Advertisement
ಮೊದಲೆಲ್ಲ ಅಂಗಡಿ, ಹೊಟೇಲ್‌ಗಳು ತೆರೆದಿದ್ದಾಗ ಅವುಗಳ ಮುಂದೆ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಲಾಕ್‌ಡೌನ್ ಬಳಿಕ ಅವರ ಹೊಟ್ಟೆಗೂ ತಣ್ಣೀರು ಬಟ್ಟೆಯೇ ಗತಿ ಎಂಬಂತಾಗಿದೆ. ಇತ್ತೀಚಿನ ತನಕ ವಿವಿಧ ಸಂಘ ಸಂಸ್ಥೆಗಳು ನಗರದಲ್ಲಿ ಉಳಿದುಕೊಂಡ ವಲಸೆ ಕಾರ್ಮಿಕರಿಗೆ ಊಟ ನೀಡುತ್ತಿದ್ದಾಗ ಅದನ್ನು ಪಡೆದು ಭಿಕ್ಷುಕರು ಹಸಿವು ನೀಗಿಸಿಕೊಳ್ಳುತ್ತಿದ್ದರು. ಅದಾದ ಬಳಿಕ ಹೊಟೇಲ್‌ಗಳು ಈಗ ತೆರೆದಿದ್ದರೂ ಪಾರ್ಸೆಲ್ ವಿತರಣೆಗಷ್ಟೆ ಸೀಮಿತವಾಗಿವೆ. ಹೀಗಾಗಿ ಹಸಿವಿನಿಂದ ಬಳಲುತ್ತಿರುವ ಭಿಕ್ಷುಕರು ನಗರದ ಆಸುಪಾಸುಗಳ ಮನೆಗಳಿಗೆ ತೆರಳಿ ಭಿಕ್ಷೆ ಬೇಡುತ್ತಿದ್ದಾರೆ.