Advertisement
ವುಹಾನ್‌ನಲ್ಲಿ ವೈರಸ್ ಪತ್ತೆಯಾಗಿ, ಇಡೀ ವಿಶ್ವಕ್ಕೆ ಅಲ್ಲಿಂದ ವೈರಸ್ ಹರಡಿದ ಬಳಿಕ ಆ ಸ್ಥಳದಲ್ಲಿ ವೈರಸ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾಗಿ ಚೀನ ಹೇಳಿತ್ತು. ಆದರೆ, ಸೋಂಕು ಪ್ರಕರಣಗಳು ಈಗ ಚೀನದ ಇತರ ಭಾಗಗಳಲ್ಲಿ ಕಂಡು ಬರುತ್ತಿರುವುದು, ಕೋವಿಡ್ ರೂಪಾಂತರಗೊಂಡು ಪುನರಾ ವರ್ತನೆಯಾಗುತ್ತದೆ ಎಂಬ ವೈಜ್ಞಾನಿಕ ಅಧ್ಯಯನ ಕಾರರ ಮಾತುಗಳು ವಿವಿಧ ದೇಶಗಳ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.
Related Articles
Advertisement
ಬೀಜಿಂಗ್‌ನ ಪರಿಸ್ಥಿತಿಯಿಂದಾಗಿ ಅಲ್ಲಿಗೆ ಬರುವ ಸುಮಾರು 1,225 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅತಿ ಹೆಚ್ಚು ವಿಮಾನಗಳ ಸಂಚಾರವಿರುವ ವಿಶ್ವದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣ ಬೀಜಿಂಗ್ ಆಗಿದ್ದು, ಅಲ್ಲಿಂದಲೂ ವೈರಸ್ ಹರಡಬಹುದೇ ಎಂಬ ಭೀತಿ ಇದೆ. ಇದೇ ವೇಳೆ ಅಮೆರಿಕದಲ್ಲಿ ಪ್ರಕರಣಗಳು ಸಂಖ್ಯೆ ಏರುತ್ತಿರುವಂತೆ ಹೊಸ ಹೊಸ ಕಡೆಗಳಲ್ಲಿ ಕೇಸುಗಳು ಪತ್ತೆಯಾಗುತ್ತಿವೆ. ಈ ಕಾರಣ ಅಮೆರಿಕದೊಂದಿಗಿನ ಗಡಿ ಯನ್ನು ತುರ್ತು ಬಳಕೆಗಳಲ್ಲದ ವಿಚಾರಗಳಿಗೆ ಮುಚ್ಚುವುದಾಗಿ ಕೆನಡಾ ಹೇಳಿದೆ.
ದ.ಕೊರಿಯಾದಲ್ಲೂ ಹೊಸ 43 ಕೇಸುಗಳೂ ಪುನರಾವರ್ತನೆಯ ಸಾಧ್ಯತೆಗಳನ್ನು ಬೊಟ್ಟು ಮಾಡಿದೆ. ಜನರ ಓಡಾಟ ಹೆಚ್ಚಾಗುತ್ತಿರುವಂತೆ ಪ್ರಕರಣಗಳೂ ಏರತೊಡಗಿರುವುದು ಸಮಸ್ಯೆ ಸೃಷ್ಟಿಸಿದೆ. ನ್ಯೂಜಿಲೆಂಡ್‌ನಲ್ಲೂ ಸಮಸ್ಯೆ ಇದೇ ರೀತಿ ಇದೆ. ಇಲ್ಲೆಲ್ಲ ಸಾರ್ವಜನಿಕರ ಓಡಾಟಕ್ಕೆ, ನೈಟ್‌ಕ್ಲಬ್‌ಗಳು, ಚರ್ಚ್, ರೆಸ್ಟೋರೆಂಟ್‌ಗಳ ತೆರೆಯುವಿಕೆಗೆ ಅವಕಾಶ ಕಲ್ಪಿಸಿ ಮೂರ್‍ನಾಲ್ಕು ದಿನಗಳಾಗುತ್ತಿರವಂತೆ ಸಮ ಸ್ಯೆಗೆ ಕಾರಣವಾಗಿದೆ. ಆರ್ಥಿಕ ವ್ಯವಹಾರ ಉತ್ತೇಜನಕ್ಕೆ ಮಳಿಗೆಗಳನ್ನು ತೆರೆಯುವಂತೆಯೂ ಇಲ್ಲ, ಮುಚ್ಚಲು ಹೇಳುವಂತೆಯೂ ಇಲ್ಲ ಎನ್ನುವ ಸಂಕಷ್ಟ ದೇಶಗಳದ್ದಾಗಿದೆ ಹೆಚ್ಚು ಕಡೆಗಳಲ್ಲಿ ರೋಗ ಲಕ್ಷಣಗಳೇ ಇಲ್ಲದೆ ವೈರಸ್ ಹರಡುತ್ತಿ ರುವುದು, ಪತ್ತೆ ಹಚ್ಚುವಿಕೆ, ನಿಯಂತ್ರಣ ಇನ್ನಷ್ಟು ಸವಾಲಾಗಿದೆ ಎಂದು ಡೆನ್ಮಾರ್ಕ್‌ನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.