Advertisement
ಅದರಲ್ಲೂ, ಇಎಂಐ ಎಂಬ ಕಂತು ಸಾಲ ಪಾವತಿಸುವ ವ್ಯವಸ್ಥೆಯಿಂದ ಪ್ರತಿಯೊಂದು ಮನೆಗಳಲ್ಲೂ ತಿಂಗಳಿಗೆ ಎರಡೋ ಮೂರೋ ಇಎಂಐ ಕಮಿಟ್‌ಮೆಂಟ್‌ಗಳು ಇರುವುದನ್ನು ಕಾಣಬಹುದಾಗಿದೆ. ಇಎಂಐ ಎಂದರೆ ಈಕ್ವೇಟೆಡ್ ಮನಿ ಇನ್‌ಸ್ಟಾಲ್‌ಮೆಂಟ’. ಸರಳವಾಗಿ ಹೇಳುವುದಾದರೆ- ಕಂತು ಸಾಲ. ಮಾಡಿರುವ ಸಾಲದ ಒಟ್ಟು ಮೊತ್ತಕ್ಕೆ ಇಂತಿಷ್ಟು ಬಡ್ಡಿ ಸೇರಿಸಿ ಪ್ರತಿ ತಿಂಗಳ ಲೆಕ್ಕದಲ್ಲಿ ನಿಗದಿತ ಮೊತ್ತವನ್ನು ಕಟ್ಟುತ್ತಾ ಬರುವುದು ಅದರ ವ್ಯವಸ್ಥೆ. ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಮೊತ್ತವನ್ನು ಕಟ್ಟುವುದರಿಂದ ಹೊರೆಯಾಗದು ಎನ್ನುವುದು ಇಎಂಐನ ಹೆಗ್ಗಳಿಕೆ.
ನೂರು ಸಾರಿ ಯೋಚಿಸಿ: ಸಾಲ, ಯಾವತ್ತಿಗೂ ಶೂಲ ಎಂಬ ಹಿರಿಯರ ಮಾತು ನೆನಪಿರಲಿ. ಕಂತಿನಲ್ಲಿ ಯಾವುದೇ ವಸ್ತು ಅಥವಾ ಆಸ್ತಿ ಖರೀದಿ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ನಿಜವಾಗಿಯೂ ಅದರ ಅಗತ್ಯವಿದ್ದರೆ ಮಾತ್ರ ಖರೀದಿಸಿ. ಸಾಲ ಮತ್ತು ಇಎಂಐಗಳು ಯಾವತ್ತೂ ಅಸೆಟ್ ಎಂದು ಪರಿಗಣಿತವಾಗುವುದಿಲ್ಲ. ಏಕೆಂದರೆ, ಅವುಗಳಿಂದ ಯಾವುದೇ ಮೊತ್ತ ಉತ್ಪನ್ನವಾಗದ ಕಾರಣ. ಈ ವಿಷಯದಲ್ಲಿ, ಶಿಕ್ಷಣ ಸಾಲಕ್ಕೆ ಮಾತ್ರ ವಿನಾಯಿತಿ ನೀಡಬಹುದಾಗಿದೆ. ಏಕೆಂದರೆ, ಅದು ಬದುಕಿಗೆ ಅಸೆಟ್ ದೊರಕಿಸಿಕೊಡುವ ಮಾರ್ಗವಾಗಿರುವುದರಿಂದ ಈ ವಿನಾಯಿತಿ. ಆದರೆ, ತುರ್ತಿದ್ದರೆ ಮಾತ್ರ ಇವು ಆಪತಾºಂಧವ ಎನ್ನುವುದರಲ್ಲೂ ಸತ್ಯಾಂಶವಿದೆ. ಪರ್ಯಾಯ ಆದಾಯ ಮೂಲ ಇರಲಿ
ದೀರ್ಘಾವಧಿಯ ಕಾಲ ಕಂತು ಸಾಲ ತೀರಿಸಬೇಕಿರುವಾಗ, ಅಷ್ಟೂ ಸಮಯ ಆದಾಯ ಬರುತ್ತಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಕಂತು ಸಾಲ ತೀರಿಸಲು ಒಂದೇ ಉದ್ಯೋಗವನ್ನು ನೆಚ್ಚಿಕೊಳ್ಳದೆ, ಇನ್ನಿತರೆ ಆದಾಯದ ಮೂಲಗಳನ್ನೂ ಆಶ್ರಯಿಸಿಕೊಂಡರೆ ಅನಿಶ್ಚಿತತೆ ಇರುವುದಿಲ್ಲ.
ಕಂತು ಕಟ್ಟಲು ಮರೆಯದಿರಿ ತಿಂಗಳ ಕಂತನ್ನು ಕಟ್ಟದಿದ್ದರೆ ದಂಡದ ರೂಪದಲ್ಲಿ, ಹೆಚ್ಚುವರಿ ಹಣ ಕಟ್ಟಬೇಕಾಗುತ್ತದೆ. ಅಲ್ಲದೆ ಕ್ರೆಡಿಟ್ ಸ್ಕೋರ್ ಮೇಲೂ ದುಷ್ಪರಿಣಾಮ ಬೀರುತ್ತದೆ.
Related Articles
ನಿಮ್ಮ ಹಣಕಾಸು ಸ್ಥಿತಿಗತಿ ಚೆನ್ನಾಗಿದ್ದರೆ ಬೇಗನೆ ಮುಗಿದುಹೋಗುವ ಇಎಂಐ ಪ್ಲ್ರಾನ್ ಆರಿಸಿಕೊಳ್ಳಿ. ಆಗ ತಿಂಗಳ ಕಂತಿನ ರೂಪದಲ್ಲಿ ಹೆಚ್ಚು ಹಣ ಕಟ್ಟಬೇಕಾಗುತ್ತದೆ. ಅದಕ್ಕಿಂತ ಮಿಗಿಲಾಗಿ, ಕೆಲ ಬ್ಯಾಂಕ್‌ಗಳು ಮುಂದಿನ ತಿಂಗಳ ಇಎಂಐ ಕಂತುಗಳನ್ನು ಮುಂಚಿತವಾಗಿ ಕಟ್ಟುವ ಸವಲತ್ತನ್ನೂ ನೀಡುತ್ತವೆ. ಸಂಬಳ ಹೆಚ್ಚಳ ಮಾಡಿದರೆ, ಉಡುಗೊರೆಯಾಗಿ ಹಣ ಬಂದರೆ ಇಲ್ಲವೇ ಆರ್‌ಡಿ/ಎಫ್ಡಿ ಮೆಚೂರ್ ಆಗಿ ಹಣ ಕೈ ಸೇರಿದರೆ, ಆ ಮೊತ್ತವನ್ನು ಇಎಂಐ ಕಂತುಗಳಿಗೆ ಸೇರಿಸಿ ಕಂತು ಸಾಲ ಬಹಳ ಬೇಗ ಮುಗಿಯುವಂತೆ ಮಾಡಬಹುದು.
Advertisement
- ಹವನ