ಮಾಸ್ಕೊ: ಉಕ್ರೇನನ್ನು ಬೀದಿಪಾಲು ಮಾಡಲು ರಷ್ಯಾ ಸಂಪೂರ್ಣ ಹೋರಾಟ ಮಾಡುತ್ತಿದೆ. ಹಾಗಾಗಿ ಹೆಚ್ಚೆಚ್ಚು ಸೈನಿಕರನ್ನು ದೇಶಾದ್ಯಂತ ಒಗ್ಗೂಡಿಸುತ್ತಿದೆ. ಇದರ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸೇನಾ ಜಮಾವಣೆ ಪಡೆಯಲ್ಲಿದ್ದ ಅಧಿಕಾರಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಇದನ್ನು ಕೊಲೆಯೆಂದು ಪೊಲೀಸರು ಹೇಳಿಕೊಂಡಿದ್ದರೂ, ಆತ್ಮಹತ್ಯೆಯ ಸಾಧ್ಯತೆಯನ್ನೂ ಅಲ್ಲಗಳೆದಿಲ್ಲ. ಲೆಫ್ಟಿನೆಂಟ್ ಕರ್ನಲ್ ರೋಮನ್ ಮಾಲಿಕ್ (49) ಸಾವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಪುಟಿನ್ ಸೂಚನೆ ಮೇರೆಗೆ ಪ್ರಸ್ತುತ ರಷ್ಯಾದ್ಯಂತ ಸೇನೆಗೆ ಜನರನ್ನು ಬಲಾತ್ಕಾರವಾಗಿ ಸೇರಿಸಲಾಗುತ್ತಿದೆ. ರಷ್ಯಾದಲ್ಲಿ ಪ್ರತಿಭಟನೆಗಳೂ ತೀವ್ರವಾಗಿ ನಡೆಯುತ್ತಿವೆ. ಉದ್ಯೋಗಿಗಳನ್ನು ದಿಢೀರನೆ ಎತ್ತಾಕಿಕೊಂಡು ಹೋಗುವ ಪ್ರಕ್ರಿಯೆಗಳೂ ಸೇನೆಯಲ್ಲಿ ನಡೆಯುತ್ತಿವೆ!
ಇದನ್ನು ವಿರೋಧಿಸಿಯೇ ಮಾಲಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ತರ್ಕವೂ ಇದೆ.