Advertisement

Beautiful Railway line: ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ದೂಧ್‌ಸಾಗರ್‌

12:54 AM Sep 24, 2024 | Team Udayavani |

ಹೊಸದಿಲ್ಲಿ: ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳನ್ನು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಪಟ್ಟಿ ಮಾಡಿದ್ದು, ಅದರಲ್ಲಿ ಕರ್ನಾಟಕದ ದೂಧ್‌ಸಾಗರ್‌ ಕೂಡ ಒಂದು ಎಂಬುದು ವಿಶೇಷ.

Advertisement

ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿರುವ ದೂಧ್‌ಸಾಗರ ಜಲಪಾತ ಈ ಎರಡೂ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ದೂಧ್‌ಸಾಗರ ಜಲಪಾತದ ಎದುರು ರೈಲು ಹಾದು ಹೋಗುವಾಗ ಮನಮೋಹಕ ದೃಶ್ಯ ಪ್ರಯಾಣಿಕರ ಕಣ್ಮನ ಸೆಳೆಯುತ್ತದೆ. ಈ ರೈಲು ಮಾರ್ಗ ಸೇರಿದಂತೆ ರೈಲ್ವೇ ಸಚಿವರು 6 ರೈಲು ಮಾರ್ಗಗಳನ್ನು ಪಟ್ಟಿ ಮಾಡಿದ್ದಾರೆ.

ಇದರಲ್ಲಿ ಗುಜರಾತ್‌ನ ಕಛ್‌  ಜಿಲ್ಲೆಯ ರಣ್‌ ಜವುಗು ಪ್ರದೇಶದಲ್ಲಿ ಹಾದು ಹೋಗುವ ನಮೋ ಭಾರತ್‌ ರ್ಯಾಪಿಡ್‌ ರೈಲು, ನೀಲಗಿರಿ ಪರ್ವತದಲ್ಲಿ ಹಾದುಹೋಗುವ ರೈಲುಗಳು, ಜಮ್ಮು-ಕಾಶ್ಮೀರದ ಬನಿಹಾಲ್‌ ಹಾಗೂ ಬಡ್ಗಾಮ್‌ ನಡುವಿನ ರೈಲು ಮಾರ್ಗ, ಕೇರಳ ಕರಾವಳಿಯಲ್ಲಿರುವ ಕಪ್ಪಿಲ್‌ ರೈಲು ಮಾರ್ಗ, ಹಿಮಾಲಯ ತಪ್ಪಲಿನ ಶಿಮ್ಲಾದಿಂದ ಕಲ್ಕಾಗೆ ತೆರಳುವ ಆಟಿಕೆ ರೈಲು ಮಾರ್ಗಗಳೂ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next