ದೋಟಿಹಾಳ: ಈಗೀನ ಹಳ್ಳಿಗಳು ಸಂಪೂರ್ಣ ಪಟ್ಟಣಗಳಾಗಿಯೂ ಬದಲಾಗಿಲ್ಲ, ಮೊದಲಿನಂತೆ ಹಳ್ಳಿಗಳಾಗಿಯೂ ಉಳಿದಿಲ್ಲ. ನೋಡಲು ಹಳ್ಳಿಯಂತೆ ಕಂಡರೂ ಗ್ರಾಮದ ಮನೆಗಳನ್ನು ಹೊಕ್ಕಾಗ ಅಲ್ಲಿ ಹಳ್ಳಿಯನ್ನು ಬಿಂಬಿಸುವ ಯಾವುದೇ ಕುರುಹು ಕಾಣುವುದಿಲ್ಲ. ಪ್ಯಾಸನ್ ಸಾಮಾನಗಳೆಲ್ಲ ಹಳ್ಳಿ ಮನೆ ಹೊಕ್ಕು ಗ್ರಾಮೀಣ ಸಂಸ್ಕçತಿ ಮಾಯವಾಗುತ್ತಿದೆ. ವಾಸ್ತವ ಹೀಗೀರುವಾಗ ಬಿಸುಕಲ್ಲು, ಒಳಕಲ್ಲು ಕಾರ್ಮಿಕ ಪಾಡು ಕೇಳುವವರಿಲ್ಲದಂತಾಗಿದೆ.
ಹಿಂದೆ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮುಗಿಸಿಕೊಂಡು ರೈತ ಮಹಿಳೆಯರು ರಾತ್ರಿ ವೇಳೆ ಮನೆಯಲ್ಲಿ ಇರುವ ಬಿಸುಕಲ್ಲನಲ್ಲಿ ಕಾಳುಗಳನ್ನು ಬೀಸಿಕೊಳ್ಳುತ್ತಿದ್ದರು. ಹಾಗೂ ಕಾರ, ಚಟ್ನಿ ಹರಿಯಲು ಒಳಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಆದರೆ ಹೀಗ ಇವುಗಳು ಬಳಸುವವರು ಇಲ್ಲದೇ ಇರುವುದರಿಂದ ಮೂಲೆ ಸೇರಿದು ಬಿಸುಕಲ್ಲು ಮತ್ತು ಒಳಕಲ್ಲು ತಯಾರಿ ಮಾಡುವವರ ಕಾರ್ಮಿಕರ ಪಾಡು ಹೇಳತ್ತಿರದಂತಾಗಿದೆ.
ಭೋವಿ ಈ ಸಮುದಾಯದವರು ದೊಡ್ಡ ದೊಡ್ಡ ಕಲ್ಲುಗಳ ಶೇಖರಣೆ ಮಾಡಿ ಅದರಲ್ಲಿ ಬಿಸುಕಲ್ಲು ಮತ್ತು ಒಳಕಲ್ಲು ಮಾಡಿ, ಅವುಗಳನ್ನು ಹೊತ್ತು ಸುತ್ತಲಿನ ಗ್ರಾಮಗಳಲ್ಲಿ ಮಾರುವರು. ರೈತಾಪಿ ವರ್ಗದವರೆ ಇವರ ಗ್ರಾಹಕರು. ರೈತರ ಬೇಡಿಕೆಗೆ ತಕ್ಕಂತೆ ಸಣ್ಣ, ದೊಡ್ಡ ಗಾತ್ರದ ಬಿಸುಕಲ್ಲು ಮತ್ತು ಒಳಕಲ್ಲು ಮಾಡಿ ಮಾರುತ್ತಾರೆ. ಇದರಿಂದ ಬರುವ ಪುಡಿಗಾಸಿನಿಂದ ನಿತ್ಯ ಜೀವನ ಸಾಗಿಸುತ್ತಾರೆ. ಬಿಸುಕಲ್ಲು ಮತ್ತು ಒಳಕಲ್ಲು 600ರೂಪಾಯಿಯಿಂದ ಸಾವಿರಗೆ ಮಾರುತ್ತಾರೆ. ಹೆಚ್ಚಾಗಿ ಗ್ರಾಮೀಣ ಭಾಗದ ರೈತರು, ಕಾರ್ಮಿಕರು ಬಳಸುತ್ತಾರೆ. ಒಂದು ಬಿಸುಕಲ್ಲು ಮತ್ತು ಒಳಕಲ್ಲು ಮಾರಿದರೆ ಇವರಿಗೆ ಸುಮಾರು 150ರೂ.ಯಿಂದ 200 ರೂಪಾಯಿವರಗೆ ಅಲ್ಪ ಆದಾಯ ಬರುತ್ತದೆ. ಇದರಲ್ಲಿ ಇವರು ಜೀವನ ಸಾಗಿಸಬೇಕು.
