ನವದೆಹಲಿ : ಗೋವಾದಲ್ಲಿ ಭಾರಿ ನಿರೀಕ್ಷೆ ಇರಿಸಿದ್ದ ಆಮ್ ಆದ್ಮಿ ಪಾರ್ಟಿ ಕೊನೆಗೂ ೨ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಪ್ರಾಮಾಣಿಕ ರಾಜಕಾರಣಕ್ಕೆ ನಾಂದಿಯಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಬಣ್ಣಿಸಿದ್ದಾರೆ.
ಗೋವಾದಲ್ಲಿ ಎಎಪಿ ಎರಡು ಸ್ಥಾನಗಳನ್ನು ಗೆದ್ದಿದೆ. ಕ್ಯಾಪ್ಟನ್ ವೆಂಜಿ ಮತ್ತು ಎರ್ ಕ್ರೂಜ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಇದು ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣಕ್ಕೆ ನಾಂದಿಯಾಗಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಎಎಪಿಯ ಕ್ಯಾಪ್ಟನ್ ವೆಂಜಿ ವೇಗಾಸ್ ಬೆನೌಲಿಮ್ ನಲ್ಲಿ ಗೆದ್ದಿದ್ದು, ವೆಲಿಮ್‌ನಲ್ಲಿ ಎಎಪಿಯ ಎಂಜಿಯರ್ ಕ್ರೂಜ್ ಸಿಲ್ವಾ ಗೆಲುವು ಸಾಧಿಸಿದ್ದಾರೆ.
Related Articles
ಶೇಕಡಾವಾರು ಮತಗಳಿಕೆಯಲ್ಲೂ ಆಪ್ ಉತ್ತಮ ಸಾಧನೆ ಮಾಡಿದ್ದು, ಹೊಸ ಭರವಸೆ ಮೂಡಿಸಿದೆ.