*
1. ಒಂದು ಕ್ಯಾರೆಟ್‌ನ್ನು ಕತ್ತರಿಸಿ ಮಿಕ್ಸರ್‌ನಲ್ಲಿ ಅರೆದು ತದನಂತರ ತೆಳ್ಳಗಿನ ಬಟ್ಟೆಯಲ್ಲಿ ಸೋಸಿ ಜ್ಯೂಸ್ (ರಸ) ತೆಗೆಯಬೇಕು. ಈ ಕ್ಯಾರೆಟ್ ರಸಕ್ಕೆ 2 ಚಮಚ ಜೇನುತುಪ್ಪ , 20 ಹನಿ ಬಾದಾಮಿ ತೈಲ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ತುದಿ ಬೆರಳಿನಿಂದ ಮೃದುವಾಗಿ ಮಾಲೀಶು ಮಾಡಬೇಕು. 1/2 ಗಂಟೆಯ ಬಳಿಕ ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಟರ್ಕಿ ಟವೆಲ್‌ನಿಂದ ಮುಖಕ್ಕೆ ಶಾಖ ನೀಡಬೇಕು. ಹೀಗೆ 5-6 ಬಾರಿ ಶಾಖ ನೀಡಿದ ನಂತರ ತಣ್ಣೀರಿನಲ್ಲಿ ಅದ್ದಿದ ಟವೆಲ್‌ನಿಂದ ಮುಖವನ್ನು ತೊಳೆಯಬೇಕು. ಕ್ಯಾರೆಟ್‌ನ ನೆರಿಗೆನಿವಾರಕ ಫೇಸ್‌ಮಾಸ್ಕ್ ವಯಸ್ಸಾದಂತೆ ಅಥವಾ ಚರ್ಮ ಒಣಗಿದಾಗ ಅಧಿಕ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೆರಿಗೆ ನಿವಾರಣೆಗೆ ಕ್ಯಾರೆಟ್‌ನಿಂದ ಈ ವಿಧಾನದಲ್ಲಿ ಫೇಸ್ ಮಾಸ್ಕ್ ಬಳಸಿದರೆ ಹಿತಕರ.
Advertisement
2. ಕ್ಯಾರೆಟ್‌ನ ಹೊರ ಸಿಪ್ಪೆ ತೆಗೆದು ಕತ್ತರಿಸಿ, ಹಾಲಿನಲ್ಲಿ ಮೃದುವಾಗುವವರೆಗೆ ಬೇಯಿಸಬೇಕು. ತದನಂತರ ಚೆನ್ನಾಗಿ ಮಿಕ್ಸರ್‌ನಲ್ಲಿ ಅರೆದು, ಅದಕ್ಕೆ ಮೂರು ಚಮಚ ಜೇನು, ಮೂರು ಚಮಚ ಆಲಿವ್‌ತೈಲ ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರಕ್ಕೆ 2-3 ಬಾರಿ ಈ ಫೇಸ್ ಮಾಸ್ಕ್ ಬಳಸಿದರೆ ನೆರಿಗೆಗಳು ನಿವಾರಣೆಯಾಗಿ ಮೊಗದ ಕಾಂತಿ, ಅಂದ ವರ್ಧಿಸುತ್ತದೆ. ಕ್ಯಾರೆಟ್‌ನ ಪೀಲ್ ಆಫ್ ಫೇಸ್ ಮಾಸ್ಕ್ ಮುಖದ ಕೊಳೆ, ಎಣ್ಣೆಯ ಪಸೆ, ಜಿಡ್ಡು , ರಂಧ್ರಗಳ ನಿವಾರಣೆಗೆ ಹಾಗೂ ತೈಲಯುಕ್ತ ತ್ವಚೆಯವರಿಗೆ ಈ ಮಾಸ್ಕ್ ಹಿತಕರ.