Advertisement
ನೀನು ಮುಂದೆ ಏನಾಗ್ತೀಯ?ಹಿಂದೆ ಮಕ್ಕಳನ್ನು ಈ ರೀತಿ ಕೇಳಿದರೆ, ನಾನು ಪೊಲೀಸ್ ಆಗ್ತೀನಿ, ಸಬ್‌ಇನ್‌ಸ್ಪೆಕ್ಟರ್ ಆಗ್ತೀನಿ ಅಂತೆಲ್ಲ ಹೇಳ್ಳೋರು. ಈಗ ಈ ರೀತಿ ಹೇಳ್ಳೋರ ಸಂಖ್ಯೆ ಕಡಿಮೆ ಇರಬಹುದು, ಆದರೂ, ಪೊಲೀಸ್ ಆಗಿ ಸೇವೆ ಸಲ್ಲಿಸುಲು ಈಗಲೂ ಅದ್ಬುತ ಅವಕಾಶವಿದೆ.
Related Articles
Advertisement
ಹಾಗಂತ ಎಲ್ಲವನ್ನೂ ಹಾಗೇ ಮಾಡುವುದಿಲ್ಲ. ಪೊಲೀಸ್ ಉಪನಿರೀಕ್ಷಕರ ( ಸಬ್‌ಇನ್‌ಸ್ಪೆಕ್ಟರ್) ಹುದ್ದೆಯಲ್ಲಿ ಶೇ. 60ರಷ್ಟು ನೇರ ನೇಮಕಾತಿಯ ವ್ಯಾಪ್ತಿಯಲ್ಲಿರುತ್ತದೆ. ಶೇ.30ರಷ್ಟು ಸಹಾಯಕ ಸಬ್‌ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವವರನ್ನು ಜೇಷ್ಠತೆ ಆಧಾರದ ಮೇಲೆ ಈಹುದ್ದೆಗೆ ಆಯ್ಕೆ ಮಾಡುತ್ತಾರೆ. ಈ ಅಸಿಸ್ಟೆಂಟ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳಿಗೆ, ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ಕೊಡುತ್ತಾರೆ. ಹೀಗೆ, ಸೇವಾ ಜೇಷ್ಠತೆಯ ಆಧಾರದ ಬಡ್ತಿ ಪಡೆಯುವ ಹುದ್ದೆಗಳು ಹೆಚ್ಚಿವೆ.
ಪೊಲೀಸ್ ಪೇದೆ ಮತ್ತು ಸಬ್‌ಇನ್‌ಸ್ಪೆಕ್ಟರ್ ಎರಡೂ ಹುದ್ದೆಗಳಿಗೆ ಲಿಖೀತ ಪರೀಕ್ಷೆ ಮೂಲಕ ಆಯ್ಕೆ ಮಾಡುತ್ತಾರೆ. ಆಯ್ಕೆ ಮಾಡಲು ಪ್ರತ್ಯೇಕ ಸಮಿತಿ ಇರುತ್ತದೆ. ಇದರಲ್ಲಿ ಸರ್ಕಾರ ನಾಮ ನಿರ್ದೇಶನ ಮಾಡಿದ ಪೊಲೀಸ್ ಅಡಿಷನಲ್ ಡೈರಕ್ಟರ್ ಜನರಲ್ ಇನ್‌ಸ್ಪೆಕ್ಟರ್ (ಆಡಳಿತ) ಪೊಲೀಸ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್, ಜೊತೆಗೆ ಒಬ್ಬ ಮನಃಶಾಸ್ತ್ರಜ್ಞರು, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಈ ಆಯ್ಕೆ ಸಮಿತಿಯಲ್ಲಿರುತ್ತಾರೆ. ಪೇದೆಗಳ ಆಯ್ಕೆಯನ್ನೂ ಕೂಡ ಆಯ್ಕೆ ಸಮಿತಿಯೇ ಮಾಡುವುದು.
ಇದರಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಪೊಲೀಸ್ ಕಮೀಷನರೇಟಿನ ಕೇಂದ್ರ ಕಚೇರಿಯ ಡೆಪ್ಯುಟಿ ಕಮೀಷನರ್, ಎಸ್‌ಪಿ. ರೈಲ್ವೆ- ಇವರು ಆಯ್ಕೆಯ ಸಮಿತಿಯ ಅಧ್ಯಕ್ಷರು, ಡಿಜಿ ಮತ್ತು ಐಜಿಪಿ ಅವರಿಂದ ನಾಮ ನಿರ್ದೇಶಿತರಾದ ಜಿಲ್ಲೆಯ ಡಿಸಿಪಿ ಕೂಡ ಇದರ ಸದಸ್ಯರಾಗಿರುತ್ತಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪೇದೆಗಳನ್ನು ಕೆ.ಆಸ್.ಆರ್.ಪಿ ಬೆಟ್ಯಾಲಿಯನ್ ಕಮಾಂಡೆಂಟರ್ ಆಯ್ಕೆ ಮಾಡುತ್ತಾರೆ. ಎಲ್ಲವೂ ಪರೀಕ್ಷೆ ಮೂಲಕವೇ ಆಯ್ಕೆ ಆಗುವುದರಿಂದ ಸಾಮಾನ್ಯ ಜ್ಞಾನ ಗಮನ ಕೊಡಬೇಕು. ಲಿಖೀತ ಹಾಗೂ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಬಹಳ ಮುಖ್ಯವಾಗಿರುತ್ತದೆ.
ಕಾನ್ಸ್ಟೇಬಲ್ಕಾನ್ಸ್ಟೆàಬಲ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣ, ಪಿಯುಸಿ ಅನುತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು. ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಡಿಗ್ರಿ ಆಗಿರಬೇಕು. ಕಾನ್‌ಸ್ಟೇಬಲ್ ಹುದ್ದೆಗೆ ಎರಡು ರೀತಿಯ ಆಯ್ಕೆ ನಡೆಯುತ್ತದೆ. ಶೇ. 85ರಷ್ಟು ನೇರ ನೇಮಕಾತಿಯ ಮೂಲಕ ಆಯ್ಕೆ ನಡೆದರೂ, ಶೇ. 15ರಷ್ಟು ಸಿಆರ್‌ಡಿಎ ನಲ್ಲಿ ಹತ್ತು ವರ್ಷಗಳ ಕಾಲ ಕ್ರಮಬದ್ಧ ಸೇವೆಯನ್ನು ಪೂರ್ಣಗೊಳಿಸಿದವರನ್ನು ನಿಯುಕ್ತಿ ಮಾಡುವ ಮೂಲಕ ಪೋಸ್ಟ್ ತುಂಬಿಸುತ್ತಾರೆ. ಮಹಿಳೆಯರಿಗೂ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆ ಇದೆ. ಅದರಲ್ಲಿ ಶೇ. 60ರಷ್ಟು ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಉಳಿದ ಶೇ.40ರಷ್ಟು ಸೇವಹಿರಿತನದ ಆಧರದ ಮೇಲೆ. ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನೂ ಇದೇ ಮಾದರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ತರಬೇತಿ
ಅಲ್ಲದೇ, ಸಶಸ್ತ್ರ ಮೀಸಲು ಪೊಲೀಸ್ ಉಪನಿರೀಕ್ಷಕರ ಹುದ್ದೆಯನ್ನು ಶೇ. 60ರಷ್ಟು ನೇರ ನೇಮಕಾತಿ ಮೂಲಕ, ಉಳಿದಿದ್ದನ್ನು ಸೇವಾ ಹಿರಿತನ ಆಧಾರದ ಮೇಲೆ ಮುಂಬಡ್ತಿಯಿಂದ ತುಂಬಲಾಗುತ್ತದೆ. ಯಾವುದೇ ಹುದ್ದೆಗೆ ಆಯ್ಕೆಯಾಗಬೇಕಾದರೆ ಲಿಖೀತ ಪರೀಕ್ಷೆಯಲ್ಲಿ ಪಡೆಯುವ ಮಾರ್ಕ್ಸ್ ಬಹಳ ಮುಖ್ಯ. ಇದರ ಜೊತೆಗೇ ದೈಹಿಕ ಪರೀಕ್ಷೆಯಲ್ಲೂ ಒಳ್ಳೆಯ ಅಂಕಗಳನ್ನು ಪಡೆಯಬೇಕಾಗುತ್ತದೆ. ಕೆಲಸಕ್ಕೆ ಸೇರಿದಾಕ್ಷಣ ಫೀಲ್ಡಿಗೆ ಇಳಿಸುವುದಿಲ್ಲ. ಭಾವಿ ಎಸ್‌ಐ/ ಕಾನ್‌ಸ್ಟೇಬಲ್‌ಗಳಿಗೆ ಇಲಾಖೆ ವತಿಯಿಂದಲೇ ತರಬೇತಿ ನೀಡುತ್ತಾರೆ. ಮೈಸೂರು, ಬೆಂಗಳೂರು, ಚನ್ನಪಟ್ಟಣ ಮುಂತಾದ ಕಡೆ ಪ್ರಮುಖ ತರಬೇತಿ ಕೇಂದ್ರಗಳಿವೆ. ಮೈಸೂರಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಭೂಮಾಪನ, ನಕ್ಷೆ ತಯಾರಿಕೆ, ರೋಗಿಗಳ ರವಾನೆ ಮುಂತಾದವುಗಳ ಬಗ್ಗೆ, ಆಯಾ ಶ್ರೇಣಿಗಳಿಗೆ ತಕ್ಕಂತೆ ತರಬೇತಿ ನೀಡುತ್ತಾರೆ. ಉಪಾಧೀಕ್ಷಕರಿಗೆ ತರಬೇತಿಯ ಅವಧಿಯಲ್ಲಿ ಕಾನೂನು ಮತ್ತು ಇತರೆ ವಿಷಯಗಳಲ್ಲಿ ಪ್ರತ್ಯೇಕ ತರಗತಿಗಳು ಇರುತ್ತವೆ. ಡ್ರಿಲ್, ಪರೇಡ್‌ಗಳ ತರಬೇತಿಯನ್ನೂ ಇಲ್ಲಿ ನೀಡಲಾಗುತ್ತದೆ. ತರಬೇತಿಯ ಅವಧಿ ಆಯಾ ಹುದ್ದೆಗಳ ಶ್ರೇಣಿಗಳ ಮೇಲೆ ನಿಗದಿಯಾಗುತ್ತದೆ. ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ನೇಮಕವಾದವರು ಆಯಾ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಾರೆ. ಸಿವಿಲ್ ಕಾನ್‌ಸ್ಟೆàಬಲ್‌ಗಳ ನೇಮಕಾತಿ ಆದ ಕೂಡಲೇ ಮೂಲ ತರಬೇತಿಯನ್ನು ಚನ್ನಪಟ್ಟಣದಲ್ಲಿ ನೀಡಲಾಗುತ್ತದೆ. ಉಪನಿರೀಕ್ಷಕರಾಗಿ ನೇಮಕ ಹೊಂದಿದ ಕೂಡಲೇ ಒಂದು ವರ್ಷದವರೆಗೆ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಾರೆ. ಕುತೂಹಲವಾದ ಇನ್ನೊಂದು ವಿಚಾರ ಅಂದರೆ, ಪೊಲೀಸ್ ಇಲಾಖೆಯಲ್ಲಿ ಮ್ಯುಸಿಷಿಯನ್ ಹುದ್ದೆ ಕೂಡ ಇದೆ. ಇದನ್ನು ನೇರ ನೇಮಕಾತಿಯ ಮೂಲಕ ತುಂಬುತ್ತಾರೆ. ಪರೀಕ್ಷೆ ಹೀಗೆ…
ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ, ರಿಟನ್ ಎಕ್ಸಾಮ್, ದೈಹಿಕ ಪರೀಕ್ಷೆ , ತಾಳ್ಮೆ ಪರೀಕ್ಷೆ ಕೊನೆಗೆ
ಸಂದರ್ಶನ- ಹೀಗೆ ನಾಲ್ಕು ಹಂತಗಳಿವೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ -ಸಾಮಾನ್ಯ ಜ್ಞಾನ ಮತ್ತು ಮೆಂಟಲ್ ಎಬಿಲಿಟಿ ಎನ್ನುವ ಎರಡು ರೀತಿಯ ಪರೀಕ್ಷೆಗಳಿರುತ್ತದೆ. ಇದಕ್ಕೆ ಒಂದು ಗಂಟೆಯಲ್ಲಿ ಉತ್ತರಿಸಬೇಕು. ಉತ್ತರ ತಪ್ಪಾದರೆ ಗಳಿಸಿದ ಅಂಕದಲ್ಲಿ ಖೋತಾ ಆಗುತ್ತದೆ. ಸಬ್‌ಇನ್‌ಸ್ಪೆಕ್ಟರ್ ಪರೀಕ್ಷೆಯಲ್ಲಿ ಒಟ್ಟು 200 ಅಂಕದ, ಎರಡು ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಮೊದಲ ಪತ್ರಿಕೆಯಲ್ಲಿ ಪ್ರಬಂಧ, ಭಾಷಾಂತರ, ಎರಡನೇ ಪ್ರಶ್ನೆ ಪತ್ರಿಕೆಯಲ್ಲಿ ಬೌದ್ಧಿಕ ಸಾಮರ್ಥ್ಯ ಹಾಗೂ ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತದೆ. ಹೆಚ್ಚಿನ ಮಾಹಿತಿಗೆ – https://www.ksp.gov.in ಕೆ. ಜಿ