರವಿನೊಂದಿಗೆ100 ಹಾಸಿಗೆ ಗಳ ಮತ್ತೂಂದು ಕೊರೊನಾಕೇರ್‌ ಸೆಂಟರ್‌ (ಸಿಸಿಸಿ) ನಗರದಲ್ಲಿಪ್ರಾರಂಭವಾಗಿದೆಪ್ರಮುಖವಾಗಿ ನಗರದ ಹ್ಯುಮಾನಿಟೇರಿಯನ್‌ ಚಾರಿ ಟಬಲ್ಸ್‌ ರ್ಸಸ್‌, ಶಮಾ ಟ್ರಸ್‌ಹಾಗೂ ಬೆಂಗ ಳೂರಿನ ಎಚ್‌.ಬಿ.ಎಸ್‌ ಆಸ್ಪತ್ರೆಸಹಯೋಗದೊಂದಿಗೆ ನಗರದ ಹೊಸಲೈನ್‌ರಸ್ತೆಯ ಈದ್ಗಾ ಮೈದಾನದಲ್ಲಿ ರುವ ಚೈಲ್ಡ್‌ಹೋಂ ಕಟ್ಟಡದಲ್ಲಿ ಕೊರೊನಾ ಕೇರ್‌ ಸೆಂಟರ್‌ಗೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರುಶುಕ್ರವಾರ ಚಾಲನೆ ನೀಡಿದರು.

Advertisement

ಬೆಂಗಳೂರಿನಲ್ಲಿರುವ ಎಚ್‌.ಬಿ.ಎಸ್‌ ಆಸ್ಪತ್ರೆವೈದ್ಯ ಡಾ. ತಾ.ಮತೀನ್‌ ಅವರು ಈ ಕೇಂದ್ರಪ್ರಾರಂಭಕ್ಕೆ ಆರ್ಥಿಕ , ವೈದ್ಯಕೀಯ ನೆರವಿನಜೊತೆಗೆ 50 ಆಮ್ಲ ಜನಕ ಸಿಲಿಂಡರ್‌ ಗಳನ್ನುಒದಗಿಸಿ ವೈದಕೀಯ ಸಲಹೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.ಜಿಲ್ಲೆಯ ಮುಸ್ಲಿಂ ಸಮುದಾಯದ ತಜ್ಞವೈದ್ಯರ ತಂಡವೂ ಸಹ ಆರ್ಥಿಕ ನೆರವು ನೀಡಿಉಚಿತ ಸೇವೆ ಯನ್ನು ಒದಗಿಸಲು ಮುಂದಾಗಿದೆ.

ಮುಸಲ್ಮಾನ ಸಮು ದಾ ಯದ ಸುಮಾರು50 ಮಂದಿ ಯುವಕರು ಹಾಗೂ ಹಿರಿಯರನ್ನೊಳ ಗೊಂಡ ಸಮರ್ಪಿತ ಸ್ವಯಂ ಸೇವಾ ತಂಡಸೋಂಕಿತರ ನೆರವಾಗುತ್ತಿದೆ.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು, ಸೋಂಕಿತರ ಚಿಕಿತ್ಸೆಗೆಜಿಲ್ಲೆಯಲ್ಲಿ ಇದೊಂದು ದೊಡ್ಡ ಕೊಡುಗೆ.ಹಲವು ಸಂಘ ಸಂಸ್ಥೆ ಗಳು ಇಂತಹುದೇಪ್ರಯತ್ನಕ್ಕೆ ಕೈ ಜೊಡಿಸಿದರೆ ವೈದ್ಯ ಕೀಯ ಸೌಲಭ್ಯವ್ಯವಸ್ಥೆಗೆ ಇನ್ನಷ್ಟು ಬಲ ಬರಲಿದೆ ಎಂದರು.ಈಗಾಗಲೇ ಸರ್ಕಾರದ ವತಿಯಿಂದ ನಗರದಶ್ರೀ ಧರ್ಮಸ್ಥಳ ಮಂಜುನಾಥೇಶ್ವರಆಯುರ್ವೇದ ಕಾಲೇ ಜಿನ ‌ಲ್ಲಿ 300 ಹಾಸಿಗೆಗಳಕೊರೊನಾ ಕೇರ್‌ ಸೆಂಟರ್‌ ಪ್ರಾರಂಭಿಸಲಾಗಿದೆ.

