Advertisement
ಪಾರ್ಕಿಂಗ್ ನಿಂದ ಸಮಸ್ಯೆಶಿರಾಡಿ ಘಾಟಿ ಕಾಮಗಾರಿ ಪ್ರಯುಕ್ತ ನಿರ್ಬಂಧ ಹೇರಿರುವುದರಿಂದ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ವಾಹನಗಳನ್ನು ರಸ್ತೆಬದಿ ನಿಲ್ಲಿಸುವುದರಿಂದ ಆಗಮಿಸುವ ಇತರ ಆಗಲ ಕಿರಿದಾದ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಜಾಗವಿದ್ದು, ಅಲ್ಲಿ ವಾಹನ ನಿಲ್ಲಿಸಿದರೆ ಯಾರಿಗೂ ಸಮಸ್ಯೆ ಉಂಟಾಗುವುದಿಲ್ಲ.
ನೀರಿನಲ್ಲಿ ಆಡುವಾಗ ಎಚ್ಚರಿಕೆ
ಇನ್ನೇನು ಮಳೆಗಾಲ ಆರಂಭಗೊಂಡು ಝರಿ, ತೊರೆ ತುಂಬಲಿದ್ದು, ಪ್ರವಾಸಿಗರು ನೀರಿನಲ್ಲಿ ಆಟವಾಡುವ ಮುನ್ನ ಎಚ್ಚರಿಕೆ ವಹಿಸಬೇಕಿದೆ. ಕಲ್ಲುಗಳು ಜಾರಿದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸೆಲ್ಫಿ ತೆಗೆಯುವಾಗ ಇರಲಿ ಎಚ್ಚರ
ದೃಶ್ಯ ಸೆರೆಹಿಡಿಯುವಾಗ, ಸೆಲ್ಫಿ ತೆಗೆಯುವ ವೇಳೆ ಎಚ್ಚರ ವಹಿಸಬೇಕಾಗಿದೆ. ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಾಗುವಾಗ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಎತ್ತರದ ಕಟ್ಟೆಗಳಲ್ಲಿ ನಿಂತು ಪೋಟೋ ಕ್ಲಿಕ್ಕಿಸುವ ವೇಳೆ ಕಾಲು ಜಾರಿ ಬೀಳುವ ಸಾಧ್ಯತೆ ಇದೆ.
Related Articles
ವಾಹನ ಚಾಲನೆ ವೇಳೆಯೂ ರಸ್ತೆ ನಿಯಮ ಪಾಲನೆ ಮಾಡಬೇಕಿದೆ. ತಿರುವುಗಳು ಹೆಚ್ಚಾಗಿರುವ ಕಾರಣ ವಾಹನ ಸವಾರರು ಸಂಯಮದಿಂದ ವಾಹನ ಚಾಲನೆ ಮಾಡಬೇಕಿದೆ. ಓವರ್ ಟೇಕ್ ಮಾಡುವ ವೇಳೆಯೂ ಎಚ್ಚರ ವಹಿಸಬೇಕಿದೆ. ಸ್ವಲ್ಪ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
Advertisement
ಎಸೆಯದಿರಿ ಕಸ ಖಾದ್ಯ ಸವಿದು ಕಸ ಎಸೆಯುವುದರಿಂದ ಕಸದ ರಾಶಿ ಪ್ರಕೃತಿ ಸೌಂದರ್ಯ ಹಾಳು ಮಾಡುತ್ತಿದೆ. ಉತ್ತಮ ಪರಿಸರಕ್ಕಾಗಿ ಕಸ ಎಸೆಯದಿದ್ದಲ್ಲಿ ಉತ್ತಮ. ಮಾರ್ಗಸೂಚಿ
ಬಂಟ್ವಾಳದಿಂದ ಉಜಿರೆ ಮಾರ್ಗ ಸಂಪರ್ಕಿಸುವ ರಾ.ಹೆ. 234ರಲ್ಲಿ ಚಾರುಮುಡಿ ಘಾಟಿಯಿದೆ. ರಸ್ತೆಯಲ್ಲಿ ಸುಮಾರು 12 ಹೇರ್ ಪಿನ್ ತಿರುವುಗಳಿವೆ. ಮಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸುವ ರಸ್ತೆಯಲ್ಲಿ ಸಿಗುವ ಉಜಿರೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ಚಾರ್ಮಾಡಿ ಗ್ರಾಮದಿಂದ ಘಾಟಿ ರಸ್ತೆ ಆರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ. ಚಿಕ್ಕಮಗಳೂರು,ಚಿತ್ರದುರ್ಗ, ಹಾಸನ, ತುಮಕೂರು, ಬೆಂಗಳೂರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಸಾವಿರಾರು ಜನ ಈ ಘಾಟಿ ಮೂಲಕ ಆಗಮಿಸುತ್ತಾರೆ. ಪ್ರಕೃತಿ ಸೌಂದರ್ಯ ಅವಿಸ್ಮರಣೀಯ
ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆಂದು ಅಗಮಿಸಿದ್ದೇವೆ. ಜಲಪಾತ, ಹಸಿರು ಬೆಟ್ಟ ನೋಡಿ ಖುಷಿಯಾಯಿತು. ಕುಟುಂಬದವರು, ಮಕ್ಕಳು ನೋಡಿ ಆನಂದಿಸಿದ್ದಾರೆ. ಪ್ರಕೃತಿ ಸೌಂದರ್ಯ ಅವಿಸ್ಮರಣೀಯ.
– ಮಡಿವಾಳಪ್ಪ, ಉಪ್ಪಿನಬೆಟಗೇರಿ, ಧಾರವಾಡ