Advertisement

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

01:59 AM Apr 28, 2024 | Team Udayavani |

ಬ್ಯೂನಸ್‌ಐರಿಸ್‌: ಯೌವನ ಮಾತ್ರವೇ ಸೌಂದರ್ಯವನ್ನು ಬಿಂಬಿಸಬಲ್ಲದು ಎನ್ನುವ ವಾದಗಳಿಗೆ ಅರ್ಜೆಂಟೀನಾದ ಮಹಿಳೆ ಅಲೆಗ್ಸಾಂಡ್ರಾ ಮಾರಿಸಾ ರೋಡ್ರಿಗಸ್‌ ಸಡ್ಡು ಹೊಡೆದಿದ್ದು, ತಮ್ಮ 60ನೇ ವಯಸ್ಸಿನಲ್ಲಿ “ಮಿಸ್‌ ಯೂನಿವರ್ಸ್‌ ಬ್ಯೂನಸ್‌ ಐರಿಸ್‌’ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಮಿಸ್‌ ಯೂನಿವರ್ಸ್‌ ಸ್ಪರ್ಧೆಯ ವಯಸ್ಸಿನ ಸಂಕೋಲೆಗಳು ಮುರಿದು “ಏಜ್‌ ಈಸ್‌ ಜಸ್ಟ್‌ ಎ ನಂಬರ್‌’ ಎಂಬುದನ್ನು ನಿರೂಪಿಸಿದ್ದಾರೆ.

Advertisement

ವೃತ್ತಿಯಲ್ಲಿ ವಕೀಲೆ ಮತ್ತು ಪತ್ರಕರ್ತೆ ಆಗಿರುವ ಮಾರಿಸಾ ಅಪಾರ ಶ್ರಮ, ಜೀವನೋತ್ಸಾಹದೊಂದಿಗೆ ತಮ್ಮ ಸೌಂದರ್ಯ ಕಾಯ್ದಿಟ್ಟುಕೊಂಡಿದ್ದಾರೆ. ಅಲ್ಲದೇ, “ಮಿಸ್‌ ಯೂನಿವರ್ಸ್‌ ಬ್ಯೂನಸ್‌ ಐರಿಸ್‌’ ಎಂಬ ಖ್ಯಾತಿಗೆ ಪಾತ್ರ ರಾಗಿದ್ದಾರೆ. ಮೇನಲ್ಲಿ ಅರ್ಜೆಂಟೀನಾ ವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸುವ ಸುಂದರಿಯರ ರಾಷ್ಟ್ರ ಮಟ್ಟದ ಕಡೆಯ ಹಂತದ ಆಯ್ಕೆ ಇದೆ. ಅದರಲ್ಲಿ ಮಾರಿಸಾ ವಿಜೇತರಾದರೆ ಸೆ.28ರ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಅರ್ಜೆಂಟೀನಾವನ್ನು ಪ್ರತಿನಿಧಿಸಲಿದ್ದಾರೆ. 18 ರಿಂದ 28ರ ವಯಸ್ಸಿನವರಷ್ಟೇ ಭಾಗವಹಿಸಬೇಕು ಎಂಬ ನಿಯಮವನ್ನು ಕಳೆದ ವರ್ಷ ತೆಗೆದುಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next