Advertisement

Jammu Kashmir; ಕಥುವಾ ದಾಳಿಗೆ ಮುನ್ನ ಗ್ರಾಮಸ್ಥರನ್ನು ಬೆದರಿಸಿ ಊಟ ತಯಾರಿಸಿದ್ದ ಉಗ್ರರು

11:14 AM Jul 11, 2024 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದ ಕಥುವಾದಲ್ಲಿ (Kathua) ಭದ್ರತಾ ಪಡೆಗಳ ವಾಹನದ ಮೇಲೆ ನಡೆದ ದಾಳಿಗೂ ಮುನ್ನ ಉಗ್ರರು ಸ್ಥಳೀಯ ಗ್ರಾಮಸ್ಥರನ್ನು ಬೆದರಿಸಿ ಅವರಿಂದ ಆಹಾರ ತಯಾರಿಸಿ ಊಟ ಮಾಡಿದ್ದರು ಎಂದು ವರದಿಯಾಗಿದೆ.

Advertisement

ಈ ಬಗ್ಗೆ ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ. ಗ್ರಾಮಸ್ಥರನ್ನು ಗನ್ ಪಾಯಿಂಟ್ ನಲ್ಲಿ ಬೆದರಿಸಿದ ಉಗ್ರರು ಬಳಿಕ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದ್ದರು.

ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕರು ಬಾಡಿ ಕ್ಯಾಮೆರಾಗಳನ್ನು (Body Camera) ಧರಿಸಿದ್ದರು. ಸೇನಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಬಯಸಿದ್ದರು. ಆದರೆ ವೀರ ಸೈನಿಕರು ಗಾಯಗೊಂಡಿದ್ದರೂ ಸಹ ಉಗ್ರರ ಯೋಜನೆಯನ್ನು ವಿಫಲಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ಸೋಮವಾರ, ಕಥುವಾ ಜಿಲ್ಲೆಯ ಬದ್ನೋಟಾ ಗ್ರಾಮದ ಬಳಿಯ ಕಡಿದಾದ ಮಚೇಡಿ-ಕಿಂಡ್ಲಿ-ಮಲ್ಹಾರ್ ಪರ್ವತದ ರಸ್ತೆಯಲ್ಲಿ ಭಯೋತ್ಪಾದಕರು ಗಸ್ತು ತಿರುಗುತ್ತಿದ್ದ ಸೇನಾಪಡೆಯ ಮೇಲೆ ದಾಳಿ ನಡೆಸಿದ್ದಾರೆ. ಕಿರಿಯ ಕಮಿಷನ್ಡ್ ಅಧಿಕಾರಿ ಸೇರಿದಂತೆ ಐವರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು.

ಇದು ಒಂದು ತಿಂಗಳ ಅವಧಿಯಲ್ಲಿ ಜಮ್ಮು ಪ್ರದೇಶದಲ್ಲಿ ನಡೆದ ಐದನೇ ಭಯೋತ್ಪಾದಕ ದಾಳಿಯಾಗಿದೆ.

Advertisement

ಮೂಲಗಳ ಪ್ರಕಾರ, ಭಯೋತ್ಪಾದಕರು ಭದ್ರತಾ ಪಡೆಗಳಿಂದ ದೂರವಿರುವ ಮತ್ತು ಕಳಪೆ ರಸ್ತೆ ಸಂಪರ್ಕವನ್ನು ಹೊಂದಿರುವ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಭದ್ರತಾ ಪಡೆಗಳು ಬಲವರ್ಧನೆಗಳನ್ನು ಕಳುಹಿಸಲು ಸಮಯ ತೆಗೆದುಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next