ಶಿರ್ವ: ತಾಂತ್ರಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಜ್ಞಾನ ಪಡೆದು ಜೀವನದಲ್ಲಿ ಉತ್ತಮ ಸಾಧಕರಾಗ ಬಹುದು. ವಿದ್ಯಾರ್ಥಿಗಳು ಇತರರ ಜತೆಗೆ ತಮ್ಮನ್ನು ಹೋಲಿಸಿಕೊಳ್ಳುವ ಬದಲು ತಮ್ಮಲ್ಲಿರುವ ಸುಪ್ತ ಪ್ರತಿಭೆ
ಹೊರತರಬೇಕು ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಮಾಹೆಯ ಮಾಜಿ ಕುಲಪತಿ ಡಾ| ಬಿ.ಎಂ. ಹೆಗ್ಡೆ ಮಾತನಾಡಿ ಶಿಕ್ಷಣ ಉತ್ತಮ ಚಾರಿತ್ರÂ ನಿರ್ಮಾಣವನ್ನು ಮಾಡುವ ಸಾಧನ ಎಂದರು. ಗೌರವ ಅತಿಥಿ ಬೆಂಗಳೂರಿನ ಯುಟಿಲಿಟಿ ಪವರ್ ಸೊಲ್ಯುಷನ್ಸ್‌ನ
ಹಿರಿಯ ಪ್ರಬಂಧಕ ಡಾ| ಕಣ್ಣನ್ ಮಾತನಾಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವವಲ್ಲಭತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಪಿ. ರಾಮದಾಸ್ ಅವರನ್ನು ವಿಶ್ವವಲ್ಲಭತೀರ್ಥ ಶ್ರೀಪಾದರು ಸಮ್ಮಾನಿಸಿದರು. ಸೈಕ್ಲಿಂಗ್‌ನಲ್ಲಿ ವಿಶೇಷ ಸಾಧನೆ ಮಾಡಿದ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ನಾರಾಯಣ್ ನಾಯಕ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಸ್ಥೆಯ ಅತ್ಯುನ್ನತ ಗೌರವ ಶ್ರೀ ಮಧ್ವ ವಾದಿರಾಜ ಪ್ರಶಸ್ತಿಯನ್ನು ಸಿವಿಲ್ ಎಂಜಿನಿಯರಿಂಗ್‌ವಿಭಾಗದ ಸುಮಂತ್ ಮತ್ತು ಗಣಕಯಂತ್ರ ವಿಭಾಗದ ಸಮನ್ವಿತ ಭಾಗವತ್ ಅವರಿಗೆ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರದಾನ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷ ಪಿ. ಶ್ರೀನಿವಾಸ ತಂತ್ರಿ, ಸದಸ್ಯರಾದ ಎಚ್.ವಿ. ಗೌತಮ, ಶ್ಯಾಮ್‌ಸುಂದರ್, ವಿದ್ಯಾರ್ಥಿ ಸಂಘದ ಆದರ್ಶ್ ಎ. ಪ್ರಭು ವೇದಿಕೆಯಲ್ಲಿದ್ದರು. ಡಾ|ವಾಸುದೇವ, ಪ್ರೊ| ರವಿನಾರಾಯಣ ರಾವ್, ಪ್ರೊ| ಅರುಣ್ ಉಪಾಧ್ಯಾಯ ಮತ್ತು ಪ್ರೊ| ಆನಂದ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು.
ಉಪನ್ಯಾಸಕ ಡಾ| ಬಾಲಚಂದ್ರ ಆಚಾರ್ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿ, ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ| ಶ್ರೀನಿವಾಸ ಮತ್ತು ಪ್ರೊ| ರವಿಪ್ರಭಾ ವಿಜೇತರ ಪಟ್ಟಿ ವಾಚಿಸಿದರು.
ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ವರದಿ ವಾಚಿಸಿದರು. ಕಾರ್ಯ ದರ್ಶಿ ರತ್ನಕುಮಾರ್ ಸ್ವಾಗತಿಸಿದರು. ಪೂಜಾ ನಾಯರ್ ಮತ್ತು ಮಹೇಶ್ ಆಚಾರ್ಯ ನಿರೂಪಿಸಿ, ಶರತ್ ಕುಮಾರ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.