ಈ ಹಿಂದೇ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಬಿಸುಕಲ್ಲು ಮತ್ತು ಒಳಕಲ್ಲುಗಳ ಕಂಡುಬರುತ್ತಿತ್ತು. ಆದರೆ ಬದಲಾದ ಆಧುನಿಕ ದಿನದಲ್ಲಿಳಿವುಗಳನ್ನು ಬಳಕೆ ಮಾಡುವವರು ಕಣ್ಮರೆಯಾಗುತಿದ್ದಾರೆ. ಕಾರಣ ಬಿಸುಕಲ್ಲು ಮತ್ತು ಒಳಕಲ್ಲು ಜಾಗಕ್ಕೆ ಯಂತ್ರಗಳು ಹಳ್ಳಿಗಳನ್ನು ಪ್ರವೇಶಿಸಿದ ಮೇಲೆ ಬಳಸುವವರು ಕೈಬಿಟ್ಟು ಯಂತ್ರದ ಮುಖಾಂತರ ಕಾಳುಗಳನ್ನು ಬೀಸುವದು. ಯಂತ್ರದಲ್ಲಿ ಕಾರ, ಚಟ್ನಿ ಹರಿಯನ್ನು ಉಪಯೋಗಿಸುತ್ತಿದ್ದರು. ಹೀಗಾಗಿ ಇವುಗಳು ಕೇವಲ ಹೊಸ ಮನೆ ಪ್ರವೇಶ ಮಾಡುವಾಗ ಮತ್ತು ಮದುವೆ ವೇಳೆ ಸಂಪ್ರದಾಯಕ್ಕಾಗಿ ಇವುಗಳನ್ನು ಉಪಯೋಗಿಸುತ್ತಾರೆ. ಉಳಿದ ದಿನಗಳಲ್ಲಿ ಇವುಗಳನ್ನು ಯಾರು ಬಳಕೆ ಮಾಡದೇ ಇರುವದರಿಂದ ಈ ವೃತ್ತಿ ಮಾಡುವ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಆದುನಿಕ ಯುಗದ ಕೈಗಾರಿಕೆ ಕ್ರಾಂತಿಯಿಂದ ಇಂತಹ ಗುಡಿಕೈಗಾರಿಕೆಯ ಕಸುಬುಗಳು ಮರೆಯಾಗುತ್ತಿವೆ.
ಕಳೆದ 20ವರ್ಷಗಳಿಂದ ಈ ವೃತ್ತಿ ಮಾಡಿಕೊಂಡು ಬಂದ್ದಿದೇವೆ. ಸುಮಾರು 10-15 ವರ್ಷಗಳ ಹಿಂದೇ ಬಿಸುಕಲ್ಲು ಮತ್ತು ಒಳಕಲ್ಲುಗಳ ಬೇಡಿಕೆ ಇತ್ತು. ಇದರ ಜಾಗಕ್ಕೆ ಯಂತ್ರಗಳು ಬಂದ ಮೇಲೆ ಇವುಗಳನ್ನು ಬಳಕೆ ಮಾಡುವವರು ಕಮ್ಮಿಯಾಗಿದ್ದಾರೆ. ಸದ್ಯ ಹೊಸ ಮನೆ ಪ್ರವೇಶ ಮಾಡುವಾಗ ಮತ್ತು ಮದುವೆ ವೇಳೆ ಪೂಜೆ ಮಾಡಲು ಮಾತ್ರ ಬಳಕೆ ಮಾಡುತ್ತಾರೆ. ಇದನ್ನು ಬಿಟ್ಟು ಬೇರೆ ಕೆಲಸ ಮಾಡಲು ನಮ್ಮಗೆ ಬರುವುದಿಲ್ಲ. ಇದರಿಂದ ಬಂದ ಅಲ್ಪಸ್ವಲ್ಪ ಆದಾಯದಿಂದ ಜೀವನ ಸಾಗಿಸುತ್ತಿದೇವೆ.
-ವಿಜಯಲಕ್ಷ್ಮೀ, ಬಿಸುಕಲ್ಲು. ಒಳಕಲ್ಲುಗಳ ಮಹಿಳಾ ಕಾರ್ಮಿಕೆ.
-ವರದಿ: ಮಲ್ಲಿಕಾರ್ಜುನ ಮೆದಿಕೇರಿ.