ನಗರದ ಕೆ.ಆರ್‌.ಪುರಂ. ನಲ್ಲಿರುವ ಮುಸ್ಲಿಂಹಾಸ್ಟೆಲ್‌ನಲ್ಲಿ 100 ಹಾಸಿಗೆಗಳ ಕೊರೊನಾಕೇರ್‌ ಸೆಂಟರ್‌ ಪ್ರಾರಂಭಿಸಿದ್ದು, ಈಗ 3ನೇಕೊರೊನಾ ಕೇರ್‌ ಸೆಂಟರ್‌ ಹಾಸನ ನಗರದಲ್ಲಿಪ್ರಾರಂಭವಾಗುತ್ತಿದೆ ಎಂದು ಹೇಳಿದರು.ಜಿಲ್ಲೆಗೆನಿಗದಿಪಡಿಸಲಾದ ಕೋಟಾದಂತೆಪೂರೈಕೆ ಯಾಗುವ ಆಮ್ಮಜನಕದಲ್ಲಿ ಈ ನೂತನಕೊರೊನಾ ಕೇರ್‌ ಕೇಂದ್ರಕ್ಕೂ ಆಕ್ಸಿಜನ್‌ ಒದಗಿಲಾ ಗುವುದು.

ಅಲ್ಲದೆ ನೂತನ ಕೇರ್‌ ಕೇಂದ್ರದಲ್ಲಿಕೆಲಸ ಮಾಡುವ ಸ್ವಯಂ ಸೇವಕರು ಹಾಗೂಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ಹಾಕಿಸುವಂತೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಡೀಸಿ ಸೂಚನೆ ನೀಡಿದರು.ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಹಾಗೂ ಜಿಪಂ ಸಿಇಒ ಬಿ.ಎ ಪರಮೇಶ್‌ಮಾತ ನಾಡಿ ಮುಸ್ಲಿಂ ಸಂಘಟನೆಗಳ ಸಮಾಜಮುಖೀ ಪ್ರಯ ತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಸರ್ಕಾರದೊಂದಿಗೆ ಸಮುದಾದ ಸಹಭಾಗಿತ್ವಶ್ಲಾಘನೀಯ ಎಂದರು.ಈ ಕೇಂದ್ರ ಪ್ರಾರಂಭಕ್ಕೆ ಕಾರಣರಾದಹಾಗೂ ಸಹಕಾರ, ಆರ್ಥಿಕ ನೆರವುಮಾರ್ಗದರ್ಶನ ಮತ್ತು ಸೇವೆ ನೀಡುತ್ತಿರುವಬೆಂಗಳೂರಿನ ಎಚ್‌ ಬಿಎಸ್‌ ಆಸ್ಪತ್ರೆ ಡಾ ತಾ.ಮತೀನ್‌ ಉಚಿತ ಸೇವೆ ಒದಗಿಸುತ್ತಿ ರುವವೈದ್ಯರು ಹಾಗು ಕೊರ್‌ ಕಮಿಟಿ ಸದಸ್ಯ ಡಾ.ಷರೀಫ್, ಹಾಸನದ ಹ್ಯುಮ್ಯಾ ನಿ ಟೇರಿಯನ್‌ಸರ್ವೀಸ್‌ ಸಂಸೆ §ಯ ಮುಖ್ಯಸ್ಥ ಸದರುಲ್ಲಾಖಾನ್‌ ಅವರು ಕೊರೊನಾ ಕೇರ್‌ ಸೆಂಟರ್‌ಪ್ರಾರಂಭದ ಉದ್ದೇಶ ಆಶಯ ನೀಡಲಾಗುವಸೌಲಭ್ಯಗಳನ್ನು ವಿವರಿಸಿದರು.ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ವತಿಯಿಂದಒಂದು ಆಕ್ಸಿಜನ್‌ ಜನರೇಟರ್‌ ಯಂತ್ರ ವನ್ನುನೂತನ ಕೊರೊನಾ ಕೇರ್‌ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next