Advertisement
ಕುಡಿಯುವ ನೀರಿನ ನೆಪದದಲ್ಲಿ ನದಿ ಜೋಡಣೆ ಪ್ರಸ್ತಾಪಿಸಿರುವುದು ಈಗ ಭುಗಿಲೆದ್ದ ಆಕ್ರೋಶವಾಗಿದೆ. 15 ವರ್ಷಗಳ ಹಿಂದೆಯೇ ಕೇಳಿ ಬಂದಿದ್ದ ಬೇಡ್ತಿ ವರದಾ ಜೋಡಣೆ ಯೋಜನೆ ಕೇಂದ್ರಸರಕಾರದ ಗಂಗಾ ಕಾವೇರಿ ಲಿಂಕಿಂಗ್‌ಪ್ರಾಜೆಕ್ಟ್ ಭಾಗವಾಗಿತ್ತು. ಆಗಲೇ ಬೇಡ್ತಿಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಇದನ್ನು ವಿರೋಧಿಸಿತ್ತು. ಅಂದೇ ಶಾಲ್ಮಲಾ ನದಿಯಲ್ಲಿಸಹಸ್ರಲಿಂಗಕ್ಕಿಂತ ಕೆಳಭಾಗದಲ್ಲಿ ಅಣೆಕಟ್ಟು ಕಟ್ಟಿ ಅದನ್ನೂ ಕಾಡಿನಲ್ಲಿ ಚಾನೆಲ್ ಸೃಷ್ಟಿಸಿ ವರದಾ ನದಿಗೆ ಜೋಡಿಸುವ ಪ್ರಸ್ತಾಪ ಇತ್ತು. ಇಲ್ಲಿಂದನೀರು ಒಯ್ದರೆ ನದಿಯ ಕೆಳ ಭಾಗದ ಜನರ ಕಥೆ ಏನು ಎಂಬುದು ಪ್ರಶ್ನೆಯಾಗಿತ್ತು. ಇದೇಕಾರಣಕ್ಕೆ ಅನೇಕ ಹೋರಾಟಗಳೂ ನಡೆದವು. ಈ ಮೊದಲು ಬೇಡ್ತಿಗೆ ಅಣೆಕಟ್ಟು ಕಟ್ಟುವಪ್ರಸ್ತಾವ ಬಂದಾಗಲೂ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಹೋರಾಟ, ಪಾದಯಾತ್ರೆ ಎಲ್ಲ ನಡೆದಿತ್ತು. ಆ ಯೋಜನೆ ಕೂಡ ಕೈ ಬಿಡಲಾಗಿತ್ತು.
Related Articles
Advertisement
ಈಗಾಗಲೇ ಬೇಡ್ತಿ ನೀರನ್ನು ಯಲ್ಲಾಪುರ ಪಟ್ಟಣಕ್ಕೆ ಒಯ್ಯಲಾಗುತ್ತಿದೆ. ಗಂಗಾವಳಿ ನದಿನೀರನ್ನು ಕುಮಟಾ, ಅಂಕೋಲಾ, ಕಾರವಾರಕ್ಕೂ ಒಯ್ಯುವ ಪ್ರಸ್ತಾವ ಸರಕಾರದ ಮುಂದಿದೆ.ಹೀಗಿದ್ದಾಗಲೂ ಜಲಮೂಲ ಹೆಚ್ಚಿಸಿಕೊಳ್ಳುವ ಯೋಜನೆ ಜಾರಿಗೆ ತರುವ ಬದಲು ಇದ್ದಜಲ ಮೂಲವನ್ನೇ ಎತ್ತಿಕೊಂಡು ಹೋಗುವಯೋಜನೆ ಸಾಧುವಲ್ಲ. ಇದರ ವ್ಯತಿರಿಕ್ತ ಪರಿಣಾಮ ಕೂಡ ನೋಡಬೇಕಾಗಿದೆ. ನೀರು ಕೊಡುವುದಕ್ಕೆ ವಿರೋಧವಲ್ಲ,
ಬದಲಿಗೆ ಇಲ್ಲಿಯೂ ನೀರಿಲ್ಲ, ಅಲ್ಲಿಯೂ ಏನಿಲ್ಲ ಆಗುತ್ತದೆ ಎಂಬುದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ಅಂತರಂಗದ ಆತಂಕ. ಇದು ವಾಸ್ತವಿಕವಾಗಿಯೂ ನಿಜವಾದ ಉದಹಾರಣೆ ಎತ್ತಿನಹೊಳೆ ಯೋಜನೆಯಲ್ಲೂ ಇದೆ.ಈ ಮಧ್ಯೆ ಇದೇ ಬಜೆಟ್‌ನಲ್ಲಿ ಪಶ್ಚಿಮವಾಹಿನಿಗೆ ಮುಂದಿನ ಐದು ವರ್ಷದಲ್ಲಿ3986 ಕೋಟಿ ರೂ. ಮೊತ್ತದಲ್ಲಿ 1348ಕಿಂಡಿ ಅಣೆಕಟ್ಟು ಹಾಗೂ ಪ್ರಸಕ್ತ 500ಕೋ.ರೂ. ಮಂಜೂರಿ ಪ್ರಸ್ತಾವ ಇದೆ. ಇದಕ್ಕೆನೀರು ಸಿಗುವುದು ಎಲ್ಲಿಂದ? ಬೇಡ್ತಿ ಹಾಗೂ ಅದರ ಉಪ ನದಿ ಬಿಟ್ಟು ಮಾಡುತ್ತಾರಾ? ಹಾಗೆಮಾಡಿದರೆ ಆ ಭಾಗದ ರೈತರಿಗೆ ಅನ್ಯಾಯ ಆಗದೇ ಎಂಬುದೂ ಶಂಕೆ ಉಳಿದಿದೆ.
ಏನಿದು ಪ್ರಸ್ತಾವ?: ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬೇಡ್ತಿನದಿಯಿಂದ 22 ಟಿಎಂಸಿ ನೀರನ್ನು ಒಯ್ಯುವ ಕುರಿತು ಸಾಧ್ಯತಾ ವರದಿ ಸಿದ್ಧಪಡಿಸಲು ಎನ್ ಡಬ್ಲ್ಯೂಡಿಎಗೆ ಪ್ರಸ್ತಾವ ಮಾಡಲಾಗಿದೆ. ಪರಿಸರಾಸಕ್ತರ ಸಭೆ: ಈಗಾಗಲೇ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನದಿಜೋಡಣೆಯ ಬೇರೆ ಬೇರೆ ರೂಪದ ಕುರಿತುಶಂಕಿಸಿ ಮಾ.24 ರಂದು ಶಿರಸಿಯಲ್ಲಿ ಬೃಹತ್‌ಪರಿಸರಾಸಕ್ತರ ಸಭೆ ಕರೆದಿದೆ. ಈ ಸಮಿತಿಗೆಸ್ವರ್ಣವಲ್ಲೀ ಶ್ರೀಗಳು ಗೌರವಾಧ್ಯಕ್ಷರು, ಜೀವ ವೈವಿಧಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ,ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸಮಿತಿ ಸದಸ್ಯರೇ ಆಗಿದ್ದಾರೆ!.
-ರಾಘವೇಂದ್ರ ಬೆಟ್ಟಕೊಪ್ಪ