Advertisement

ಬಳ್ಕೂರು, ಗುಲ್ವಾಡಿ, ಕಂಡಲೂರು ಭಾಗದಲ್ಲಿ ಮರಳುಗಾರಿಕೆ ಆರಂಭ

10:06 AM Nov 01, 2019 | sudhir |

ಬಸ್ರೂರು : ಕಳೆದ ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಮರಳು ಗಾರಿಕೆಗೆ ಈಗ ಮರು ಜೀವ ಬಂದಿದೆ. ಈಗ ಬಳ್ಕೂರು-ಗುಲ್ವಾಡಿ-ಕಂಡೂÉರು ಬ್ಲಾಕ್‌ ಮತ್ತು ಹಳ್ನಾಡು-ಜಪ್ತಿ ಬ್ಲಾಕ್‌ನಲ್ಲಿ ಕಂಡೂÉರು ಸೇತುವೆ ಪೂರ್ವಭಾಗದಲ್ಲಿ ನಾನ್‌ ಸಿಆರ್‌ಝಡ್‌ ಪ್ರದೇಶದಲ್ಲಿ ಮಾತ್ರ ಇಬ್ಬರಿಗೆ ಮರಳುಗಾರಿಕೆಗೆ ಅನುಮತಿ ನೀಡಿದ್ದು ಸಾಂಪ್ರದಾಯಿಕ ಮರಳುಗಾರಿಕೆ ಆರಂಭಗೊಂಡಿದೆ.

Advertisement

ಕಟ್ಟಡ ಕಾರ್ಮಿಕರ, ಕಟ್ಟಡ ನಿರ್ಮಾಣಕಾರರ ಬಹುದಿನಗಳ ಕನಸು ಈಗ ನನಸಾಗಿದೆ. ಬಹುತೇಕ ಕಾರ್ಮಿಕರಿಗೆ ಉದ್ಯೋಗ ಲಭಿಸಿದಂತಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಈ ಬ್ಲಾಕ್‌ಗಳಲ್ಲಿ ಮರಳುಗಾರಿಕೆಗೆ ಸರಕಾರ ಅನುಮತಿ ನೀಡಿದೆ. ಜೂ.5 ರಿಂದ ಅ.5 ರವರೆಗೆ ಮರಳುಗಾರಿಕೆಗೆ ಅವಕಾಶವಿರುವುದಿಲ್ಲ.

ಮರಳುಗಾರಿಕೆಯಲ್ಲಿ ಸಾಂಪ್ರದಾಯಿಕ ಮರಳು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಇವರಿಗೆ ದೋಣಿ ಲೆಕ್ಕದಲ್ಲೊ, ಲಾರಿ ಲೋಡ್‌ ಲೆಕ್ಕದಲ್ಲೊ ಸಂಬಳ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿದು ಬಂದಿದೆ.
ಬಸ್ರೂರು ಆಸುಪಾಸಿನ ಕಾರ್ಮಿಕರ ಜತೆ ಉತ್ತರ ಭಾರತದಿಂದ ಕೆಲಸಕ್ಕಾಗಿ ಆಗಮಿಸಿರುವ ಮರಳು ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇಲೆ ಹೇಳಿದ ಎರಡು ಬ್ಲಾಕ್‌ಗಳಲ್ಲಿ ಎಂಬತ್ತಾರು ಸಾವಿರ ಮೆಟ್ರಿಕ್‌ ಟನ್‌ ಮರಳನ್ನು ಇಲ್ಲಿ ತೆಗೆಯಲಾಗುತ್ತದೆ.

ಮರಳನ್ನು ಲಾರಿಗೆ ಸಾಗಿಸುವಾಗ ಯುನಿಟ್‌ ಲೆಕ್ಕದಲ್ಲಿ ಲೋಡ್‌ ಮಾಡಲಾಗುತ್ತದೆ. ಒಂದು ಲಾರಿ ಮರಳು ಎಂದರೆ ಹತ್ತು ಟನ್‌ ಅಥವಾ ಮೂರು ಯೂನಿಟ್‌ಗಳನ್ನು ಹಾಕಬಹುದಾಗಿದೆ.

ಒಂದು ಲೋಡ್‌ಗೆ ಒಂದೂವರೆ ದೋಣಿ ಮರಳು ಎಂಬ ಲೆಕ್ಕದಲ್ಲಿ ಮರಳನ್ನು ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಕುಂದಾಪುರ ತಾಲೂಕಿನ ಬಸ್ರೂರು ಸಮೀಪದ ಬಳ್ಕೂರು-ಗುಲ್ವಾಡಿ-ಕಂಡೂÉರು ಮತ್ತು ಹಳ್ನಾಡು-ಜಪ್ತಿಯನ್ನು ಬ್ಲಾಕ್‌ಗಳೆಂದು ಗುರುತಿಸಿ ನಾನ್‌ ಸಿ.ಆರ್‌ಝಡ್‌. ಪ್ರದೇಶದಲ್ಲಿ ಸಾಂಪ್ರದಾಯಕ ಮರಳುಗಾರಿಕೆ ಆರಂಭವಾಗಿದೆ. ಈ ಪರಿಸರದ ಅಂಗಡಿ-ಹೋಟೆಲ್‌ನಲ್ಲೂ ಉತ್ತರ ಪ್ರದೇಶದ ಮರಳು ಕಾರ್ಮಿಕರ ಸದ್ದುª ಕೇಳಿ ಬರುತ್ತಿದೆ.

Advertisement

ಕೆಲವರಿಗೆ ಅನುಮತಿ
ನಮ್ಮ ಮನೆ ಸಮೀಪ ಉಡುಪಿ ಜಿಲ್ಲಾಧಿಕಾರಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸುವ ಮುನ್ನ ರಾತ್ರಿ-ಹಗಲು ಅಕ್ರಮ ಮರಳು ತುಂಬಿದ ಲಾರಿಗಳ ಆರ್ಭಟ ಜೋರಾಗಿ ಇತ್ತು. ಆಗ ಯಾರಿಗೂ ಈ ಪ್ರದೇಶದಲ್ಲಿ ಮರಳು ತೆಗೆಯಲು ಅನುಮತಿ ಇರಲಿಲ್ಲ. ಈಗ ಅಂದಿನ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಕೆಲವರಿಗಷ್ಟೇ ಅನುಮತಿ ನೀಡಲಾಗಿದೆ.
-ರಾಮ ಪೂಜಾರಿ, ಬಳ್ಕೂರು ನಿವಾಸಿ.

-  ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next