Advertisement
ಆರೋಗ್ಯ ಕ್ಷೇತ್ರದ ಉತ್ಕೃಷ್ಟ ಸೇವೆಯಲ್ಲಿ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರೋಗಕ್ಕೆ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಉಂಟಾಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಕೆಲ ದಿನಗಳಿಂದ ಸಾವಿರಕ್ಕೂ ಹೆಚ್ಚಿನ ದೈನಂದಿನ ಪ್ರಕರಣ ದಾಖಲಾಗುತ್ತಿದ್ದು, ಈ ನಡುವೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರತೊಡಗಿದೆ. ಕೆಲವು ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಐಸಿಯು, ವೆಂಟಿಲೇಟರ್ ಬೆಡ್‌ಗಾಗಿ ವಿಚಾರಿಸಿದರೆ “ಬೆಡ್ ಖಾಲಿ ಇಲ್ಲ’ ಎಂಬ ಉತ್ತರ ಕೇಳಿಬರುತ್ತಿದೆ.
Related Articles
Advertisement
230 ಮಂದಿಗೆ ವೆಂಟಿಲೇಟರ್, ಐಸಿಯುನಲ್ಲಿ ಚಿಕಿತ್ಸೆ :
ವೆಂಟಿಲೇಟರ್, ಐಸಿಯುನಲ್ಲಿ ಚಿಕಿತ್ಸೆ ಪಡೆಯು ತ್ತಿರುವವರ ಸಂಖ್ಯೆಯೂ ಏರತೊಡಗಿದೆ. ಚಿಕಿತ್ಸೆಗಾಗಿ ವೆಂಟಿಲೇಟರ್ ಅಥವಾ ಐಸಿಯು ಬೇಕು ಎಂದು ಕೆಲವೊಂದು ಕೋವಿಡ್ ರೋಗಿಗಳ ಸಂಬಂಧಿಕರು ಆಸ್ಪತ್ರೆಗಳಲ್ಲಿ ಹಠ ಹಿಡಿಯುತ್ತಿದ್ದಾರೆ. ಆದರೆ ಅವರ ರೋಗದ ಸ್ಥಿತಿಗೆ ಅದು ಅವಶ್ಯವಾಗಿರುವುದಿಲ್ಲ ಎನ್ನುತ್ತಾರೆ ವೈದ್ಯರು. ಜಿಲ್ಲೆಯ ವೆನಾÉಕ್ ಆಸ್ಪತ್ರೆಯಲ್ಲಿ 21 ಮಂದಿ, ಖಾಸಗಿ ಆಸ್ಪತ್ರೆಗಳಲ್ಲಿ 106 ಮಂದಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ, ಖಾಸಗಿ ಆಸ್ಪತ್ರೆಯಲ್ಲಿ 98 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ: ಸದ್ಯ ಆತಂಕವಿಲ್ಲ :
ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 43 ಆಸ್ಪತ್ರೆಗಳ 1914 ಬೆಡ್‌ಗಳಲ್ಲಿ 955 ಆಕ್ಸಿಜನ್ ಬೆಡ್‌ಗಳನ್ನು ಮೀಸಲಿರಿಸಲಾಗಿದ್ದು 788 ಖಾಲಿ ಇದೆ. ಆಕ್ಸಿಜನ್ ಅಲ್ಲದ 1,944 ಬೆಡ್‌ಗಳಲ್ಲಿ 956 ಬೆಡ್‌ಗಳನ್ನು ಮೀಸಲಿರಿಸಿದ್ದು ಇವುಗಳಲ್ಲಿ 706 ಖಾಲಿ ಇದೆ. ಎಚ್‌ಡಿಯು 216ರಲ್ಲಿ 111 ಬೆಡ್‌ಗಳು ಮೀಸಲಿವೆ. ಇದರಲ್ಲಿ 77 ಖಾಲಿ ಇದೆ. ಐಸಿಯು 392 ಬೆಡ್‌ಗಳಲ್ಲಿ 195ನ್ನು ಮೀಸಲಿರಿಸಲಾಗಿದೆ. ಇದರಲ್ಲಿ 132 ಖಾಲಿ ಇವೆ. ಎಚ್‌ಎಫ್ಎನ್‌ಸಿಯಲ್ಲಿ 61ರಲ್ಲಿ 31 ಮೀಸಲಿರಿಸಲಾಗಿದೆ. ಇದರಲ್ಲಿ 24 ಖಾಲಿ ಇವೆ. ವೆಂಟಿಲೇಟರ್ ಬೆಡ್‌ಗಳು ಒಟ್ಟು 158 ಇದ್ದು 78 ಮೀಸಲಿರಿಸಲಾಗಿದೆ. ಇದರಲ್ಲಿ 38 ಬಳಕೆಯಲ್ಲಿದೆ. 40 ಖಾಲಿ ಇವೆ.
ತಾಲೂಕು ಆಸ್ಪತ್ರೆಗೆ ಹೆಚ್ಚುವರಿ ವೆಂಟಿಲೇಟರ್ :
ಜಿಲ್ಲೆಯಲ್ಲಿ ಸದ್ಯಕ್ಕೆ ಕೋವಿಡ್ ರೋಗಿಗಳಿಗೆ ಬೆಡ್ ಕೊರತೆ ಇಲ್ಲ. ಜಿಲ್ಲೆಯ ತಾ| ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೆಂಟಿಲೇಟರ್ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕೆಲವೊಂದು ವೆಂಟಿಲೇಟರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹೆಚ್ಚುವರಿ 10 ವೆಂಟಿಲೇಟರ್ ಬೆಡ್ ಅಳವಡಿಸಲಾಗುವುದು. ಖರೀದಿ ಮಾಡಿ ಮತ್ತಷ್ಟು ವೆಂಟಿಲೇಟರ್ ಅಳವಡಿಸಲು ದ.ಕ. ಆಸ್ಪತ್ರೆಗಳಲ್ಲಿ ಜಾಗದ ಸಮಸ್ಯೆ ಇದೆ. ಉಡುಪಿ ಜಿಲ್ಲೆಯಲ್ಲಿ ಹತ್ತು ವೆಂಟಿಲೇಟರ್‌ಗಳು ಸರಕಾರದಿಂದ ಬಂದಿದ್ದು ಇವುಗಳನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ.
– ಡಾ| ಕಿಶೋರ್ ಕುಮಾರ್, ಡಾ|ಸುಧೀರ್‌ಚಂದ್ರ ಸೂಡ, ದ.ಕ. ಮತ್ತು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ
–ನವೀನ್ ಭಟ್ ಇಳಂತಿಲ