Advertisement

ಸೌಂದರ್ಯ ಸಮ್ಮರ್‌

12:30 AM Mar 13, 2019 | Team Udayavani |

ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಕಾಲಿಡುವುದೇ ಬೇಡಪ್ಪಾ ಅನ್ನಿಸುತ್ತದೆ. ಹಾಗಂತ ಒಳಗೇ ಕೂರಲಾದೀತೆ? ಬಿಸಿಲಲ್ಲಿ ತಿರುಗಾಡುವುದು ಅನಿವಾರ್ಯವಾದಾಗ ಮೈ ಕಾಂತಿಯ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಕಾಳಜಿ ಎಂದರೆ ಬ್ಯೂಟಿ ಪಾರ್ಲರ್‌ಗೆ ಹೋಗುವುದಲ್ಲ. ದಿನನಿತ್ಯ ಮಾಡಿಕೊಳ್ಳುವ ಮೇಕಪ್‌ ಕಡೆಗೆ ಗಮನ ವಹಿಸುವುದು.
1. ಬಿಸಿಲಿರುವಾಗ ಗಾಢ ಮೇಕಪ್‌, ಅತಿಯಾದ ಕ್ರೀಮ್‌ ಬಳಕೆ ಬೇಡ. ಇದರಿಂದ ಅನುಕೂಲಕ್ಕಿಂತ ಹಾನಿಯೇ ಹೆಚ್ಚು. ಕ್ರೀಮ್‌ಗಿಂತ ಟಾಲ್ಕಂ ಪೌಡರ್‌ ಬಳಸಿದರೆ ಮುಖ ಹೆಚ್ಚಾಗಿ ಬೆವರುವುದಿಲ್ಲ. 

Advertisement

2. ಬಿಸಿಲಲ್ಲಿ ಹೊರಗೆ ಹೋಗುವಾಗ ಕೊಡೆ ನಿಮ್ಮ ಜೊತೆಗಿರಲಿ. ಕಪ್ಪು ಬಣ್ಣದ ಕೊಡೆಗಿಂತ ಬಣ್ಣದ ಕೊಡೆಗಳು ಒಳ್ಳೆಯದು.

3. ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್‌ ಲೋಷನ್‌ ಬಳಸಿ. 

4. ಸ್ಲಿàವ್‌ಲೆಸ್‌ ಬಟ್ಟೆ ಧರಿಸಿ ಅಡ್ಡಾಡಿದರೆ ಮೈ ಚರ್ಮ ಕಪ್ಪಾಗುವ ಅಪಾಯ ಹೆಚ್ಚು.

5. ಬಿಸಿಲಿನಿಂದ ಬಂದ ತಕ್ಷಣ ರೋಸ್‌ ವಾಟರ್‌ನಲ್ಲಿ ಹತ್ತಿ ಅದ್ದಿ, ಮುಖ ಹಾಗೂ ಕುತ್ತಿಗೆಗೆ ಹಚ್ಚಿ, ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಬಿಸಿಲು ಮತ್ತು ಧೂಳಿನಿಂದ ಉಂಟಾಗುವ ಚರ್ಮದ ಸಮಸ್ಯೆಯನ್ನು ತಡೆಯಬಹುದು. 

Advertisement

6. ಹಾಲು, ಕಡಲೆ ಹಿಟ್ಟು, ಅರಿಶಿನ ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ, ಅದರ ಮೇಲೆ ಸಣ್ಣಗೆ ತುರಿದ ಸೌತೇಕಾಯಿ ಮತ್ತು ಕ್ಯಾರೆಟ್‌ನ್ನು ಸವರಿ, 15 ನಿಮಿಷದ ನಂತರ ಮುಖ ತೊಳೆದರೆ, ಚರ್ಮ ಕಾಂತಿ ಪಡೆದುಕೊಳ್ಳುತ್ತದೆ. 

7. ರಾತ್ರಿ ಮಲಗುವಾಗ ಹಾಲಿನ ಕೆನೆಗೆ ಲಿಂಬೆ ರಸ ಬೆರೆಸಿ ಹಚ್ಚಿ ಮುಖ ತೊಳೆಯಿರಿ. 

8. ಬಿಸಿಲಿನಲ್ಲಿ ನೀರಿನ ಅಂಶ ಕಡಿಮೆಯಾದರೆ ದೇಹದ ಉಷ್ಣಾಂಶ ಹೆಚ್ಚುತ್ತದೆ. ಆಗ ಚರ್ಮ ಒಣಗಿದಂತೆ ಕಾಣುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚೆಚ್ಚು ದ್ರವರೂಪದ ಆಹಾರ ಸೇವಿಸಿ. 

9.  ಬೇಸಿಗೆಯಲ್ಲಿ ತಿಳಿ ಬಣ್ಣದ ಹಾಗೂ ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಇವು ಶಾಖವನ್ನು ಹೀರಿಕೊಂಡು ಶರೀರವನ್ನು ಸಮ ಸ್ಥಿತಿಯಲ್ಲಿಡುತ್ತವೆ. 

10. ಹಸಿರು ತರಕಾರಿ, ಸೊಪ್ಪು, ನೆನೆಸಿದ ಕಾಳುಗಳು, ಹಣ್ಣಿನ ಜ್ಯೂಸ್‌ ಸೇವನೆ, ರಾಗಿ ಹಿಟ್ಟನ್ನು ರಾತ್ರಿ ನೀರಿನಲ್ಲಿ ಕುದಿಸಿಟ್ಟು, ಬೆಳಗ್ಗೆ ಮಜ್ಜಿಗೆ ಬೆರೆಸಿ ಕುಡಿಯುವುದರಿಂದ ಬೇಸಿಗೆಯಲ್ಲಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದು. 

ಶಿವಲೀಲಾ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next