ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ದೊರೆಯುತ್ತಿರುವ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಂಕಿತರಿಗೆ ಜಿಲ್ಲೆಯ ಕೋವಿಡ್ ರೆಫರಲ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಸೇರಿ ಇನ್ಸ್‌ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ತಮಗೆ ದೊರೆಯುತ್ತಿರುವ ಚಿಕಿತ್ಸೆಯ ಬಗ್ಗೆ ಆಕ್ರೋಶಗೊಂಡಿರುವ ಸೋಂಕಿತರು, ಈ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸೋಂಕಿನ ತೀವ್ರತೆ ಆಧರಿಸಿ ವೈದ್ಯರು ರೋಗಿಗಳನ್ನು ಆಯಾ ಕೇಂದ್ರಗಳಲ್ಲಿ ದಾಖಲಿಸುತ್ತಿ ದ್ದಾರೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಂದಾಯ ಭವನವನ್ನು ಕೋವಿಡ್ ರೆಫರಲ್ ಆಸ್ಪತ್ರೆಯನ್ನಾಗಿ ಕಳೆದ ವರ್ಷವೇ ಪರಿವರ್ತಿಸಲಾಗಿದೆ. ಸದ್ಯ ಇಲ್ಲಿ 180ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ದೊರೆಯುತ್ತಿದೆ. ಕಳೆದ ವರ್ಷ ಇಲ್ಲಿ ದಾಖಲಾದ ರೋಗಿಗಳು ಶೌಚಾಲ ಯದ ಅವ್ಯವಸ್ಥೆ, ನೀರಿನ ಅಲಭ್ಯತೆ, ಶುಚಿತ್ವದ ಬಗ್ಗೆ ದಿನನಿತ್ಯ ದೂರುತ್ತಿದ್ದರು. ಇದೀಗ ಮತ್ತೆ ಇದೇ ದೂರುಗಳು ವ್ಯಕ್ತವಾಗುತ್ತಿದೆ. ಶೌಚಾಲಯ ವ್ಯವಸ್ಥೆ ಸರಿಪಡಿಸಿಲ್ಲ.
ನೀರು ಸರಬರಾಜಿನಲ್ಲಿ ಸುಧಾರಣೆ ಇಲ್ಲ. ಕುಡಿಯಲು ಬಿಸಿ ನೀರಿಗೆ ಪರ ದಾಡಬೇಕು ಎಂಬಿತ್ಯಾದಿ ದೂರುಗಳು ಕೇಳಿ ಬರುತ್ತಿವೆ. ರಾಮನಗರ ತಾಲೂಕು ಸುಗ್ಗನಹಳ್ಳಿ ಬಳಿ ಇರುವ ಆಯುಷ್ ತರಬೇತಿ ಕೇಂದ್ರದಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿಯೂ ಇದೇ ಸಮಸ್ಯೆಗಳು ಕೇಳಿ ಬಂದಿವೆ.
ಕಸ ಗುಡಿಸುವ ವ್ಯವಸ್ಥೆ ಇಲ್ಲ. ಕುಡಿಯಲು ಬಿಸಿ ನೀರು ಸಿಗುತ್ತಿಲ್ಲ. ಶೌಚಾಲಯ ಗಲೀಜು ಇತ್ಯಾದಿ ಬಗ್ಗೆ ದೂರುಗಳು ಕೇಳಿ ಬಂದಿವೆ.
ಆಹಾರ ಕೊಡದಿದ್ದರೆ ಪೌಷ್ಟಿಕತೆ ಹೇಗೆ?: ಕೋವಿಡ್ ಸೋಂಕಿತರಿಗೆ ದಿನನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಉಪಾಹಾರ ನೀಡಲಾಗುತ್ತಿದೆ. ಅಲ್ಲಿನ ಸಿಬ್ಬಂದಿಗೆ ಕಾಫಿ, ಟೀ ಕೊಡುವ ಮನಸ್ಸಾದರೆ ಮಾತ್ರ ಪೂರೈಕೆ ಆಗುತ್ತದೆ, ಇಲ್ಲದಿದ್ದರೆ ಇಲ್ಲ.
ಆಹಾರವನ್ನು ಪಾರ್ಸಲ್ ಮಾಡಿಕೊಡಲಾಗು ತ್ತಿದೆ. ಆದರೆ, ದೇಹದ ಪೌಷ್ಟಿಕತೆಗೆ ಏನೊಂದು ಕ್ರಮವಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ. ಇಮ್ಯೂನಿಟಿ ಬೆಳೆಸಿಕೊಳ್ಳಿ ಎಂದು ವೈದ್ಯರು ಪದೇ ಪದೆ ಸಲಹೆ ನೀಡುತ್ತಾರೆ. ಆದರೆ, ಸೋಂಕಿತರಲ್ಲಿ ಪೌಷ್ಟಿ ಕಾಂಶ ಹೆಚ್ಚಿಸುವ ಯಾವ ಕ್ರಮ ಪಾಲಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.