Advertisement

ಸೋಂಕು ಪ್ರಮಾಣ ಇಳಿಮುಖ : ಸರಕಾರಿ ಆಸ್ಪತ್ರೆಗಳಲ್ಲೇ ಖಾಲಿ ಇವೆ ಸಾವಿರಾರು ಹಾಸಿಗೆ

07:08 AM Jun 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಒಂದು ವಾರದಿಂದ ಸೋಂಕು ಇಳಿಮುಖವಾಗುತ್ತಿದ್ದು, ಆರಂಭ ದಲ್ಲಿ ಇದ್ದ ನಿಯಮವನ್ನೇ ಮರುಜಾರಿ ಗೊಳಿಸಿದರೆ ಹೊಸ ಕೊರೊನಾ ಪೀಡಿತರ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳ ಹಾಸಿಗೆಗಳೇ ಸಾಕಾಗಲಿವೆ.

Advertisement

ಸದ್ಯ ಸರಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಮತ್ತು ಆಮ್ಲಜನಕ ವ್ಯವಸ್ಥೆ ಇರುವ ಹತ್ತು ಸಾವಿರಕ್ಕೂ ಅಧಿಕ ಹಾಸಿಗೆಗಳು ಖಾಲಿ ಇವೆ. ಈ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸರಕಾರಿ ಆಸ್ಪತ್ರೆ ಹಾಸಿಗೆ ಭರ್ತಿ ಆದ ಬಳಿಕವೇ ಖಾಸಗಿ ಆಸ್ಪತ್ರೆಗೆ ದಾಖಲಿಸಬಹುದೆಂಬ ನಿಯಮ ವನ್ನು ಆರೋಗ್ಯ ಇಲಾಖೆ ಮರು ಜಾರಿಗೊಳಿಸಿದರೆ ಸರಕಾರಿ ಆಸ್ಪತ್ರೆಗಳು ಭರ್ತಿಯಾಗಲಿವೆ. ಜತೆಗೆ ಸೋಂಕು ಪೀಡಿತರ ಆರ್ಥಿಕ ಹೊರೆಯೂ ತಗ್ಗಲಿದೆ. ಇದರೊಂದಿಗೆ ಕೊರೊನೇತರ ರೋಗಿ ಗಳ ಚಿಕಿತ್ಸೆಗೂ ಅನುಕೂಲವಾಗಲಿದೆ.

ಎಪ್ರಿಲ್‌ಗ‌ೂ ಮುನ್ನ ಸರಕಾರಿ ಆಸ್ಪತ್ರೆ ಹಾಸಿಗೆಗಳು ಭರ್ತಿಯಾದ ಅನಂತರವೇ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕೆಂಬ ನಿಯಮ ಜಾರಿ ಯಲ್ಲಿತ್ತು. ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಮಾರ್ಪಡಿಸಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಮೀಸಲಿನಲ್ಲಿ ದಾಖಲಾಗುವ ರೋಗಿಗೆ ಪ್ರತೀ ದಿನ ಆಮ್ಲಜನಕ ಹಾಸಿಗೆಗೆ 8,000 ರೂ., ಸಾಮಾನ್ಯ ಹಾಸಿಗೆಗೆ 5,200 ರೂ. ವೆಚ್ಚ ಭರಿಸಲಾಗುತ್ತಿದೆ.
ಸದ್ಯ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕುಪೀಡಿತರ ಚಿಕಿತ್ಸೆಗೆ ಸರಕಾರ 62,189 ಹಾಸಿಗೆ ಮೀಸಲಿರಿಸಿದೆ. 29,508 ಭರ್ತಿ ಯಾಗಿದ್ದು, 32,681 ಖಾಲಿ ಇವೆ. 21 ಸಾವಿರ ಸಾಮಾನ್ಯ, 13 ಸಾವಿರ ಆಮ್ಲಜನಕ, 550 ವೆಂಟಿಲೇಟರ್‌, 450 ಐಸಿಯು ಹಾಸಿಗೆಗಳು ಖಾಲಿ ಇವೆ. ಸರಕಾರಿ ಆಸ್ಪತ್ರೆಗಳಲ್ಲೇ 4,900 ಸಾಮಾನ್ಯ, 5100 ಆಮ್ಲಜನಕ, 271 ವೆಂಟಿಲೇಟರ್‌, 308 ಐಸಿಯು ಹಾಸಿಗೆಗಳು ಖಾಲಿ ಇವೆ.

ಕೊರೊನೇತರರಿಗೆ ನೀಡಿ
ಎರಡು ತಿಂಗಳಿಂದ ಆಸ್ಪತ್ರೆಗಳಲ್ಲಿ ಶೇ.75ರಷ್ಟು ಹಾಸಿಗೆಗಳನ್ನು ಕೊರೊನಾಗೆ ಮೀಸಲಿಡಲಾಗಿದೆ. ಕೇರ್‌ ಸೆಂಟರ್‌, ಮನೆ ಆರೈಕೆ ಹಿನ್ನೆಲೆ ಸಾಮಾನ್ಯ ಹಾಸಿಗೆಗೆ ಬೇಡಿಕೆ ಇಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಐದು ಸಾವಿರ, ಖಾಸಗಿಯಲ್ಲಿ 15 ಸಾವಿರ ಖಾಲಿ ಇದ್ದು, ಕೊರೊನೇತರ ರೋಗಿಗಳ ಚಿಕಿತ್ಸೆಗೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಈ ಮಧ್ಯೆಯೇ, ಏಳು ಸಾವಿರಕ್ಕೂ ಅಧಿಕ ಸೋಂಕುಪೀಡಿತರು ಸರಕಾರಿ ಆಸ್ಪತ್ರೆ, ಸರಕಾರಿ ಕೋಟಾ ಬೇಡ ಎಂದು ಖಾಸಗಿ ಆಸ್ಪತ್ರೆಗಳಲ್ಲಿ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲೂ ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಸಾಮಾನ್ಯ ಹಾಸಿಗೆಗಳಲ್ಲಿದ್ದಾರೆ. ಬೆಂಗಳೂರಿನಲ್ಲಿ ಮೇ ಮೊದಲ ವಾರ ಸೋಂಕುಪೀಡಿತರು ಆಸ್ಪತ್ರೆ ಹಾಸಿಗೆಗಾಗಿ ಪರದಾಡುತ್ತಿದ್ದರು. ಈಗ ಎರಡೂವರೆ ಸಾವಿರ ಆಮ್ಲಜನಕ ಹಾಸಿಗೆ ಸೇರಿದಂತೆ ಎಂಟು ಸಾವಿರಕ್ಕೂ ಅಧಿಕ ಹಾಸಿಗೆಗಳು ಖಾಲಿ ಇವೆ. ಮೀಸಲಿಟ್ಟ 13,383ರಲ್ಲಿ ಕೇವಲ 4,920 ಮಾತ್ರ ಭರ್ತಿಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next