Advertisement

ಪ್ಲಾಸ್ಮಾ ಥೆರಪಿ ಆರಂಭಿಸಿ: ಹಾಶ್ಮಿ

10:05 AM Jul 26, 2020 | Suhan S |

ವಿಜಯಪುರ: ಸಾವಿರಾರು ಜನರನ್ನು ಬಲಿ ಪಡೆದಿರುವ ಕೋವಿಡ್‌ ಸಾಂಕ್ರಾಮಿಕ ವೈರಸ್‌ ನಿಗ್ರಹಕ್ಕಾಗಿ ಹಾಗೂ ಸೋಂಕಿತರ ರಕ್ಷಣೆಗಾಗಿ ಜಿಲ್ಲೆಯಲ್ಲಿ ದೆಹಲಿ ಸರ್ಕಾರದ ಮಾದರಿಯಲ್ಲಿ ಪ್ಲಾಸ್ಮಾ ಥೆರಪಿ ಆರಂಭಿಸುವಂತೆ ಇಸ್ಲಾಂ ಧರ್ಮ ಗುರು ಸೈಯದ್‌ ಮೊಹ್ಮದ ತನ್ವೀರ ಹಾಶ್ಮಿ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಕೋವಿಡ್‌ ಸಾಂಕ್ರಾಮಿಕ ವೈರಸ್‌ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ಗಳಾದ ತಜ್ಞರು, ಸಂಶೋಧಕರು, ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ಸ್ವತ್ಛತಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಜಿಲ್ಲಾಡಳಿತ, ಪೊಲೀಸ್‌ ಸಿಬ್ಬಂದಿರನ್ನು ಕೃತಜ್ಞತೆ ಸಲ್ಲಿಸುತ್ತೇನೆ. ಆರೋಗ್ಯಕ್ಕಾಗಿ ಸೃಷ್ಟಿಕರ್ತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಆದರೆ ವಿಜಯಪುರ ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಹಾಗೂ ಸಾವು ಜಿಲ್ಲೆಯ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿ ಮೂಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಜೀವ ರಕ್ಷಣೆಗಾಗಿ ಜಿಲ್ಲೆಯಲ್ಲಿ ಪ್ಲಾಸ್ಮಾ ಥೆರಪಿ ಆರಂಭಿಸುವಂತೆ ಮನವಿ ಮಾಡಿದ್ದಾರೆ.

ತಜ್ಞರು, ಸಂಶೋಧಕರು ಈ ಮಹಾಮಾರಿಯನ್ನು ಬೇಗ ಗುಣಪಡಿಸಲು ಎಲ್ಲ ರೀತಿಯ ಚಿಕಿತ್ಸೆ ವಿಧಾನವನ್ನು ಅನುಸರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ಲಾಸ್ಮಾ ಥೆರಪಿಯು ಮುಖ್ಯ ಚಿಕಿತ್ಸೆಯಾಗಿದೆ. ಈಗಾಗಲೇ ದೆಹಲಿ ಸರ್ಕಾರ ಪ್ಲಾಸ್ಮಾ ಥೆರಪಿಯ ಚಿಕಿತ್ಸಾ ವಿಧಾನವನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲೂ ಈ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ವಿವರಿಸಿದ್ದಾರೆ.

ಬಿ.ಎಲ್‌.ಡಿ.ಈ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲರ ಜತೆಯಲ್ಲಿ ದೂರವಾಣಿಯಲ್ಲಿ ಸುದೀರ್ಘ‌ ಸಂಭಾಷಣೆ ನಡೆಸಿ ಈ ಚಿಕಿತ್ಸಾ ವಿಧಾನವನ್ನು ಬಿ.ಎಲ್‌.ಡಿ.ಇ. ಬಿ.ಎಂ.ಪಾಟೀಲ ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಕೇಂದ್ರ ತೆರೆಯಲು ಸಂಸ್ಥೆಯ ಅಧ್ಯಕ್ಷರಾದ ಶಾಸಕ ಎಂ.ಬಿ.ಪಾಟೀಲ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ವಿಜಯಪುರ ಜಿಲ್ಲೆಯಲ್ಲಿ ಪ್ಲಾಸ್ಮಾ ಥೆರಪಿ ಆರಂಭಿಸಿ ಜಿಲ್ಲೆಯ ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next