Advertisement
ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗಳ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಸ್ಥಳೀಯ ಸಂಸ್ಥೆಗಳಿಗೆ ರಾಜಕೀಯವಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದವರು ಅಂದಿನ ಪ್ರಧಾನಿ ರಾಜೀವ್‌ಗಾಂಧಿ, ಅವರ ಹೆಸರಿನಲ್ಲಿ ರಾಜಕೀಯವಾಗಿ ಕಾರ್ಯಕರ್ತರನ್ನು ಮತ್ತೆ ರಾಜಕೀಯ ಮುನ್ನಡೆಗೆ ತರಲು ಈ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಹುಣಸೂರಿನಲ್ಲಿ ರಾಜಕೀಯ ಧರ್ಮಯುದ್ಧ ಆರಂಭವಾಗಿದ್ದು, ಈ ಧರ್ಮಯುದ್ಧದಲ್ಲಿ ಅಧರ್ಮಕ್ಕೆ ಸೋಲುಂಟಾಗಿ ಧರ್ಮಕ್ಕೆ ಜಯ ಸಿಗಲಿದ್ದು, ಮೂರು ಬಾರಿ ಜಯಗಳಿಸಿರುವ ಸಾಮಾಜಿಕ ಕಳಕಳಿಯುಳ್ಳ, ಸ್ನೇಹಜೀವಿ ಶಾಸಕ ಎಚ್.ಪಿ.ಮಂಜುನಾಥ್ ರಾಜಕೀಯ ಧರ್ಮ ಯುದ್ದದಲ್ಲಿ ಮತ್ತೆ ಗೆಲುವು ಸಾಧಿಸಲಿದ್ದು, ನಮ್ಮ ಪಕ್ಷದ ನಿಯಮದ ಪ್ರಕಾರ ೪ನೇ ಬಾರಿ ಶಾಸಕರಾಗಿ ಆಯ್ಕೆಯಾದರೆ ಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ತಿಳಿಸಿ ಹುಣಸೂರು ಉಪಚುನಾವಣೆ ಹಾಗೂ ಮೇಕೆದಾಟು ಪಾದಯಾತ್ರೆ ಸೇರಿದಂತೆ ನನ್ನ ಮೇಲೆ ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೂ ಎಂದಿಗೂ ಎದೆಗುಂದದ ನಾನು ನನ್ನನ್ನು ನಂಬಿ ಪಕ್ಷ ನೀಡಿರುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ, ಪದಗ್ರಹಣ ಮಾಡಿರಿವ ಪದಾಧಿಕಾರಿಗಳು ಸಹ ಯಾವುದಕ್ಕೂ ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ಸಕ್ರಿಯ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ದೊಡ್ಡ ಆಲದ ಮರವಿದ್ದಂತೆ, ಎಲ್ಲಸಮುದಾಯಗಳೂ ಈ ಆಲದ ಮರದ ಕೆಳಗೆ ಆಶ್ರಯ ಪಡೆದಿದ್ದೇವೆ. ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಪಕ್ಷ ಇನ್ನಷ್ಟು ಸದೃಢವಾಗಲಿದೆ. ಈ ಸಾಲಿನ ಅಧಿಕಾರಾವಧಿಯಲ್ಲಿ ಸರ್ಕಾರದ ತಾರತಮ್ಯದಿಂದ ಹೆಚ್ಚು ಅನುದಾನ ಕೊಡದೆ ತಾಲೂಕಿನ ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿದಂತಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬಡವರು, ಶೋಷಿತರು, ನಿರ್ಗತಿಕರು, ದಲಿತರಿಗೆ ನೀಡಿದ ಭಾಗ್ಯಗಳಿಗೆ ಅನುದಾನ ನೀಡದೆ ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯವರು ಮನೆ ಮನೆಗೆ ತೆರಳಿ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸಂಘಟನೆಗೆ ಸಮಯ ಮೀಸಲಿಡಬಢಕು. ಆಮೂಲಕ ಮತ್ತೊಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಡಬೇಕೆಂದು ಮನವಿ ಮಾಡಿದರು.
Related Articles
Advertisement